Ramangara: ಅಕ್ರಮ ಸಂಬಂಧ ಶಂಕೆ: 42 ವರ್ಷದ ಪತ್ನಿಯ ಕಥೆ ಮುಗಿಸಿದ ಪತಿ

ರಾಮನಗರ: ಅಕ್ರಮ ಸಂಬಂಧದ ಅನುಮಾನ ಹಿನ್ನೆಲೆಯಲ್ಲಿ 42 ವರ್ಷದ ಮಹಿಳೆಯೊಬ್ಬರನ್ನು ಆಕೆ ಪತಿಯೇ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಂದಿರುವ ಘಟನೆ ರಾಮನಗರ ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಭಾನುವಾರ (ಮೇ 31) ಬೆಳಗ್ಗೆ ನಡೆದಿದೆ. ಈ ಧಾರುಣ ಘಟನೆಗೆ ಜಿಲ್ಲೆಯಲ್ಲಿ ಜನರಲ್ಲಿ ಆತಂಕ ಮೂಡಿಸಿದೆ.

ಮೃತ ದುರ್ದೈವಿ ಗೃಹಿಣಿ ನಾಗಮ್ಮ (42) ಎಂದು ಗುರುತಿಸಲಾಗಿದೆ. ಆಕೆಯ ಪತಿ ಕಣಿಮಾದಯ್ಯ ರೈತನಾಗಿದೆ. ಅದೇ ಗ್ರಾಮದಲ್ಲಿ ಇಬ್ಬರು ಕಳೇದ ಮೂರು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಇಬ್ಬರ ಮಧ್ಯ ಮನಸ್ತಾಪಗಳು ಇದ್ದವು. ನಾಗಮ್ಮ ಇದ್ದ ಮನೆಯಿಂದ ನೂರು ಮೀಟರ್ ದೂರದಲ್ಲಿ ಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಈ ದಂಪತಿಗೆ ಅವರಿಗೆ 20ರ ಹರೆಯದ ಇಬ್ಬರು ಮಕ್ಕಳು ಸಹ ಇದ್ದಾರೆ.

Ramanagara

ಮಗಳ ಅನುಪಸ್ಥಿತಿ ಲಾಭ ಪಡೆದ ತಂದೆ

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಳಗ್ಗೆ 7.30ರ ಸುಮಾರಿಗೆ ನಾಗಮ್ಮ ಅವರ ಮಗಳು ಮೊಬೈಲ್‌ನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಗೆ ಬಂದಿದ್ದು. ಮಗಳ ಅನುಪಸ್ಥಿತಿಯ ಅವಕಾಶದ ಲಾಭ ಪಡೆದ ನಾಗಮ್ಮ ಪತಿ ಕಣಿಮಾದಯ್ಯ, ಮಚ್ಚು ಸಮೇತ ಮನೆಯ ಒಳ ಪ್ರವೇಶಿಸಿದ್ದಾನೆ. ಮೊದಲು ಮುಖ್ಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದಾನೆ. ಮಚ್ಚಿನಿಂದ ಪತ್ನಿ ತಲೆ, ಕೈ ಮತ್ತು ಕಾಲುಗಳಿಗೆ ಮನ ಬಂದಂತೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

3500 ಮಂದಿಗೆ ಉಚಿತ ಆರೋಗ್ಯ ವಿಮೆ ಗಿಫ್ಟ್ ಕೊಟ್ಟ ವರನ ಕುಟುಂಬ: ದೇಶವೇ ಅಚ್ಚರಿ
3500 ಮಂದಿಗೆ ಉಚಿತ ಆರೋಗ್ಯ ವಿಮೆ ಗಿಫ್ಟ್ ಕೊಟ್ಟ ವರನ ಕುಟುಂಬ: ದೇಶವೇ ಅಚ್ಚರಿ

ಪತಿ ದಾಳಿಗೆ ನಾಗಮ್ಮ ಚೀರಾಡಿದ್ದಾರೆ. ಅವರ ಚೀರಾಟ ಕೇಳಿದ ಮಗಳು ಮನೆಗೆ ಬಂದು ನೋಡಿದರೆ ಬಾಗಿಲು ಹಾಕಿತ್ತು. ಒಳಗೆ ತಾಯಿಯ ಆರ್ತನಾದ ಕೇಳಿ ನೆರೆಹೊರೆಯವರನ್ನು ಕರೆದು ಕೂಡಿಸಿದ್ದಾರೆ. ಅಷ್ಟೋತ್ತಿಗಾಗಲೇ ತೀವ್ರ ನಾಗಮ್ಮನಿಗೆ ತೀವ್ರ ಗಾಯಗಳಾಗಿ ರಕ್ತ ಜಿನುಗಿತ್ತು. ಗ್ರಾಮಸ್ಥರು ಆಕೆಯನ್ನು ಕರೆದುಕೊಂಡು ಆಸ್ಪತ್ರೆ ತಲುಪುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ನಾಗಮ್ಮ ಮೃತದೇಹವನ್ನು ರಾಮನಗರ ಗ್ರಾಮಾಂತರ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಯೋಗಿತಾ ಎಂಬ ಅವರ ಮಗಳು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಕಣಿಮಾದಯ್ಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಣಿಮಾದಯ್ಯ ಅಪರಾಧವನ್ನು ಒಪ್ಪಿಕೊಂಡಿದ್ದು, ಗ್ರಾಮದ ವ್ಯಕ್ತಿಯೊಂದಿಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು. ಅದಕ್ಕೆ ಹತ್ಯೆಗೈದಿದ್ದಾಗಿ ಆತ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+