ಸಿಎಂ ಸಿದ್ದರಾಮಯ್ಯ ಬಜೆಟ್ ಪ್ರತಿಪಕ್ಷಗಳ ಅತೃಪ್ತಿ

ಬೆಂಗಳೂರು,

ಫೆ.
14
:
ಲೋಕಸಭೆ
ಚುನಾವಣೆಯ
ಹೊಸ್ತಿಲಲ್ಲಿ
ಸಿಎಂ
ಸಿದ್ದರಾಮಯ್ಯ
ಮಂಡಿಸಿದ
2014-15ರ
ಬಜೆಟ್
ಅನ್ನು
ಪ್ರತಿಪಕ್ಷಗಳು
ತೀವ್ರವಾಗಿ
ಟೀಕಿಸಿವೆ.
9ನೇ
ಬಾರಿ
ಬಜೆಟ್
ಮಂಡಿಸಿ
ದಾಖಲೆ
ಮಾಡಿರುವ
ಸಿದ್ದರಾಮಯ್ಯ
ಅಭಿವೃದ್ಧಿಗೆ
ಪೂರಕವಾದ
ಯೋಜನೆಗಳನ್ನು
ಘೋಷಿಸಿಲ್ಲ
ಎಂದು
ಪ್ರತಿಪಕ್ಷಗಳು
ಆರೋಪಿಸಿವೆ.

id="toptextpromo">
id='are-slot-1'
class='oiad
oi-axt
oiadv'>

9

ಬಾರಿ
ಬಜೆಟ್
ಮಂಡಿಸಿದ್ದೆ
ಸಿದ್ದರಾಮಯ್ಯ
ಅವರ
ಸಾಧನೆ
ಎಂದು
ಮಾಜಿ
ಸಿಎಂ
ಎಚ್.ಡಿ.ಕುಮಾರಸ್ವಾಮಿ
ಪ್ರತಿಕ್ರಿಯೆ
ನೀಡಿದ್ದರೆ,
ತೆರಿಗೆ
ಸಂಗ್ರಹಿಸುವಲ್ಲಿ
ಸರ್ಕಾರ
ವಿಫಲವಾಗಿದೆ
ಎಂದು
ಬಿ.ಎಸ್.ಯಡಿಯೂರಪ್ಪ
ಆರೋಪಿಸಿದ್ದಾರೆ.
ಇದೊಂದು
ನಿರಾಶಾದಾಯಕ
ಬಜೆಟ್
ಎಂದು
ಪ್ರತಿಪಕ್ಷ
ನಾಯಕ
ಜಗದೀಶ್
ಶೆಟ್ಟರ್
ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್
ಬಗ್ಗೆ
ನಾಯಕರು
ನೀಡಿದ
ಪ್ರತಿಕ್ರಿಯೆಗಳು
[ಸಿದ್ದರಾಮಯ್ಯ
ಬಜೆಟ್
ಮುಖ್ಯಾಂಶಗಳು]

id='are-slot-2'
class='oiad
oi-axt
oiadv'>

ತೆರಿಗೆ ಸಂಗ್ರಹದಲ್ಲಿ ಸರ್ಕಾರ ವಿಫಲವಾಗಿದೆ

ತೆರಿಗೆ ಸಂಗ್ರಹದಲ್ಲಿ ಸರ್ಕಾರ ವಿಫಲವಾಗಿದೆ

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ತೆರಿಗೆ ಸೋರಿಕೆ ತಡೆಗಟ್ಟಲು ವಿಫಲವಾಗಿದೆ. ಚುನಾವಣೆ ಹತ್ತಿರವಾಗುತ್ತಿರುವುದರಿಂದ ಅಲ್ಪಸಂಖ್ಯಾತರಿಗೆ, ರೈತರಿಗೆ ಹೆಚ್ಚಿನ ನೆರವು ದೊರೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ. ತರಾತುರಿಯಲ್ಲಿ `ಶಾದಿಭಾಗ್ಯ` ಯೋಜನೆ ಘೋಷಿಸಿದ ಸರ್ಕಾರ ಅದನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ವಿರೋಧ ಪಕ್ಷದ ನಾಯಕರಾಗಿದ್ದಾಗ ಸಾಲ ಮಾಡಬಾರದು ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ತಕ್ಷಣ ಸಾಲ ಮಾಡಲು ಮುಂದಾಗಿದ್ದಾರೆ ಎಂದರು.

ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲ

ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲ

9 ಬಾರಿ ಬಜೆಟ್ ಮಂಡನೆ ಮಾಡಿರುವು ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಎಂದು ಲೇವಡಿ ಮಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅಭಿವೃದ್ಧಿಗೆ ಪೂಕರವಾದ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸಿಲ್ಲ ಎಂದು ಹೇಳಿದ್ದಾರೆ. ಕಳೆದವಾರ ಸಿಎಂ ಬಜೆಟ್ ತಯಾರಿಸಲು ಸಮಯದ ಕೊರತೆ ಇದೆ ಎಂದು ಹೇಳಿದ್ದರು, ಇದು ಅಧಿಕಾರಿಗಳು ಸಿದ್ಧಪಡಿಸಿದ ಬಜೆಟ್ ಎಂದು ತಿಳಿಯುತ್ತದೆ. ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿಗಾಗಿ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಿಲ್ಲ. 2017ಕ್ಕೆ ರಾಜ್ಯ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಆಗುತ್ತದೆ ಎಂದು ಹೇಳಿದ್ದಾರೆ. ಅದಕ್ಕೆ ಏನು ಮಾಡುತ್ತೇವೆ ಎಂದು ಸಿಎಂ ತಿಳಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಿರಾಶಾದಾಯಕ ಬಜೆಟ್

ನಿರಾಶಾದಾಯಕ ಬಜೆಟ್

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಿದ್ದರಾಮಯ್ಯ ತರಾತುರಿಯಲ್ಲಿ ಬಜೆಟ್ ಮಂಡಿಸಿದ್ದರು. ಸದ್ಯ ಹೆಚ್ಚು ಸಮಯವಕಾಶ ದೊರಕಿದ್ದರೂ ಸಿಎಂ ಉತ್ತಮ ಬಜೆಟ್ ಮಂಡಿಸಿಲ್ಲ. 2014-15ನೇ ಸಾಲಿನ ಬಜೆಟ್ ತುಂಬಾ ನಿರಾಶದಾಯಕವಾಗಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಮ್ಮ ಎಲ್ಲ ನಿರೀಕ್ಷೆಗಳನ್ನು ಸಿದ್ದರಾಮಯ್ಯ ಸುಳ್ಳು ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಆವರ್ತ ನಿಧಿ ಮೀಸಲಿಟ್ಟಿಲ್ಲ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಅಗತ್ಯ ಅನುದಾನ ನೀಡಬೇಕಿತ್ತು ಅವುಗಳನ್ನು ಮಾಡಿಲ್ಲ ಎಂದು ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ನೀತಿ ಪ್ರಕಟಿಸಿಲ್ಲ

ಆರ್ಥಿಕ ನೀತಿ ಪ್ರಕಟಿಸಿಲ್ಲ

ಸರ್ಕಾರಕ್ಕೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಮುಂತಾದ ಯೋಜನೆಗಳಿಂದ ಆರ್ಥಿಕ ಹೊರೆ ಉಂಟಾಗಿದೆ. ಬಜೆಟ್ ನಲ್ಲಿ ಅದನ್ನು ಸರಿಪಡಿಸಲು ಆರ್ಥಿಕ ನೀತಿ ಘೋಷಿಸಬಹುದು ಎಂದು ಕೊಂಡಿದ್ದೆ. ಸಿಎಂ ಸಿದ್ದರಾಮಯ್ಯ ಆರ್ಥಿಕ ನೀತಿ ಪ್ರಕಟಿಸಿಲ್ಲ ಎಂದು ಸರ್ವೋದಯ ಪಕ್ಷದ ಶಾಸಕ ಮತ್ತು ರೈತ ಮಖಂಡ ಕೆ.ಎಸ್.ಪುಟ್ಟಣ್ಣಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ನೀರಾವರಿ, ವಿದ್ಯುತ್ ಗೆ ಅನುದಾನವಿಲ್ಲ

ನೀರಾವರಿ, ವಿದ್ಯುತ್ ಗೆ ಅನುದಾನವಿಲ್ಲ

ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ನೀರಾವರಿ ಮತ್ತು ವಿದ್ಯುತ್ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡಿಲ್ಲ. ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಹೇಗೆ ಎಂಬ ಬಗ್ಗೆ ಬಜೆಟ್ ನಲ್ಲಿ ಸ್ಪಷ್ಟನೆ ಇಲ್ಲ. ಕಾವೇರಿ, ಕೃಷ್ಣ ಕೊಳ್ಳದ ಭಾಗಗಳಲ್ಲಿ ಹೊಸ ನೀರಾವರಿ ಯೋಜನೆಯನ್ನು ಆರಂಭಿಸುವ ಕುರಿತು ಬಜೆಟ್ ನಲ್ಲಿ ಸ್ಪಷ್ಟನೆ ಇಲ್ಲ ಎಂದು ಕಡೂರು ಶಾಸಕ ವೈಎಸ್ ವಿ ದತ್ತಾ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+