ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ರೇಟಿಂಗ್ ಕೊಡಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ನಾಲ್ಕು ವರುಷಗಳನ್ನು ಪೂರೈಸಿದೆ.ಈ ಸಂದರ್ಭದಲ್ಲಿ ಸಿದ್ದು ಸಂಪುಟದ ಸಚಿವರ ಮೌಲ್ಯ ಮಾಪನ ಮಾಡುವ ವ್ಯವಸ್ಥೆಯನ್ನು ಒನ್ಇಂಡಿಯಾ ಕನ್ನಡ ಓದುಗರಿಗೆ ನೀಡಲಾಗಿದೆ.
ಬೆಂಗಳೂರು, ಜೂನ್ 07: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ನಾಲ್ಕು ವರುಷಗಳನ್ನು ಪೂರೈಸಿದೆ.
ಈ ಸಂದರ್ಭದಲ್ಲಿ ಸಿದ್ದು ಸಂಪುಟದ ಸಚಿವರ ಮೌಲ್ಯ ಮಾಪನ ಮಾಡುವ ವ್ಯವಸ್ಥೆಯನ್ನು ಒನ್ಇಂಡಿಯಾ ಕನ್ನಡ ಓದುಗರಿಗೆ ನೀಡಲಾಗಿದೆ. ಓದುಗರು ನೀಡಿದ ಫಲಿತಾಂಶ ಮಂದಿನ ಚುನಾವಣೆಗೂ ದಿಕ್ಸೂಚಿಯಾಗಲಿದೆ.
ನಾಲ್ಕು ಬಾರಿ ಜಯನಗರ ಹಾಗೂ ಎರಡು ಬಾರಿ ಬಿಟಿಎಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಬೆಂಗಳೂರಿನ ಲಕ್ಕಸಂದ್ರ ನಿವಾಸಿ ಆರ್ ರಾಮಲಿಂಗಾ ರೆಡ್ಡಿ ಅವರು ಪ್ರಸ್ತುತ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಚಿವರ ಬಗ್ಗೆ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.. ಸ್ಲೈಡ್ ಗಳಲ್ಲಿ ಸಚಿವರ ಇಲ್ಲಿವರೆಗಿನ ಸಾಧನೆಯ ಬಗ್ಗೆ ಜನಾಭಿಪ್ರಾಯ, ರೇಟಿಂಗ್ ಸಿಗಲಿದೆ.
ರಾಮಲಿಂಗಾರೆಡ್ಡಿ
ಕ್ಷೇತ್ರ : ಬೆಂಗಳೂರು ನಗರ (ಬಿ.ಟಿ.ಎಂ.ಲೇಔಟ್)
ಜನನ : 12 ಜೂನ್ 1953, ಶೆಟ್ಟಿಹಳ್ಳಿ, ಆನೇಕಲ್ ತಾಲ್ಲೂಕು
ಶಿಕ್ಷಣ : ಬಿಎಸ್ಸಿ
ಜಾತಿ : ಒಕ್ಕಲಿಗ (ರೆಡ್ಡಿ)
* 1989 ರಿಂದ ಒಟ್ಟು 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
* 1983ರಲ್ಲಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿ ಆಯ್ಕೆ
* 1989, 1994, 1999 ಹಾಗೂ 2004ರವರೆಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ.
* ಕ್ಷೇತ್ರ ಪುನರ್ ವಿಂಗಡಣೆ ನಂತರ ಬಿ.ಟಿ.ಎಂ.ಲೇಔಟ್ ಕ್ಷೇತ್ರದಿಂದ 2008 ಹಾಗೂ 2013ರಲ್ಲಿ ಆಯ್ಕೆಯಾಗಿದ್ದಾರೆ.
ನೀವು ಕೂಡಾ ಸಚಿವರಿಗೆ ರೇಟಿಂಗ್ ನೀಡಬಹುದು. ರೇಟಿಂಗ್ ನೀಡಲು ಒನ್ಇಂಡಿಯಾ ಕನ್ನಡದ ಫೇಸ್ ಬುಕ್ ಪುಟಕ್ಕೆ ಭೇಟಿ ನೀಡಿ. ಸದ್ಯಕ್ಕೆ ಸಂಗ್ರಹವಾದ ಅಭಿಪ್ರಾಯದಂತೆ ಸಚಿವರ ಕಾರ್ಯಕ್ಷಮತೆಗೆ 2.5/5 ಸಿಕ್ಕಿದೆ.

ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಮೀಕ್ಷೆ
ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸಿದ್ದರಾಮಯಯ್ಯ ಸಂಪುಟದ ಸಚಿವರ ಮೌಲ್ಯ ಮಾಪನ ಮಾಡುವ ಅವಕಾಶ ಓದುಗರಿಗೆ ನೀಡಲಾಗಿದೆ. ದಿನಕ್ಕೊಬ್ಬ ಸಚಿವರಿಗೆ ರೇಟಿಂಗ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ, ಕಾಮೆಂಟ್ ಮಾಡಬಹುದು.

