ವಿಧಾನಸಭೆಯಲ್ಲಿ ಪ್ರತಿಧ್ವನಿಸಲಿದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣ!
ಬೆಂಗಳೂರು,
ಮಾ. 22: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣ ಇಂದು ವಿಧಾನಸಬೆಯಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ. 'ಸಿಡಿ' ಬಿಡುಗಡೆಯಾಗಿದೆ ಈಗಾಗಲೇ 21 ದಿನಗಳು ಕಳೆದಿವೆ. ಜೊತೆಗೆ ಎಸ್‌ಐಟಿ ತನಿಖೆಯೂ ನಡೆದಿದೆ. ಇಡೀ ಪ್ರಕರಣದ ಕುರಿತು ನಿಯಮ 60ರಡಿ ಚರ್ಚೆ ಮಾಡಲು ನಿಲುವಳಿ ಸೂಚನೆ ನೋಟಿಸನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆ ಕಾಯದರ್ಶಿ ಅವರಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ. id="toptextpromo"> id='are-slot-1' class='oiad oi-axt oiadv'>ಇದೇ
ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪೋಲಿಸ್ ಆಯುಕ್ತ ಕಮಲ್ ಪಂತ್ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಜೊತೆಗೆ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಕೂಡ ವಿಧಾನಸೌಧಕ್ಕೆ ಬಂದಿದ್ದು, 'ಸಿಡಿ' ಪ್ರಕರಣದ ತನಿಖೆಯ ವಿವರಗಳನ್ನು ಸರ್ಕಾರಕ್ಕೆ ಕೊಡಲಿದ್ದಾರೆ ಎಂಬ ಮಾಹಿತಿಯಿದೆ. ರಾಜ್ಯ ಬಜೆಟ್ ಅಧಿವೇಶನ ಇಂದು 11ನೇ ದಿನಕ್ಕೆ ಕಾಲಿಟ್ಟಿದೆ. ಬಜೆಟ್ ಮೇಲೆ ಚರ್ಚೆ ಮುಂದುವರೆದಿದ್ದು ಪ್ರಶ್ನೋತ್ತರ ಹಾಗೂ ಶೂನ್ಯವೇಳೆಯ ಬಳಿಕ 'ಸಿಡಿ' ಕುರಿತು ಚರ್ಚೆಗೆ ಅವಕಾಶ ಕೊಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರಿಗೆ ನಿಲುವಳಿ ಸೂಚನೆ ಕೊಡಲಿದ್ದಾರೆ. id='are-slot-2' class='oiad oi-axt oiadv'>
ಇಂದು ಸದನದಲ್ಲಿ ಸಿಡಿಯಲಿದೆ 'ಸಿಡಿ'
ಕಳೆದ ಶುಕ್ರವಾರವೇ 'ಸಿಡಿ' ಪ್ರಕರಣವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕೊಟ್ಟಿದ್ದ ತೀರ್ಪಿನ ಸಂಪೂರ್ಣ ಕಾಪಿ ಅವರಿಗೆ ಸಿಕ್ಕಿರಲಿಲ್ಲವಂತೆ. ಹೀಗಾಗಿ ಶುಕ್ರವಾರದ ಬದಲು ಇಂದು ಸೋಮವಾರ ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದರು. ಅದರಂತೆ ಈಗಾಗಲೇ ವಿಧಾನಸಭೆ ಕಾರ್ಯದರ್ಶಿಗೆ ಸಿದ್ದರಾಮಯ್ಯ ಅವರು ನೋಟಿಸ್ ಕೊಟ್ಟಿದ್ದಾರೆ.

