'ರಮ್ಯಾ ಸೋಲಿಸಿದ ಶಿವರಾಮೇಗೌಡರಿಗೆ ಟಿಕೆಟ್ ಯಾಕೆ?'

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಡಿಸೆಂಬರ್ 08 : ನಾವೆಲ್ಲರೂ ಒಂದಾಗಿ ವಿಧಾನಪರಿಷತ್ ಚುನಾವಣೆ ಎದುರಿಸುತ್ತೇವೆ ಎಂದು ಮಂಡ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ, ಪಕ್ಷದೊಳಗಿನ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡಿರುವುದು ಮತ್ತೊಂದು ಬಣದ ಅಸಮಾಧಾನಕ್ಕೆ ಕಾರಣವಾಗಿದೆ.

ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೂ ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಾತ್ರ ಇನ್ನೂ ಒಮ್ಮತ ಮೂಡುತ್ತಿಲ್ಲ. ಪ್ರತ್ಯೇಕ ಗುಂಪುಗಳಾಗಿ ನಾಯಕರು ಮತ್ತು ಕಾರ್ಯಕರ್ತರು ಹಂಚಿಹೋಗಿದ್ದು ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವುದು ಕೆಪಿಸಿಸಿಗೆ ತಲೆನೋವಿನ ಕೆಲಸವಾಗಿದೆ. [ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ]

ಪರಿಷತ್ ಚುನಾವಣೆಯಲ್ಲಿ ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡಿರುವುದು ಪಕ್ಷದ ಮತ್ತೊಂದು ಬಣದ ಅಸಮಾಧಾನಕ್ಕೆ ಕಾರಣವಾಗಿದೆ. ಯಾವ ಮಾನದಂಡದ ಮೇಲೆ ಅವರಿಗೆ ಟಿಕೆಟ್ ನೀಡಿದ್ದೀರಾ? ಎಂಬ ಪ್ರಶ್ನೆಯನ್ನು ಮತ್ತೊಂದು ಬಣದ ನಾಯಕರು ಕೇಳುತ್ತಿದ್ದಾರೆ. [ರಮ್ಯಾ ಸೋಲಿಗೆ ಕಾರಣ ಯಾರು ಗೊತ್ತೆ?]

ಶ್ರೀರಂಗಪಟ್ಟಣ ಕ್ಷೇತ್ರದ ಕೆಪಿಸಿಸಿ ಸದಸ್ಯ ಎ.ಎಸ್. ರವೀಂದ್ರ ಶ್ರೀಕಂಠಯ್ಯ ಅವರು ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡಿರುವುದನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ. ಶಿವರಾಮೇಗೌಡರು 2014ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರ ವಿರುದ್ಧ ಪ್ರಚಾರ ಮಾಡಿ ಅವರ ಸೋಲಿಗೂ ಕಾರಣರಾದರು. ಅವರಿಗೆ ಹೇಗೆ ಟಿಕೆಟ್ ನೀಡಲಾಯಿತು? ಎಂದು ಪ್ರಶ್ನಿಸಿದ್ದಾರೆ. ಮಂಡ್ಯ ಕಾಂಗ್ರೆಸ್‌ ಭಿನ್ನಮತದ ವಿವರ ಚಿತ್ರಗಳಲ್ಲಿ....[ನಾನು ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದ ರಮ್ಯಾ]

ಮಂಡ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಇಲ್ಲ

ಮಂಡ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಇಲ್ಲ

ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೂ ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಾತ್ರ ಇನ್ನೂ ಒಮ್ಮತ ಮೂಡುತ್ತಿಲ್ಲ. ಪರಿಷತ್ ಚುನಾವಣೆಯಲ್ಲಿ ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡಿರುವುದಕ್ಕೆ ಕೆಪಿಸಿಸಿ ಸದಸ್ಯ ಎ.ಎಸ್. ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತ್ಯೇಕ ಗುಂಪುಗಳಾಗಿ ನಾಯಕರು ಮತ್ತು ಕಾರ್ಯಕರ್ತರು ಹಂಚಿಹೋಗಿದ್ದು ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವುದು ಕೆಪಿಸಿಸಿಗೆ ತಲೆನೋವಿನ ಕೆಲಸವಾಗಿದೆ.

