Ration Card: ರಾಜ್ಯದಲ್ಲಿ ಪಡಿತರ ಚೀಟಿಗೆ ಇ -ಕೆವೈಸಿ ಕಡ್ಡಾಯ ಏಕೆ ಹಾಗೂ ಮಾಡಿಸುವುದೇಗೆ?; ಇಲ್ಲಿದೆ ಮಾಹಿತಿ

Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಇದೀಗ ಪಡಿತರ ಚೀಟಿದಾರರಿಗೆ ಇ-ಕೆ ವೈಸಿ ಮಾಡಿಸಲು ಏಪ್ರಿಲ್‌ 30ರ ವರೆಗೂ ಗಡುವು ನೀಡಲಾಗಿದೆ. ಹಾಗಾದ್ರೆ ಇದು ಯಾಕೆ ಬೇಕು ಹಾಗೂ ಇದನ್ನು ಮಾಡಿಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ರಾಜ್ಯದಲ್ಲಿ ಈಗಾಗಲೇ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸುವ ಕೆಲಸವನ್ನು ಮಾಡಿತ್ತು. ಇದರ ಬೆನ್ನಲ್ಲೇ ಅರ್ಹರ ಬಳಿಯಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಸರ್ಕಾರ ರದ್ದು ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲದೆ, ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಯನ್ನು ಸಹ ಮಾಡಿದ್ದರು.

Ration Card Why is e-KYC mandatory in state know details

ಬಳಕ ಎಚ್ಚೆತ್ತ ಸರ್ಕಾರ ಅರ್ಹರಿಗೆ ಮತ್ತೆ ಪಡಿತರದ ಜೊತೆಗೆ ಬಿಪಿಎಲ್‌ ಕಾರ್ಡ್‌ಗಳನ್ನು ಹಿಂದಿರುಗಿಸಲಾಗುವುದು ಎಂದು ಹೇಳಿತ್ತು. ಇದೀಗ ಎಲ್ಲಾ ಪಡಿತರ ಚೀಟಿದಾರರಿಗೆ ಸರ್ಕಾರ ಮತ್ತೊಂದು ಕೆಲಸವನ್ನು ಪೂರೈಸುವಂತೆ ಹೇಳಿದೆ. ಅಲ್ಲದೆ, ಇದನ್ನು ಮಾಡದವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಅಂತಲೂ ಹೇಳಿದೆ.

ಈಗಾಗಲೇ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆ ಅಂತಿಮ ಗಡುವು ನೀಡಿದೆ. ಇದೇ ಏಪ್ರಿಲ್‌ 30ರೊಳಗೆ ಇ - ಕೆವೈಸಿ ಮಾಡಿಸಿಕೊಳ್ಳದ ಫಲಾನುಭವಿಗಳಿಗೆ ಪಡಿತರ ವಿತರಣೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ನೀಡಿದೆ. ಹಾಗಾದ್ರೆ ಇದು ಯಾಕೆ ಅಗತ್ಯ ಎಂದು ತಿಳಿಯಿರಿ.

ಈ ಹಿಂದಿನಿಂದಲೂ ಅಂದರೆ ಕಳೆದ ವರ್ಷದಿಂದಲೂ ರಾಜ್ಯದಲ್ಲಿ ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕೆಂದು ಆಹಾರ ಇಲಾಖೆ ಮನವಿ ಮಾಡುತ್ತಲೇ ಬಂದಿದೆ. ಆದರೆ ಈವರಗೂ ಕ್ಯಾರೆ ಅನ್ನದೆ, ಲಕ್ಷಾಂತರ ಜನರು ಇ - ಕೆವೈಸಿ ಮಾಡಿಸದೇ ನಿರ್ಲಕ್ಷ್ಯವಹಿಸಿರುವುದು ಬೆಳಕಿದೆ ಬಂದಿದೆ. ಕೊನೆಗೆ ಸರ್ಕಾರ ಈ ನಿರ್ಧರವನ್ನು ತೆಗೆದುಕೊಂಡಿದೆ. ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ಗಳ ಫಲಾನುಭವಿಗಳನ್ನು ಮಾತ್ರ ಇ-ಕೆವೈಸಿ ಪ್ರಕ್ರಿಯೆಗೆ ಪರಿಗಣೆಗೆ ತೆಗೆದುಕೊಳ್ಳಲಾಗಿದೆ.

