ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸಂಗೀತ ಪ್ರತಿಭೆ, ಮಂಗಳೂರಿನ ನೃತ್ಯಗಾರ್ತಿಗೆ ರಾಷ್ಟ್ರೀಯ ಬಾಲ ಪುರಸ್ಕಾರ

|
Google Oneindia Kannada News

ನವದೆಹಲಿ, ಜನವರಿ 25: ಬೆಂಗಳೂರು ನಗರ ಮೂಲದ ಪಾಶ್ಚಿಮಾತ್ಯ ಸಂಗೀತ ಪ್ರತಿಭೆ ಸೈಯದ್ ಫಟೀನ್ ಅಹ್ಮದ್ ಮತ್ತು ಮಂಗಳೂರಿನ ಭರತನಾಟ್ಯ ನೃತ್ಯಗಾರ್ತಿ ರೆಮೋನಾ ಎವೆಟ್ಟೆ ಪೆರೇರಾ ಸೇರಿದಂತೆ 29 ಮಕ್ಕಳು ಸೋಮವಾರ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಪಡೆದರು.

ಹದಿನಾಲ್ಕು ವರ್ಷ ವಯಸ್ಸಿನ ಫಟೀನ್, ಮೂರು ವರ್ಷ ವಯಸ್ಸಿನಲ್ಲೇ ಸಂಗೀತ ಕಲಿಯಲು ಪ್ರಾರಂಭಿಸಿದ್ದನು. ಈಗ ಪಾಶ್ಚಿಮಾತ್ಯ ಶಾಸ್ತ್ರೀಯ ಪಿಯಾನೋ ವಾದಕ, ಗಿಟಾರ್ ವಾದಕ ಮತ್ತು ಅಂತರರಾಷ್ಟ್ರೀಯ ಶಿಕ್ಷಕರಿಂದ ತರಬೇತಿ ಪಡೆದು ಗಾಯಕನಾಗಿದ್ದಾನೆ.

ಮಂಗಳೂರಿನ 17ರ ಹರೆಯದ ರೆಮೋನಾ ಅವರು ಕಲೆ ಮತ್ತು ಸಂಸ್ಕೃತಿಯಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ. ರೆಮೋನಾ ಅರೆ-ಶಾಸ್ತ್ರೀಯ, ಪಾಶ್ಚಿಮಾತ್ಯ ಮತ್ತು ಸಮಕಾಲೀನ ನೃತ್ಯ ಶೈಲಿಗಳಲ್ಲಿ ತರಬೇತಿ ಪಡೆದಿದ್ದಾರೆ.

Rashtriya Bal Puraskar 2022: Bengalurus child Syed Fateen Ahmed and Mangaluru dancer Remona Evette Pereira Receive Award

ಬಾಲ ಪುರಸ್ಕಾರ ಪ್ರಶಸ್ತಿ ಪಡೆದ ಖುಷಿ ಹಂಚಿಕೊಂಡ ಸೈಯದ್ ಫಟೀನ್, "ಸ್ನೇಹಿತನಿಂದ ಅದರ ಬಗ್ಗೆ ತಿಳಿದ ನಂತರ, ನನ್ನ ತಾಯಿ ಕಳೆದ ವರ್ಷ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ದೊಡ್ಡ ಭಾವನೆ ಮತ್ತು ಗೌರವ. ಭಾರತವನ್ನು ಪ್ರತಿನಿಧಿಸಲು ನಾನು ಹೆಮ್ಮೆಪಡುತ್ತೇನೆ," ಎಂದು ತಿಳಿಸಿದರು.

