ಡಿಕೆಶಿ ಕೊಟ್ಟರು ಡಿಚ್ಚಿ... ಕನಕಪುರ ಬಂಡೆ ಎದುರು ನಡೆಯಲಿಲ್ಲ ಎಚ್‌ಡಿಕೆ ಗೇಮ್ ಪ್ಲಾನ್! Ramanagara District

ಕರ್ನಾಟಕ ರಾಜಕೀಯ ಅಖಾಡದಲ್ಲಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು & ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ಜಿದ್ದಾಜಿದ್ದಿ ದೊಡ್ಡ ಮಟ್ಟಿಗೆ ಬೆಳೆದು ನಿಂತಿದೆ. ಪ್ರತಿಯೊಂದು ವಿಚಾರದಲ್ಲಿ ಕೂಡ ಈ ಇಬ್ಬರೂ ರಾಜಕೀಯ ನಾಯಕರು ಜಿದ್ದಿಗೆ ಬಿದ್ದು ಮುಂದೆ ನುಗ್ಗುತ್ತಾರೆ. ಹೀಗಿದ್ದಾಗ ರಾಮನಗರ ಜಿಲ್ಲೆ ಹೆಸರು ಬದಲಾವಣೆಯ ವಿಚಾರದಲ್ಲಿ ಕೂಡ ದೊಡ್ಡ ತಿಕ್ಕಾಟ ಶುರುವಾಗಿತ್ತು...

ರಾಮನಗರ ಜಿಲ್ಲೆ ಒಂದು ರೀತಿ ಕರ್ನಾಟಕ ರಾಜಕೀಯದ ಹಾಟ್‌ಸ್ಪಾಟ್ ಎನ್ನಬಹುದು, ಯಾಕೆ ಅಂದ್ರೆ ಒಂದು ಕಡೆ ಮೂಲತಃ ರಾಮನಗರ ಜಿಲ್ಲೆ ಅಂದ್ರೆ ಕನಕಪುರದವರೇ ಆಗಿರುವ ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಾಕಷ್ಟು ಹಿಡಿತ ಹೊಂದಿದ್ದಾರೆ. ಹಾಗೇ ಇನ್ನೊಂದು ಕಡೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಸ್ಥಾಪನೆ ಮಾಡಿ ಅಲ್ಲಿನ ಜನರ ವಿಶ್ವಾಸ ಗಳಿಸಿದ್ದರು. ಈ ಮೂಲಕ ರಾಮನಗರ ಜಿಲ್ಲೆ ಜೆಡಿಎಸ್ & ಎಚ್.ಡಿ. ಕುಮಾರಸ್ವಾಮಿ ಅವರ ಪಾಲಿಗೆ ಭದ್ರಕೋಟೆ ಆಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ... ಇದರ ಜೊತೆಗೆ ರಾಮನಗರ ಜಿಲ್ಲೆಯ ಹೆಸರು ಕೂಡ ಬದಲಾಗಿ ಹೋಗಲಿದೆ!

Ramanagara District Name Changed And This Is What Going On In Karnataka Politics

ಡಿಕೆಶಿ ಕೊಟ್ಟರು ಡಿಚ್ಚಿ...

ಕನಕಪುರ ಬಂಡೆ ಅಂತಾ ಫೇಮಸ್ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹಾಗೇ ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಹೆಸರನ್ನೇ ಸಂಪಾದನೆ ಮಾಡಿದ್ದಾರೆ. ಹೀಗಿದ್ದಾಗ ಈ ಇಬ್ಬರೂ ಒಕ್ಕಲಿಗ ನಾಯಕರ ನಡುವೆ ಜಿದ್ದಾಜಿದ್ದಿ ಇದ್ದೇ ಇದೆ, ಅದರಲ್ಲೂ ರಾಮನಗರ ಜಿಲ್ಲೆಯ ವಿಚಾರದಲ್ಲಿ ಒಂದಷ್ಟು ಜೋರಾಗಿಯೇ ಕಿಚ್ಚು ಹೊತ್ತಿಕೊಂಡಿತ್ತು.

ರಾಮನಗರ ಜಿಲ್ಲೆಯ ಹೆಸರು 'ಬೆಂಗಳೂರು ದಕ್ಷಿಣ' ಎಂದು ಬದಲಾವಣೆ ಮಾಡಲು ಒಂದು ಕಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಲ್ಲಾ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದು ಕಡೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಆಗಬಾರದು ಅಂತಾ ಎಚ್.ಡಿ. ಕುಮಾರಸ್ವಾಮಿ ಅವರು ಹಠ ಹಿಡಿದು ಕೂತಿದ್ದರು. ಹೀಗೆ ಇಬ್ಬರ ನಡುವೆ ಶುರುವಾಗಿದ್ದ ಜಟಾಪಟಿಯಲ್ಲಿ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ಗೆದ್ದು ಬೀಗಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+