ಈ ತಿಂಗಳಾಂತ್ಯದೊಳಗೆ ಇ - ಕೆವೈಸಿ ಮಾಡಿಸದ ಫಲಾನುಭವಿಗಳಿಗೆ ಮುಂದಿನ ತಿಂಗಳು ಅಂದತೆ ಮೇನಿಂದಲೇ ಪಡಿತರ ವಿತರಣೆ ಹಂಚಿಕೆ ಸ್ಥಗಿತಗೊಳಿಸಲು ಆಹಾರ ಇಲಾಖೆ ಮುಂದಾಗಿದೆ. ಆದ್ದರಿಂದ ಮುಂದಿನ ತಿಂಗಳಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಪಡಿತರ ಪಡೆಯಬೇಕೆಂದರೆ ಫಲಾನುಭವಿಗಳು ಇ - ಕೆವೈಸಿ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಬಹುತೇಕ ಮಂದಿ ಇ-ಕೆವೈ ಯಾಕೆ ಎನ್ನುವ ಪ್ರಶ್ನೆಗಳನ್ನು ಸಹ ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ. ಪಡಿತರ ಪದಾರ್ಥಗಳು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟವಾಗುವುದು ಬೆಳಕಿದೆ ಬಂದಿದೆ. ಇದನ್ನು ತಡೆಯುವ ಉದ್ದೇಶದಿಂದ ಪಡಿತರ ವಸ್ತುಗಳ ವಿತರಣಾ ಕಾರ್ಯದಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡಲಾಗಿದೆ.

ಆದ್ದರಿಂದ ಫಲಾನುಭವಿಗಳು ಇ - ಕೆವೈಸಿ ಮಾಡಿಸುವುದು ಕಡ್ಡಾಯ ಆಗಿದೆ. ತುಂಬಾ ಜನ ಇ-ಕೆವೈಸಿ ಪ್ರಕ್ರಿಯೆ ಮಾಡಿಸದೇ ಹಿಂದೆ ಸರಿದಿದ್ದಾರೆ. ಅವರೆಲ್ಲರೂ ಏಪ್ರಿಲ್ 30ರೊಳಗೆ ಇ - ಕೆವೈಸಿ ಮಾಡಿಸಿಕೊಳ್ಳಬೇಕಿದೆ ಅಂತಲೂ ಈಗಾಗಲೇ ಆಹಾರ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ. ಹಾಗಾದ್ರೆ ಈ ಇ - ಕೆವೈಸಿ ಮಾಡಿಸಿಕೊಳ್ಳುವುದೇಗೆ ಎಂದು ಗೊಂದಲದಲ್ಲಿರುವವರಿಗೆ ಉತ್ತರ ಇಲ್ಲಿದೆ ನೋಡಿ.

ಇ - ಕೆವೈಸಿ ಮಾಡಿಸುವುದೇಗೆ?: ಇಲ್ಲಿವರೆಗೂ ಇ-ಕೆವೈಸಿ ಮಾಡಿಸದ ಪಡಿತರ ಫಲಾನುಭವಿಗಳು ತಾವು ಪ್ರತಿ ತಿಂಗಳು ಪಡಿತರ ಪದಾರ್ಥಗಳನ್ನು ಪಡೆಯುತ್ತಿರುವ ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್‌ ನೀಡಿ ತಮ್ಮ ವಿವರಗಳನ್ನು ಅಪ್ಡೇಟ್‌ ಮಾಡಿಸಿಕೊಳ್ಳಬೇಕು. ಇದರಿಂದ ಇ-ಕೆವೈಸಿ ಪ್ರಕ್ರಿಯೆ ಪೂರ್ಣ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+