ಫಟೀನ್, ಬೆಲರೂಸಿಯನ್ ಕನ್ಸರ್ಟ್ ಪಿಯಾನೋ ವಾದಕರು ಮತ್ತು ಕನ್ಸರ್ಟ್ ಮಾಸ್ಟರ್‌ಗಳಾದ ನಟಾಲಿಯಾ ಕಪಿಲೋವಾ ಮತ್ತು ಲಿಯುಡ್ಮಿಲ್ಲಾ ಅಲಿಜಾರ್ಕಿಕ್ ಅವರಿಂದ ಪಾಶ್ಚಿಮಾತ್ಯ ಪಿಯಾನೋ ಪಾಠಗಳನ್ನು ಕಲಿತುಕೊಂಡಿದ್ದಾರೆ.

ತಮ್ಮ 12ನೇ ವಯಸ್ಸಿನಲ್ಲಿ, 2020ರ ಡಿಸೆಂಬರ್ ತಿಂಗಳಿನಲ್ಲಿ ಫಟೀನ್ ಅವರು ಲಂಡನ್ ಕಾಲೇಜ್ ಆಫ್ ಮ್ಯೂಸಿಕ್ (LCM) ನಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಭಾರತೀಯರಲ್ಲಿ ಒಬ್ಬರಾಗಿದ್ದಾರೆ.

Rashtriya Bal Puraskar 2022: Bengalurus child Syed Fateen Ahmed and Mangaluru dancer Remona Evette Pereira Receive Award

ತಮ್ಮ ಮಗನಿಗೆ ಪ್ರಶಸ್ತಿಯನ್ನು ನೀಡಿರುವುದು ಗೌರವದ ವಿಷಯ ಎಂದಿರುವ ಫಟೀನ್ ಅವರ ಪೋಷಕರಾದ ಅಸ್ಮಾ ಮತ್ತು ಸೈಯದ್ ಜಮೀರ್, "ನಾವು ಅವರ ಬಗ್ಗೆ ಪ್ರಧಾನಿಯವರ ಟ್ವೀಟ್ ಅನ್ನು ಓದಿದ್ದೇವೆ. ಇದು ತುಂಬಾ ಉತ್ತೇಜನಕಾರಿಯಾಗಿದೆ," ಎಂದು ಹೇಳಿದರು.

ನಗರದ ಸಂವೇದ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ ಫಾಟೀನ್ ಪಾಶ್ಚಿಮಾತ್ಯ ಸಂಗೀತದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಬಯಸುತ್ತಾನೆ ಮತ್ತು ಸೌಂಡ್ ಇಂಜಿನಿಯರ್ ಆಗಲು ಬಯಸುತ್ತಾನೆ. ಸಂಗೀತದ ಹೊರತಾಗಿ ಚಿತ್ರಕಲೆ, ಚೆಸ್, ಈಜುಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಬೆಂಗಳೂರು ನಗರ ಡಿಸಿ ಜೆ ಮಂಜುನಾಥ್ ಸನ್ಮಾನಿಸಿದರು.

ಬೆಂಗಳೂರು ನಗರದ ಸಂವೇದ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಫಟೀನ್ ಪಾಶ್ಚಿಮಾತ್ಯ ಸಂಗೀತದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಬಯಸಿದ್ದಾನೆ ಮತ್ತು ಸೌಂಡ್ ಇಂಜಿನಿಯರ್ ಆಗಲು ಇಷ್ಟಪಟ್ಟಿದ್ದಾನೆ. ಸಂಗೀತದ ಹೊರತಾಗಿ ಚಿತ್ರಕಲೆ, ಚೆಸ್, ಈಜುಗಳಲ್ಲಿಯೂ ಆಸಕ್ತಿ ಹೊಂದಿದ್ದು, ಕಂದಾಯ ಭವನದಲ್ಲಿ ಫಟೀನ್ ಅವರನ್ನು ಬೆಂಗಳೂರು ನಗರ ಡಿಸಿ ಜೆ. ಮಂಜುನಾಥ್ ಸನ್ಮಾನಿಸಿದರು.

