ಮೇಲುಕೋಟೆಗೆ ಬಂದ ತಿರುಮಲದ ವೆಂಕಟೇಶ್ವರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮೇ 17 : ತಿರುಮಲದ ಶ್ರೀ ವೆಂಕಟೇಶ್ವರಸ್ವಾಮಿ ಮತ್ತು ಶ್ರೀ ಚೆಲುವನಾರಾಯಣನನ್ನು ಮೇಲುಕೋಟೆಯಲ್ಲಿ ನೋಡುವ ಭಾಗ್ಯ ಭಕ್ತರಿಗೆ ಸೋಮವಾರ ಲಭ್ಯವಾಯಿತು. ರಾಮಾನುಜಾಚಾರ್ಯರ 999ನೇ ಜಯಂತಿ ಅಂಗವಾಗಿ ತಿರುಪತಿಯಿಂದ ದೇವರ ವಿಗ್ರಹ ಹೊತ್ತ ರಥ ಮೇಲುಕೋಟೆಗೆ ಆಗಮಿಸಿತ್ತು.

ಸೋಮವಾರ ಮೇಲುಕೋಟೆಯಲ್ಲಿ ನಡೆದ ರಾಮಾನುಜಾಚಾರ್ಯರ ಜಯಂತಿ ನಡೆಯಿತು. ತಿರುಪತಿ ತಿರುಮಲ ದೇವಾಲಯವೂ ಇದಕ್ಕೆ ಕೈ ಜೋಡಿಸಿತ್ತು. ಮೇಲುಕೋಟೆಯಲ್ಲಿ ನಡೆದ ಮಹಾರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. [ಸಂತಾನಪ್ರಾಪ್ತಿಯ ಐತಿಹ್ಯವಿರುವ 'ಯಶಸ್ವೀ' ತೊಟ್ಟಿಲಮಡು ಹರಕೆ]

melkote temple

ತಿರುಮಲದಿಂದ ರಥದ ಮೂಲಕ ಬಂದ ಶ್ರೀನಿವಾಸ ದೇವರ ವಿಗ್ರಹವನ್ನು ದೇವಾಲಯದ ಮುಂಭಾಗಕ್ಕೆ ತಂದ ವೇಳೆ ಚೆಲುವನಾರಾಯಣನಿಗೆ ವಿಶೇಷ ಮಂಗಳಾರತಿ ನೆರವೇರಿಸಲಾಯಿತು. ನಂತರ ಹೂಮಾಲೆಗಳಿಂದ ಶ್ರೀನಿವಾಸನನ್ನು ಅಲಂಕಾರ ಮಾಡಲಾಯಿತು. ಈ ಅದ್ಭುತ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು. [ಮೇಲುಕೋಟೆಗೆ ಕೇಳಿದ್ದು 500 ಕೋಟಿ ರು ಸಿಕ್ಕಿದ್ದು 20 ಕೋಟಿ]

ಶ್ರೀದೇವಿ-ಭೂದೇವಿ ಮತ್ತು ರಾಮಾನುಜರ ಸಮೇತನಾಗಿ ಮೇಲುಕೋಟೆಗೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಶ್ರೀನಿವಾಸರಥ ಮತ್ತು ರಾಮಾನುಜರು ಮತ್ತು ಮಲಯಪ್ಪಸ್ವಾಮಿಯ ರಥವನ್ನು ಅಂಗಡಿ ಬೀದಿಯಲ್ಲಿ ಆನಂದಾಶ್ರಮದ ಶಠಗೋಪ ರಾಮಾನುಜಜೀಯರ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ, ಪಾರುಪತ್ತೇಗಾರ ನಾಗರಾಜ ಅಯ್ಯಂಗಾರ್ ಮುಂತಾದವರು ಸ್ವಾಗತಿಸಿದರು.

melukote

ಮಂಗಳವಾದ್ಯದ ಮೆರವಣಿಗೆಯೊಂದಿಗೆ ರಥವನ್ನು ಚೆಲುವನಾರಾಯಣ ಸ್ವಾಮಿ ದೇಗುಲದ ಆವರಣಕ್ಕೆ ಕರೆತಂದು, ಶ್ರೀನಿವಾಸನಿಗೆ ಮತ್ತು ರಾಮಾನುಜರಿಗೆ ವಿಶೇಷಪೂಜೆ ನೆರವೇರಿಸಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಯಿತು.

ಮೇಲುಕೋಟೆಯಲ್ಲಿ ಒಟ್ಟಿಗೆ ಶ್ರೀನಿವಾಸ ಮತ್ತು ಚೆಲುವನಾರಾಯಣನ ದರ್ಶನ ಭಾಗ್ಯ ಪಡೆಯುವುದು ಅತ್ಯಂತ ಪವಿತ್ರ ಎಂದು ನಂಬಿರುವ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ದರ್ಶನ ಪಡೆದು ಪುನೀತರಾದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 999th birth anniversary of Ramanujacharya was celebrated at Melukote in Pandavapura taluk of Mandya district on Monday. Tirumala Tirupati Devasthanams has extended its support for the celebrations by sending some idols which are usually taken out in a procession during the Kalyanotsavam of Venkateswara at Tirumala.
Please Wait while comments are loading...