ಪರಮೇಶ್ವರ ಅವರಿಗೆ ಪತ್ರ

ಪರಮೇಶ್ವರ ಅವರಿಗೆ ಪತ್ರ

ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡಿರುವ ಬಗ್ಗೆ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ. ಯಾವ ಮಾನದಂಡದ ಮೇಲೆ ಅವರಿಗೆ ಟಿಕೆಟ್ ನೀಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ವಿವಾದ ಹುಟ್ಟು ಹಾಕಿದ್ದರು

ವಿವಾದ ಹುಟ್ಟು ಹಾಕಿದ್ದರು

ಎಲ್.ಆರ್.ಶಿವರಾಮೇಗೌಡರು ಕೆಲವು ದಿನಗಳ ಹಿಂದೆ ಸಮಾರಂಭವೊಂದರಲ್ಲಿ 'ನನ್ನ ಬಳಿಯೂ ಮೂಟೆಗಟ್ಟಲೆ ಹಣವಿದೆ. ನೀವು ಭಯಪಡಬೇಡಿ, ಬೇರೆಯವರು ಕೊಡೋದಕ್ಕಿಂತ ಜಾಸ್ತಿನೇ ಕೊಡುತ್ತೇನೆ' ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದರು. ಅವರಿಗೆ ಟಿಕೆಟ್ ನೀಡಿರುವುದು ಜಿಲ್ಲೆಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. [ಚಿತ್ರ : ಎಲ್.ಆರ್.ಶಿವರಾಮೇಗೌಡ]

ಪಕ್ಷದ ಸೋಲಿಗೆ ಕಾರಣರಾಗಿದ್ದರು

ಪಕ್ಷದ ಸೋಲಿಗೆ ಕಾರಣರಾಗಿದ್ದರು

ಯಾವ ಮಾನದಂಡದ ಆಧಾರದ ಮೇಲೆ ಶಿವರಾಮೇಗೌಡ ಅವರನ್ನು ಆಯ್ಕೆ ಮಾಡಿದ್ದೀರಿ?, ಕಾಂಗ್ರೆಸ್ ಪಕ್ಷದಲ್ಲಿದ್ದ ಇವರು 2008ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಾರಿ ಅಧಿಕೃತ ಅಭ್ಯರ್ಥಿಯೂ ಆಗಿ, ಪರಾಜಿತರಾಗಿ ಕಾಂಗ್ರೆಸ್ ಪಕ್ಷದ ಸೋಲಿಗೂ ಕಾರಣರಾಗಿದ್ದಾರೆ ಎಂದು ರವೀಂದ್ರ ಹೇಳಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಅಂಬರೀಶ್ ಅವರಿಗೂ ಈ ಬಂಡಾಯ ಶಮನಗೊಳಿಸುವುದು ಸವಾಲಾಗಿದೆ.

ರಮ್ಯಾ ಸೋಲಿಗೆ ಕಾರಣವಾಗಿದ್ದರು

ರಮ್ಯಾ ಸೋಲಿಗೆ ಕಾರಣವಾಗಿದ್ದರು

2014ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರ ವಿರುದ್ಧ ಪ್ರಚಾರ ಮಾಡಿ ಅವರ ಸೋಲಿಗೂ ಕಾರಣರಾದರು. ಚುನಾವಣೆ ಮುಗಿದ ತರುವಾಯ ಮಾಧ್ಯಮಗಳಲ್ಲಿ 'ಹೌದು ನಾವೇ ರಮ್ಯಾ ಅವರನ್ನು ಸೋಲಿಸಿದ್ದು' ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟ ಶಿವರಾಮೇಗೌಡರಿಗೆ ಟಿಕೆಟ್ ನೀಡಿದ್ದು ಏಕೆ? ಎಂದು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದ್ದಾರೆ.

ಗೆಲುವು ನಮ್ಮದೇ : ಶಿವರಾಮೇಗೌಡ

ಗೆಲುವು ನಮ್ಮದೇ : ಶಿವರಾಮೇಗೌಡ

ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತವಿದೆ ಎಂಬ ವರದಿಯನ್ನು ತಳ್ಳಿ ಹಾಕಿರುವ ಎಲ್.ಆರ್. ಶಿವರಾಮೇಗೌಡ ಅವರು, 'ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಗೆಲುವು ನಮ್ಮದೆ' ಎಂದು ಹೇಳಿದ್ದಾರೆ. ಡಿಸೆಂಬರ್ 27ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ.

ಸಭೆಗೆ ರವೀಂದ್ರ ಶ್ರೀಕಂಠಯ್ಯ ಗೈರು

ಸಭೆಗೆ ರವೀಂದ್ರ ಶ್ರೀಕಂಠಯ್ಯ ಗೈರು

ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಭಿನ್ನಾಭಿಪ್ರಾಯ ಶಮನಗೊಳಿಸಲು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ನಿವಾಸದಲ್ಲಿ ಸೋಮವಾರ ಸಂಜೆ ಸಂಧಾನ ಸಭೆ ನಡೆಯಿತು. ಆದರೆ, ರವೀಂದ್ರ ಶ್ರೀಕಂಠಯ್ಯ ಅವರು ಸಭೆಗೆ ಹಾಜರಾಗಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Pradesh Congress Committee (KPCC) member A.S. Ravindra Srikantaiah has questioned the legislative council ticket for L.R. Shivarame Gowda from Mandya local authority constituency. Ravindra Srikantaiah Congress leader from Srirangapatna.
Please Wait while comments are loading...