ಫಟೀನ್ ಜೊತೆಗೆ ಸಮಾಜ ಸೇವಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಉತ್ತರ ಪ್ರದೇಶದ ಅಭಿನವ್ ಕುಮಾರ್ ಚೌಧರಿ ಅವರನ್ನು ಬೆಂಗಳೂರು ಜಿಲ್ಲಾಡಳಿತ ಸನ್ಮಾನಿಸಿತು.

Rashtriya Bal Puraskar 2022: Bengalurus child Syed Fateen Ahmed and Mangaluru dancer Remona Evette Pereira Receive Award

ಅಧಿಕಾರಿಗಳ ಪ್ರಕಾರ ಚೌಧರಿ ಅವರು ಬೆಂಗಳೂರು ನಗರದ ಜವಾಹರ್ ನವೋದಯ ಶಾಲೆಯಲ್ಲಿ ಓದುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಪುಸ್ತಕಗಳ ಮರುಬಳಕೆಯನ್ನು ಉತ್ತೇಜಿಸಲು ಚೌಧರಿ ಅವರು ಅಪ್ಲಿಕೇಶನ್ ಅನ್ನು ರಚಿಸಿದ್ದರು, ಇದು ಗ್ರಾಮೀಣ ಭಾರತದ ಸಾವಿರಾರು ಮಕ್ಕಳಿಗೆ ಪ್ರಯೋಜನವನ್ನು ನೀಡಿತು.

ಗಾಜಿನ ಚೂರುಗಳ ಮೇಲೆ ರೆಮೋನಾ ನೃತ್ಯ
ಮೂರರ ಹರೆಯದಲ್ಲೇ ನೃತ್ಯ ಕಲಿಯಲು ಆರಂಭಿಸಿದ ಮಂಗಳೂರಿನ ರೆಮೋನಾ ಇವೆಟ್ ಪಿರೇರಾ, "ಆರಂಭದಲ್ಲಿ ಗಾಜಿನ ಚೂರುಗಳ ಮೇಲೆ ಡ್ಯಾನ್ಸ್ ಮಾಡುವುದು ಕಷ್ಟವಾಗಿತ್ತು. ಹಲವು ಬಾರಿ ಗಾಜಿನ ಚೂರುಗಳು ಚುಚ್ಚಿವೆ. ಆದರೆ ನನ್ನ ತಾಯಿಯ ನಿರಂತರ ಪ್ರೋತ್ಸಾಹದಿಂದ ನಾನು ನೃತ್ಯವನ್ನು ಕರಗತ ಮಾಡಿಕೊಂಡೆ," ಎಂದು ತಿಳಿಸಿದರು.

"ಆರ್ಥಿಕ ತೊಂದರೆಗಳ ಹೊರತಾಗಿಯೂ, ನನ್ನ ತಾಯಿ ಗ್ಲಾಡಿಸ್ ಸೆಲಿನ್ ನನ್ನನ್ನು ಶಾಸ್ತ್ರೀಯ ನೃತ್ಯ ಶಾಲೆಗೆ ಸೇರಿಸಿದರು. ನಾನು ಈಗ ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿನ ಸಂಸ್ಕೃತಿಯ ವೈವಿಧ್ಯತೆಯನ್ನು ಜಗತ್ತಿಗೆ ಎತ್ತಿ ತೋರಿಸುವ ಉತ್ಸಾಹದಲ್ಲಿದ್ದೇನೆ. ತನ್ನ ತಂದೆಯ ಮರಣದ ನಂತರ ತನ್ನ ತಾಯಿ ಹೇಗೆ ಕಷ್ಟಪಡಬೇಕಾಯಿತು," ಎಂದು ರೆಮೋನಾ ನೆನಪಿಸಿಕೊಂಡರು.

English summary
Rashtriya Bal Puraskar 2022 Winners: Bengaluru based western music prodigy Syed Fateen Ahmed and Mangaluru Based Bharatanatyam dancer Remona Evette Pereira were among the 29 children who received the Pradhan Mantri Rashtriya Bal Puraskar award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X