ಎಸ್‌ಐಟಿ ತನಿಖೆಯ ನಿರ್ಧಾರ ಪ್ರಶ್ನಿಸಲಿರುವ ಕಾಂಗ್ರೆಸ್!
ವಿಧಾನಸಭೆಯಲ್ಲಿ ಆರು ಸಚಿವರ ಕೋರ್ಟ್ ಮೊರೆ ವಿಚಾರ ಪ್ರಸ್ತಾಪ ಮಾಡಲು ಸಿದ್ದರಾಮಯ್ಯ ತೀರ್ಮಾನ ಮಾಡಿದ್ದಾರೆ. ಆರು ಸಚಿವರು ಕೋರ್ಟ್‌ಗೆ ಹೋಗಿದ್ದು ಯಾಕೆ ಎಂದು ಪ್ರಶ್ನೆ ಮಾಡಲಿದ್ದಾರೆ ಎನ್ನಲಾಗಿದೆ. ಜೊತೆಗೆ ನಿರ್ಭಯಾ ಪ್ರಕರಣದ ತೀರ್ಪಿನಲ್ಲಿ ಆದೇಶ ಮಾಡಿರುವಂತೆ ಪೊಲೀಸರು ಸುಮೊಟೊ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿರಲಿಲ್ಲ. ಇಷ್ಟೇ ಅಲ್ಲ ಎಫ್‌ಐಆರ್ ದಾಖಲಾಗುವ ಮೊದಲೇ ಎಸ್‌ಐಟಿ ತನಿಖೆ ನಡೆಸಲು ಆರಂಭಿಸಿದ್ದು ಹೇಗೆ ಎಂಬುದನ್ನು ಕೂಡ ಕಾಂಗ್ರೆಸ್ ನಾಯಕರು ಸದಸನದಲ್ಲಿ ಪ್ರಸ್ತಾಪಿಸಲಿದ್ದಾರೆ ಎಂಬ ಮಾಹಿತಿಯಿದೆ.

ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶನ?
'ಸಿಡಿ' ಪ್ರಕರಣದೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ಬಂದಿರುವ ಡಿನೋಟಿಫೀಕೇಶನ್ ವಿಚಾರನ್ನೂ ಪ್ರಸ್ತಾಪಿಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂಬ ಮಾಹಿತಿಯಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಶನ್ ಆರೋಪವನ್ನು ಪ್ರಸ್ತಾಪಿಸಿ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರ ರಾಜೀನಾಮೆಗೆ ಆಗ್ರಹಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಸರ್ಕಾರ-ಅನೈತಿಕ ಸರ್ಕಾರ ಎಂದು ಭಿತ್ತಿಪತ್ರ ಪ್ರದರ್ಶನಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂಬ ಮಾಹಿತಿಯಿದೆ.
Recommended Video

ವರದಿ ಪ್ರಕಟಿಸಿದ್ದ ಒನ್‌ಇಂಡಿಯಾ ಕನ್ನಡ!
'ಸಿಡಿ' ಪ್ರಕರಣದ ಕುರಿತು 'ಒನ್‌ಇಂಡಿಯಾ ಕನ್ನಡ' ವರದಿ ಪ್ರಕಟಿಸುತ್ತಿದ್ದಂತೆಯೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ನಾಯಕರು, ವಿಧಾನಸಭೆಯಲ್ಲಿ ಪ್ರಕರಣದ ಕುರಿತು ಚರ್ಚೆ ನಡೆಸಲು ಅವಕಾಶ ಕೋರಿ ನೋಟಿಸ್ ಕೊಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ 'ಸಿಡಿ' ಬಿಡುಗಡೆಯಾಗಿ 21 ದಿನಗಳ ಬಳಿಕ, ವಿಧಾನಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ಕೊಡುವಂತೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅನುಮತಿ ಕೇಳಿದ್ದಾರೆ. ಇಷ್ಟೊಂದು ಮಹತ್ವದ 'ಸಿಡಿ' ಪ್ರಕರಣವಾಗಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರು ಮುಗುಮ್ಮಾಗಿರುವುದರ ಕುರಿತು "'ಸಿಡಿ' ಪ್ರಕರಣ: ಅಧಿವೇಶನದಲ್ಲಿ ಅಚ್ಚರಿ ಮೂಡಿಸಿದ 'ಕೈ' ನಾಯಕರ ನಡೆ"" ಎಂದು ವರದಿ ಪ್ರಕಟಿಸಿತ್ತು.












Click it and Unblock the Notifications