ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್‌ ವಿರುದ್ಧ ಸ್ಪರ್ಧೆಗೆ ಸಿದ್ಧ: ಡಿವಿಎಸ್ ಗೌಡ ಘೋಷಣೆ

By Srinath
|
Google Oneindia Kannada News

Ready to contest against AICC Vice President Rahul Gandhi Anywhere- DV Sadananda Gowda
ಬೆಂಗಳೂರು, ಜ.21- ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಅವರ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲು ತಾವು ಸಿದ್ಧವಾಗಿರುವುದಾಗಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಘೋಷಿಸಿದ್ದಾರೆ.

ಪ್ರಧಾನಿ ಅಭ್ಯರ್ಥಿ ಪ್ರಕಟಕ್ಕೆ ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ಸನ್ನು ಕೆಣಕಿದ ಸದಾನಂದ ಗೌಡರು ಮೈಸೂರು, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಉತ್ತರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ದ ಸ್ಪರ್ಧಿಸಲು ಸಿದ್ಧ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸವಾಲು ಹಾಕಿದರು.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಾವೂ ಸೇರಿದಂತೆ 6 ಮಂದಿಯ ಹೆಸರು ಪ್ರಸ್ತಾಪವಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಿಂತ ಮಾಜಿ ಡಿಸಿಎಂ ಆಗಿದ್ದವರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. (ಬೆಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳು ಇಂತಿವೆ: ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಕೆಆರ್ ಪುರಂ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂ, ಪುಲಕೇಶಿ ನಗರ ಮತ್ತು ದಾಸರಹಳ್ಳಿ)

ಮೋದಿ ರ್‍ಯಾಲಿ ಫೆಬ್ರವರಿಯಲ್ಲಿ ನಾಲ್ಕು ಕಡೆ: ನರೇಂದ್ರ ಮೋದಿ ಅವರ ರ್‍ಯಾಲಿ ಫೆಬ್ರವರಿಯಲ್ಲಿ ಉಡುಪಿ, ದಾವಣಗೆರೆ, ಬೀದರ್, ಹುಬ್ಬಳ್ಳಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಲೋಕಸಭೆ ಚುನಾವಣೆಗೆ ರಾಜ್ಯದಿಂದ ಬಿಜೆಪಿ ಅಭ್ಯರ್ಥಿ ಪಟ್ಟಿ ಒಂದು ವಾರದಲ್ಲಿ ಬಿಡುಗಡೆ ಆಗಲಿದ್ದು, ಪಕ್ಷದ ಕೋರ್ ಕಮಿಟಿ ಎರಡು ದಿನದಲ್ಲಿ ಸಭೆ ಸೇರಿ ಅಂತಿಮಗೊಳಿಸಲಿದೆ 15 ರಿಂದ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದರು. ( ನಾನೊಬ್ಬ ಸೈನಿಕ, ನಿಮಗಾಗಿ ಏನು ಮಾಡಲೂ ಸಿದ್ಧ )

ಈ ವರ್ಷದ ಮೊದಲ ಅಧಿವೇಶನವನ್ನು ಕೇವಲ 7 ದಿನಗಳಿಗೆ ಮೊಟಕುಗೊಳಿಸಲಾಗಿದೆ. ಕನಿಷ್ಟಪಕ್ಷ 15 ದಿನವಾದರೂ ಅಧಿವೇಶನ ನಡೆಸಬೇಕು. ಇದಕ್ಕೆ ಆಡಳಿತ ಪಕ್ಷದಲ್ಲಿನ ಭಿನ್ನಮತ ಹಾಗೂ ಸಚಿವರ ಅಸಹಕಾರ ಕಾರಣವಿರಬಹುದು. ಆಡಳಿತ ಪಕ್ಷದಿಂದಲೇ ಅಧಿವೇಶನ ಮೊಟಕಾಗಿರುವುದು ದುರಂತದ ಸಂಗತಿ ಎಂದು ಚಾಟಿ ಬೀಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 60 ದಿನ ಅಧಿವೇಶನ ನಡೆಸುವುದಾಗಿ ಹೇಳಿದ್ದರು. ಅವರು ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ಅವರು ವ್ಯಂಗ್ಯವಾಡಿದರು.

ತಾವು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಸಕಾಲ ಯೋಜನೆಯಲ್ಲಿ 4 ಕೋಟಿ ಅರ್ಜಿ ವಿಲೇವಾರಿ ಆಗಿದ್ದು, ಪ್ರಧಾನ ಮಂತ್ರಿ ಪ್ರಶಸ್ತಿಗೆ ಭಾಜನವಾಗಿದೆ. ಪಾಕ್ ನಿಯೋಗ ಇದರ ಅಧ್ಯಯನಕ್ಕೆ ಬಂದಿತ್ತು. ಇದು ಸಿಎಂ ಕಚೇರಿವರೆಗೂ ವಿಸ್ತರಿಸಬೇಕು. ಆಗ ಶೇ. 50ರಷ್ಟು ಭ್ರಷ್ಟಾಚಾರ ಕಡಿಮೆಯಾಗಲಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕಡತ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂದರು. ( ಭಾರತದ ಭವ್ಯ ಭವಿಷ್ಯಕ್ಕಾಗಿ ಮೋದಿ ಕನಸು )

English summary
The Karnataka ex Chief Minister DV Sadananda Gowda has declared that he is ready to contest any where agaisnt AICC Vice President Rahul Gandhi in the ensuing Lok Sabha Elections. He was speaking to reporters in Bangalore today (Jan 21).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X