ಬಸ್ ಚಾರ್ಜ್ ಜಾಸ್ತಿ
* ಬಸ್ ಜಾರ್ಜ್ ಜಾಸ್ತಿ ಇದೆ. ಬಿಎಂಟಿಸಿ ಬಸ್ ಟಿಕೆಟ್ ನಲ್ಲಿ ಕನ್ನಡವೇ ಇಲ್ಲ
* ಐದು ಸ್ಟಾರ್ ಕೊಡ್ತೀನಿ, ನಮ್ ಏರಿಯಾಗೆ ಬಸ್ ಸಂಚಾರ ಚೆನ್ನಾಗಿದೆ.
* ಓಕೆ ಪರ್ವಾಗಿಲ್ಲ, ತುಂಬಾ ಸಾಧನೆ ಮಾಡಿಲ್ಲ, ಬಸ್ ಸೌಲಭ್ಯ ಸುಧಾರಿಸಬೇಕು.
* ಕರ್ನಾಟಕದ ಹಲವೆಡೆ ನಗರ ಸಾರಿಗೆ ಇನ್ನೂ ವಿಸ್ತರಣೆಯಾಗಬೇಕಿದೆ.

ಟ್ವಿಟ್ಟರಲ್ಲಿ ಭಾರಿ ಆಕ್ರೋಶ
100 ಅಂಕಗಳನ್ನು ಶೇ 8ರಷ್ಟು ಮಂದಿ ನೀಡಿದ್ದರೆ, ಶೇ 9ರಷ್ಟು ಮಂಡಿ 70 ಅಂಕ, ಶೇ 12ರಷ್ಟು ಮಂದಿ 50 ಅಂಕಗಳನ್ನು ನೀಡಿದ್ದಾರೆ. ಶೇ 75ಕ್ಕೂ ಅಧಿಕ ಮಂದಿ 25 ಅಂಕಗಳನ್ನು ನೀಡಿ ಕಳಪೆ ಸಾಧನೆ ಎಂದಿದ್ದಾರೆ.

ಬಸ್ ಚಾರ್ಜ್ ಜಾಸ್ತಿ
ಬಸ್ ಜಾರ್ಜ್ ಜಾಸ್ತಿ ಇದೆ ಎಂಬ ಕೂಗು ಹೆಚ್ಚಾಗಿ ಕೇಳಿ ಬಂದಿದೆ. ಮಿಕ್ಕಂತೆ, ಬಸ್ ಗಳ ಕೊರತೆ, ಮೂಲ ಸೌಕರ್ಯಗಳಿಲ್ಲದ ನಿಲ್ದಾಣ, ಸಮಯ ಪಾಲನೆ ಬಗ್ಗೆ ಸಾರ್ವಜನಿಕರು ದೂರುಗಳನ್ನು ಹೇಳಿಕೊಂಡಿದ್ದಾರೆ.

ಸರಾಸರಿ 2.5 ಅಂಕ
ನಗರ ಸಾರಿಗೆ ಸಮರ್ಪಕವಾಗಿಲ್ಲ. ಐಷಾರಾಮಿ ಬಸ್ ಗಳು ಪರ್ವಾಗಿಲ್ಲ. ಕೆಂಪೇಗೌಡ ಬಸ್ ನಿಲ್ದಾಣದಲ್ಲೆ ರಾತ್ರಿ ವೇಳೆ ಬಸ್ ಗಾಗಿ ಪರದಾಟ ನಿಂತಿಲ್ಲ. ಪ್ರಯಾಣಿಕರ ರಕ್ಷಣೆ, ವಿಶ್ರಾಂತಿ ಗೃಹ, ಬಸ್ ನಿಲ್ದಾಣಗಳಿಗೆ ಅಂಕ ನೀಡದಿರುವುದೇ ಒಳ್ಳೆಯದು ಎಂಬ ಅಭಿಪ್ರಾಯ ಬಂದಿದೆ.

ನೌಕರರ ಸಮಸ್ಯೆ ಬಗೆಹರಿದಿಲ್ಲ
ಬಿಎಂಟಿಸಿ ಇನ್ನೂ 'ಕಿಲ್ಲರ್' ಟ್ಯಾಗ್ ನಿಂದ ಮುಕ್ತವಾಗಿಲ್ಲ. ಸಿಬ್ಬಂದಿಗಳ ಕೊರತೆ ಇನ್ನೂ ತುಂಬಿಲ್ಲ. ಕೆಲ ವಿಭಾಗಗಳಲ್ಲಿ ಸಮರ್ಪಕ ಸೇವೆ ಒದಗಿಸಿದರೂ ಒಟ್ಟಾರೆ, ಬಸ್ ಸೇವೆ ಸರಿಯಿಲ್ಲ. ಆದಾಯ, ಲಾಭದಲ್ಲಿರುವ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವ ರೀತಿ ಸರಿಯಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.












Click it and Unblock the Notifications