ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಹೆಸರಿಲ್ಲ!
ಬೆಂಗಳೂರು, ಮಾರ್ಚ್ 31: ಕಾಂಗ್ರೆಸ್ ಪಕ್ಷವು ಕರ್ನಾಟಕದ ಲೋಕಸಭೆ ಚುನಾವಣೆಗಾಗಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 40 ಮಂದಿ ಪ್ರಚಾರಕರ ಪಟ್ಟಿಯಲ್ಲಿ ಮಾಜಿ ಸಂಸದೆ ರಮ್ಯಾರನ್ನು ಪಟ್ಟಿಯಿಂದ ದೂರವಿಡಲಾಗಿದೆ.
ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 77 (1) ರ ಅನ್ವಯ ಕಾಂಗ್ರೆಸ್ ಪಕ್ಷವು ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 18, 2019ರ ಎರಡನೇ ಹಂತದ ಚುನಾವಣಾ ಪ್ರಚಾರಕರ ಪಟ್ಟಿ ಹೀಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಮೋತಿಲಾಲ್ ವೋರಾ ಅವರು ತಿಳಿಸಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮನಮೋಹನ್ ಸಿಂಗ್ ಮತ್ತು ನಟಿ ಖುಷ್ಬೂ ಸೇರಿದಂತೆ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

1. ರಾಹುಲ್ ಗಾಂಧಿ
2. ಸೋನಿಯಾ ಗಾಂಧಿ
3. ಮನಮೋಹನ್ ಸಿಂಗ್
4. ಪ್ರಿಯಾಂಕಾ ಗಾಂಧಿ ವದ್ರಾ
5. ಕೆ.ಸಿ. ವೇಣುಗೋಪಾಲ್
6. ದಿನೇಶ್ ಗುಂಡೂರಾವ್
7. ಸಿದ್ದರಾಮಯ್ಯ
8. ಜಿ ಪರಮೇಶ್ವರ
9. ಮಲ್ಲಿಕಾರ್ಜುನ ಖರ್ಗೆ
10. ಡಿ.ಕೆ ಶಿವಕುಮಾರ್
11. ಎಚ್ ಕೆ ಪಾಟೀಲ್
12. ರಾಮಲಿಂಗಾರೆಡ್ಡಿ
13. ಸಿ.ಎಂ ಇಬ್ರಾಹಿಂ
14. ಗುಲಾಂ ನಬಿ ಅಜಾದ್
15. ಪೃಥ್ವಿರಾಜ್ ಚವಾಣ್
16. ಸಚಿನ್ ಪೈಲಟ್
17. ಸಲೀಂ ಅಹ್ಮದ್
18. ಖುಷ್ಬೂ ಸುಂದರ್
19. ಆರ್ ವಿ ದೇಶಪಾಂಡೆ
20. ಎಂ.ಬಿ ಪಾಟೀಲ್
21. ಕೆ.ಜೆ ಜಾರ್ಜ್
22. ಸತೀಶ್ ಜಾರಕಿಹೊಳಿ
23. ಕೃಷ್ಣ ಬೈರೇಗೌಡ
24. ಬಿ. ಜಡ್ಜ್. ಜಮೀರ್ ಅಹ್ಮದ್ ಖಾನ್
25. ಜಯಮಾಲಾ
26. ಆರ್ ಬಿ ತಿಮ್ಮಾಪುರ್
27. ಪಿ.ಟಿ ಪರಮೇಶ್ವರ್ ನಾಯ್ಕ್
28. ಕೆ ರೆಹ್ಮಾನ್ ಖಾನ್
29. ಕೆಎಚ್ ಮುನಿಯಪ್ಪ
30. ಶರಣ್ ಪ್ರಕಾಶ್ ಪಾಟೀಲ್
31. ಎಚ್ಎಂ ರೇವಣ್ಣ
32. ಮೋಟಮ್ಮ
33. ಉಮಾಶ್ರೀ
34. ಮುಖ್ಯಮಂತ್ರಿ ಚಂದ್ರು
35. ರೋಷನ್ ಬೇಗ್
36. ಎಚ್ ಸಿ ಮಹದೇವಪ್ಪ
37. ಎಲ್ ಹನುಮಂತಪ್ಪ
38. ವಿಆರ್ ಸುದರ್ಶನ್
39. ಬಿಎಲ್ ಶಂಕರ್
40. ಐವಾನ್ ಡಿಸೋಜಾ












Click it and Unblock the Notifications