ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ ಎಂ. ವಿಶ್ವೇಶ್ವರಯ್ಯ ಭಾರತ ರತ್ನ ಸ್ವೀಕರಿಸುತ್ತಿರುವ ಅಪರೂಪದ ವಿಡಿಯೋ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ದೇಶ ಕಂಡ ಹೆಮ್ಮೆಯ ಎಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಎಂಜಿನಿಯರ್‌ಗಳ ದಿನವೆಂದು ಎಲ್ಲೆಡೆ ಆಚರಿಸಲಾಗುತ್ತಿದೆ.

ಇಂಜಿನಿಯರ್ಸ್ ಡೇ : ಸರ್ ಎಂವಿ ಸಾಧನೆ ಸ್ಮರಿಸಿದ ಟ್ವೀಟ್ ಲೋಕಇಂಜಿನಿಯರ್ಸ್ ಡೇ : ಸರ್ ಎಂವಿ ಸಾಧನೆ ಸ್ಮರಿಸಿದ ಟ್ವೀಟ್ ಲೋಕ

ಎಂಜಿನಿಯರ್‌ಆಗಿ, ವಿದ್ವಾಂಸರಾಗಿ, ಮೈಸೂರಿನ ದಿವಾನರಾಗಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಅವರ ಸಾಧನೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪುರಸ್ಕಾರವನ್ನು 1955ರಲ್ಲಿ ಪ್ರದಾನ ಮಾಡಲಾಯಿತು.

ದಾರ್ಶನಿಕ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ! ಸಾಧನೆ, ಕೊಡುಗೆಗಳುದಾರ್ಶನಿಕ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ! ಸಾಧನೆ, ಕೊಡುಗೆಗಳು

ಸರ್‌ ಎಂ.ವಿ. ಅವರು ಭಾರತ ರತ್ನ ಸ್ವೀಕರಿಸುವ ಸಂದರ್ಭದ ಅಪರೂಪದ ವಿಡಿಯೋವನ್ನು ಸಿನಿಮಾ ನಿರ್ದೇಶಕ ಯೋಗರಾಜ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

rare video of visvesvaraya receiving Bharat ratna award shared by yograj bhat

ವಿಶ್ವೇಶ್ವರಯ್ಯ ಅವರನ್ನು ಕುರಿತಾದ ಸಾಕ್ಷ್ಯಚಿತ್ರವೊಂದರಲ್ಲಿ ಈ ವಿಡಿಯೋ ತುಣುಕು ಬಳಕೆಯಾಗಿದೆ.

ಭಾರತರತ್ನ ಸರ್‌ಎಂ. ವಿಶ್ವೇಶ್ವರಯ್ಯನವರಿಗೆ ಗೂಗಲ್ ಡೂಡಲ್ ಗೌರವಭಾರತರತ್ನ ಸರ್‌ಎಂ. ವಿಶ್ವೇಶ್ವರಯ್ಯನವರಿಗೆ ಗೂಗಲ್ ಡೂಡಲ್ ಗೌರವ

ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಯೋಗರಾಜ್ ಭಟ್, ಎಂಜಿನಿಯರ್‌ಗಳ ದಿನಾಚರಣೆಯ ಶುಭ ಹಾರೈಸಿದ್ದಾರೆ. 'ಈ ದಿನ, ನಮ್ಮ ದೇಶವನ್ನು ನಿರ್ಮಿಸುತ್ತಿರುವ ಪ್ರತಿಯೊಬ್ಬ ಎಂಜಿನಿಯರ್‌ಗೂ ನಮ್ಮದೊಂದು ಸೆಲ್ಯೂಟ್!' ಎಂದು ಅವರು ಫೇಸ್‌ಬುಕ್ ಗೋಡೆಯ ಮೇಲೆ ಬರೆದಿದ್ದಾರೆ.

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಗ್ರಾಮದಲ್ಲಿ 1861ರ ಸೆಪ್ಟೆಂಬರ್ 15ರಂದು ಜನಿಸಿದ ವಿಶ್ವೇಶ್ವರಯ್ಯ, ಅಣೆಕಟ್ಟು, ಕಾರ್ಖಾನೆ, ವಿಶ್ವವಿದ್ಯಾಲಯಗಳ ನಿರ್ಮಾಣ ಕಾರ್ಯಗಳಿಂದ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶದ ಅನೇಕ ಭಾಗಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು.

1962ರಲ್ಲಿ ನಿಧನರಾದ ವಿಶ್ವೇಶ್ವರಯ್ಯ ಅವರ ಬದುಕು ಇಂದಿಗೂ ಸ್ಫೂರ್ತಿದಾಯಕ.

English summary
Director Yograj Bhat has shared a rare video of Sir M. Visvesvaraya receiving Bharat Ratna Award in 1955.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X