ಸಮೀಕ್ಷೆ: ಆಹಾರ ಸಚಿವ ಯುಟಿ ಖಾದರ್ ಗೆ ನಿಮ್ಮ ಅಂಕವೆಷ್ಟು?
ಸಿದ್ದು ಸಂಪುಟದ ಸಚಿವರ ಮೌಲ್ಯ ಮಾಪನ ಮಾಡುವ ವ್ಯವಸ್ಥೆಯನ್ನು ಒನ್ಇಂಡಿಯಾ ಕನ್ನಡ ಓದುಗರಿಗೆ ನೀಡಲಾಗಿದೆ. ಆಹಾರ ಸಚಿವ ಯುಟಿ ಖಾದರ್ ಗೆ ನಿಮ್ಮ ಅಂಕವೆಷ್ಟು?
ಬೆಂಗಳೂರು, ಜೂನ್ 12: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ನಾಲ್ಕು ವರುಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಸಿದ್ದು ಸಂಪುಟದ ಸಚಿವರ ಮೌಲ್ಯ ಮಾಪನ ಮಾಡುವ ವ್ಯವಸ್ಥೆಯನ್ನು ಒನ್ಇಂಡಿಯಾ ಕನ್ನಡ ಓದುಗರಿಗೆ ನೀಡಲಾಗಿದೆ. ಓದುಗರು ನೀಡಿದ ಫಲಿತಾಂಶ ಮಂದಿನ ಚುನಾವಣೆಗೂ ದಿಕ್ಸೂಚಿಯಾಗಲಿದೆ.
ಆರೋಗ್ಯ ಸಚಿವರಾಗಿದ್ದ ಯು.ಟಿ ಖಾದರ್ ಅವರು ಸದ್ಯ ಆಹಾರ ಮತ್ತು ನಾಗರಿಕ ಸೇವಾ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಹುತೇಕ ಕರಾವಳಿಯ ಗಟ್ಟಿ ದನಿಯಾಗಿದ್ದಾರೆ.
ಪಡಿತರ ಚೀಟಿ ವಿತರಣೆ, ಅನ್ನಭಾಗ್ಯ ಯೋಜನೆ ಅನುಷ್ಠಾನ, ಕರಾವಳಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಜನಾನುರಾಗಿ ಎನಿಸಿಕೊಂಡಿದ್ದಾರೆ. ಆದರೆ, ಆಹಾರ ಇಲಾಖೆಯ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿರುವುದು ಸುಳ್ಳಲ್ಲ.
ನೀವು ಕೂಡಾ ಸಚಿವರಿಗೆ ರೇಟಿಂಗ್ ನೀಡಬಹುದು. ರೇಟಿಂಗ್ ನೀಡಲು ಒನ್ಇಂಡಿಯಾ ಕನ್ನಡದ ಫೇಸ್ ಬುಕ್ ಪುಟಕ್ಕೆ ಭೇಟಿ ನೀಡಿ. ಸದ್ಯಕ್ಕೆ ಸಂಗ್ರಹವಾದ ಅಭಿಪ್ರಾಯದಂತೆ ಖಾದರ್ ಗೆ ಕಾರ್ಯಕ್ಷಮತೆಗೆ 3/5 ಸಿಕ್ಕಿದೆ.

ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಮೀಕ್ಷೆ
ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸಿದ್ದರಾಮಯಯ್ಯ ಸಂಪುಟದ ಸಚಿವರ ಮೌಲ್ಯ ಮಾಪನ ಮಾಡುವ ಅವಕಾಶ ಓದುಗರಿಗೆ ನೀಡಲಾಗಿದೆ. ದಿನಕ್ಕೊಬ್ಬ ಸಚಿವರಿಗೆ ರೇಟಿಂಗ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ, ಕಾಮೆಂಟ್ ಮಾಡಬಹುದು.

ರೇಷನ್ ಕಾರ್ಡ್ ಪ್ರಾಬ್ಲಂ
ಪಡಿತರ ಚೀಟಿ ವಿತರಣೆ ಸಮಪರ್ಕವಾಗಿಲ್ಲ. ಅಲ್ಪಸ್ವಲ್ಪ ಸಮಸ್ಯೆ ಇದ್ದರೂ ಖಾದರ್ ಅವರ ಕಾರ್ಯವೈಖರಿ ತೃಪ್ತಿಕರ.

ಕಾಂಗ್ರೆಸ್ ನಲ್ಲಿರುವ ಏಕೈಕ ಸಮರ್ಥ
ಕಾಂಗ್ರೆಸ್ ನಲ್ಲಿರುವ ಏಕೈಕ ಸಮರ್ಥ ಸಚಿವ ಖಾದರ್ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು, ಇನ್ನೂ ಇಲಾಖೆಯ ಲೋಪ ದೋಷಗಳನ್ನು ಸರಿಪಡಿಸಿಲ್ಲ.ಸಮಗ್ರವಾಗಿ ಕಾರ್ಯ ವೈಖರಿ ಸಾಧಾರಣ ಎಂದಿದ್ದಾರೆ.

ಆಹಾರ ಇಲಾಖೆಯಲ್ಲಿ ಹೆಗ್ಗಣಗಳಿವೆ
ಆಹಾರ ಇಲಾಖೆಯಲ್ಲಿ ಹೆಗ್ಗಣಗಳಿವೆ, ಮೊದಲು ಅವನ್ನು ಓಡಿಸಿದರೆ ಸಚಿವರಿಗೆ ಅಂಕ ನೀಡಬಹುದು. ಸದ್ಯಕ್ಕೆ ರೇಟಿಂಗ್ ನೀಡುವಂಥ ಕೆಲ್ಸ ಮಾಡಿಲ್ಲ.

ಖಾದರ್ ಒಳ್ಳೆ ವ್ಯಕ್ತಿ
ಆಹಾರ ಮತ್ತು ನಾಗರಿಕ ಸೇವೆ ಇಲಾಖೆಯಲ್ಲಿ ಪಾರದರ್ಶಕತೆ ತಂದಿದ್ದಾರೆ. ಆನ್ ಲೈನ್ ಮೂಲಕ ಅನೇಕ ಕಾರ್ಯಗಳು ಆಗುತ್ತಿವೆ. ಖಾದರ್ ಗೆ ಉತ್ತಮ ಅಂಕ ಲಭಿಸಬೇಕು.

ಮಿಶ್ರ ಪ್ರತಿಕ್ರಿಯೆ
ಒಟ್ಟಾರೆ, ಖಾದರ್ ಅವರ ಕಾರ್ಯವೈಖರಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 5ಕ್ಕೆ 3 ಅಂಕ ನೀಡುವಷ್ಟು ಅಭಿಪ್ರಾಯಗಳು ಸಿಕ್ಕಿವೆ.











Click it and Unblock the Notifications