ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮಖಂಡಿಯಲ್ಲಿ ಅಂದು ಬಿ ಎಲ್ ಸಂತೋಷ್ ಹೇಳಿದ್ದೇನು, ಇಂದು ಆಗಿದ್ದೇನು?

|
Google Oneindia Kannada News

ಬಾಗಲಕೋಟೆ, ಜುಲೈ 24: ಕಳೆದ ಹದಿನಾಲ್ಕು ತಿಂಗಳಲ್ಲಿ ಹಲವು ಸುತ್ತಿನ ಪ್ರಯತ್ನದ ನಂತರ ದಕ್ಷಿಣಭಾರತದಲ್ಲಿ ಬಿಜೆಪಿಗೆ ಭಾಗ್ಯದ ಬಾಗಿಲು ತೆರೆಯಬೇಕು ಎನ್ನುವ ಯಡಿಯೂರಪ್ಪನವರ ಭಗೀರಥ ಪ್ರಯತ್ನ ಕೊನೆಗೂ ಯಶಸ್ಸಿನ ಹಂತಕ್ಕೆ ಬಂದು ನಿಂತಿದೆ.

ಕೆಲವು ದಿನಗಳ ಹಿಂದೆ ಬಿಜೆಪಿಯ ಕರ್ನಾಟಕ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ ಎಲ್ ಸಂತೋಷ್ ಅವರಿಗೆ ಅಮಿತ್ ಶಾ ಭಡ್ತಿ ನೀಡಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು.

ಬಿಎಸ್ವೈ ಮನೆಯಲ್ಲಿ ವಾಚ್ ಮ್ಯಾನ್ ಆಗೋಕೆ ರೆಡಿನಾ ಜಮೀರ್ ಭಾಯ್?ಬಿಎಸ್ವೈ ಮನೆಯಲ್ಲಿ ವಾಚ್ ಮ್ಯಾನ್ ಆಗೋಕೆ ರೆಡಿನಾ ಜಮೀರ್ ಭಾಯ್?

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡ ನಂತರ, ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ಬಿ ಎಲ್ ಸಂತೋಷ್ ಮಾಡಿದ ಭಾಷಣ ಈಗ ಮತ್ತೆ ಮುನ್ನಲೆಗೆ ಬರುತ್ತಿದೆ. ಯಾಕೆಂದರೆ, ಆ ಪ್ರಚಾರದ ವೇಳೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲಿದೆ ಎನ್ನುವ ಭವಿಷ್ಯವನ್ನು ನುಡಿದಿದ್ದರು.

Recalling Karnataka politics fate by BJP National Joint Secretary BL Santosh during LS campaign

ಒಂದು ವೋಟಿಗೆ ಎರಡು ಸರಕಾರ ಬೇಕೋ, ಬೇಡವೋ, ನೀವು ಬಿಜೆಪಿಗೆ ಮತ ನೀಡಿದರೆ ನರೇಂದ್ರ ಮೋದಿಯವರ ಸರಕಾರ ಸಿಗುತ್ತದೆ. ಅದಾದ ಒಂದು ತಿಂಗಳಲ್ಲಿ ಯಡಿಯೂರಪ್ಪನವರ ಸರಕಾರ ಸಿಗುತ್ತದೆ ಎಂದು ಬಿ ಎಲ್ ಸಂತೋಷ್, ಜಮಖಂಡಿ ಪ್ರಚಾರ ಸಭೆಯಲ್ಲಿ ಹೇಳಿದ್ದರು.

ಒಂದು ವೋಟಿಗೆ ಪಾರ್ಲಿಮೆಂಟಿನಲ್ಲೂ ನಮ್ಮದೇ ಸರಕಾರ, ವಿಧಾನಸೌಧದಲ್ಲೂ ನಮ್ಮದೇ ಸರಕಾರ ಎಂದು ಹೇಳಿರುವ ಸಂತೋಷ್, ಈ ವಿಚಾರವನ್ನು ಮನೆಮನೆಗೂ ಹೋಗಿ ಪ್ರಚಾರ ಮಾಡಿ ಎಂದು ಕಾರ್ಯಕರ್ತರು ಮತ್ತು ಜನರಲ್ಲಿ ಮನವಿ ಮಾಡಿದ್ದರು.

ಒಂದು ಸೀರೆ ತೆಗೆದುಕೊಂಡರೆ, ಎರಡು ಸೀರೆ ಖಚಿತ ಎನ್ನುವಂತೆ, ನಿಮ್ಮ ಒಂದು ವೋಟಿನಿಂದ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಬರಬಹುದು ಎಂದು ಸಂತೋಷ್ ಹೇಳಿದ್ದರು.

ನುಡಿದಂತೆ ನಡೆದ ಕುಮಾರಣ್ಣ, ಸರ್ಕಾರಿ ಕಾರು ಬಳಸಲೇ ಇಲ್ಲನುಡಿದಂತೆ ನಡೆದ ಕುಮಾರಣ್ಣ, ಸರ್ಕಾರಿ ಕಾರು ಬಳಸಲೇ ಇಲ್ಲ

ಕರ್ನಾಟಕದಲ್ಲಿ ಇಪ್ಪತ್ತು ಸ್ಥಾನಕ್ಕಿಂತ ಹೆಚ್ಚು ಸೀಟು ಬಿಜೆಪಿ ಗೆದ್ದರೆ, ಮೈತ್ರಿ ಸರಕಾರಕ್ಕೆ ತೊಂದರೆಯಾಗುತ್ತದೆ ಎನ್ನುವ ಮಾತನ್ನು ಕಾಂಗ್ರೆಸ್ಸಿನ ಹಿರಿಯ ನಾಯಕ ವೀರಪ್ಪ ಮೊಯ್ಲಿಯವರೂ ಹೇಳಿದ್ದಾರೆ. ನಮ್ಮ ಕಾರ್ಯಕರ್ತರು ಪ್ರಚಾರದ ವೇಳೆ ಈ ಅಂಶಗಳನ್ನೂ ಜನರಿಗೆ ತಿಳಿಸಬೇಕೆಂದು ಬಿ ಎಲ್ ಸಂತೋಷ್ ಮನವಿ ಮಾಡಿದ್ದರು.

English summary
Recalling Karnataka politics fate by BJP National Joint General Secretary BL Santosh during Lok Sabha campaign in Jamakhandi. In central we will Modi government and in next one month in Karnatak we will have BS Yeddyurappa government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X