ಆತ್ಮಸಾಕ್ಷಿಗೆ ವಿರುದ್ಧ ಕೆಲಸ ಮಾಡಲ್ಲ ಎಂದ ರಾಮಲಿಂಗಾರೆಡ್ಡಿ ರಾಜೀನಾಮೆ ಪತ್ರದಲ್ಲಿ ಕಾಗುಣಿತ ದೋಷ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಹಾಗೂ ಖಾತೆ ಹಂಚಿಕೆಯ ಸದ್ದಿನ ನಡುವೆಯೇ, ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಮತ್ತು ಹಾಸ್ಯಕ್ಕೆ ಕಾರಣವಾಗಿದೆ. ಜಲಸಂಪನ್ಮೂಲ ಖಾತೆ ಹಂಚಿಕೆಯಿಂದ ತೀವ್ರ ಅಸಮಾಧಾನಗೊಂಡು ಅವರು ನೀಡಿದ್ದ ಕೇವಲ ನಾಲ್ಕು ಸಾಲುಗಳ ಅಧಿಕೃತ ರಾಜೀನಾಮೆ ಪತ್ರದಲ್ಲಿ ಮೂರು ಗಂಭೀರ ಕಾಗುಣಿತ ದೋಷಗಳು ಪತ್ತೆಯಾಗಿದ್ದು, ನೆಟ್ಟಿಗರು ಇವುಗಳನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಸಚಿವ ಸಂಪುಟದಲ್ಲಿ ಅಸಮಾಧಾನದ ಹೊಗೆ ಆಡಲಾರಂಭಿಸಿತ್ತು. ತಮಗೆ ಹಂಚಿಕೆಯಾದ ಜಲಸಂಪನ್ಮೂಲ ಇಲಾಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದರು. ಇವರ ಮನವೊಲಿಸಲು ನಡೆಸಿದ ಆರಂಭಿಕ ಪ್ರಯತ್ನಗಳು ವಿಫಲವಾಗಿದ್ದವು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖುದ್ದಾಗಿ ನಡೆಸಿದ ಸಂಧಾನ ಯಜ್ಞ ಯಶಸ್ವಿಯಾಗಿದ್ದು, ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Ramalinga Reddy

ನಾಲ್ಕು ಸಾಲಿನ ಪತ್ರದಲ್ಲಿ ಮೂರು ತಪ್ಪುಗಳು

ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂಪಡೆಯುತ್ತಾರೋ ಇಲ್ಲವೋ ಎಂಬುದು ಒಂದು ಕಡೆಯಾದರೆ, ಅವರು ಸಿದ್ಧಪಡಿಸಿದ ರಾಜೀನಾಮೆ ಪತ್ರ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಾಮಾನ್ಯವಾಗಿ ಸಚಿವರೊಬ್ಬರು ಇಂತಹ ಪ್ರಮುಖ ಪತ್ರವನ್ನು ಸಿದ್ಧಪಡಿಸುವಾಗ ಅವರ ಕಚೇರಿಯ ಅಧಿಕಾರಿಗಳು, ಆಪ್ತ ಕಾರ್ಯದರ್ಶಿಗಳು ಮತ್ತು ನೌಕರರು ಹತ್ತಾರು ಬಾರಿ ಪರಿಶೀಲಿಸುತ್ತಾರೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ರಾಜ್ಯದ ಆಡಳಿತ ಭಾಷೆಯಾದ ಕನ್ನಡದ ಪತ್ರದಲ್ಲಿ ಇಷ್ಟೊಂದು ದೋಷಗಳಿರುವುದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದೋಷಗಳೇನು?

* ರಾಜೀನಾಮೆ ಪತ್ರದಲ್ಲಿ 'ವಿರುದ್ದವಾಗಿ' ಎಂದು ಬರೆಯಲಾಗಿದೆ. ಆದರೆ ಸರಿಯಾದ ರೂಪ 'ವಿರುದ್ಧವಾಗಿ' ಆಗಿರಬೇಕು.

* ಪತ್ರದಲ್ಲಿ 'ಸಾದ್ಯವಾಗದ' ಎಂದು ಮುದ್ರಿಸಲಾಗಿದೆ. ಇದರ ಸರಿಯಾದ ರೂಪ 'ಸಾಧ್ಯವಾಗದ' ಎಂದಾಗಬೇಕು.

* ಪತ್ರದಲ್ಲಿ ಬರೆದಿರುವ ಈ ಪದದ ಬದಲು ಸಾಮಾನ್ಯ ಬಳಕೆಯಲ್ಲಿ 'ಮುಂದುವರೆಯುತ್ತೇನೆ' ಎಂದು ಇರಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ರೆಡ್ಡಿ ರಾಜೀನಾಮೆ ಅಂಗೀಕರಿಸೋಲ್ಲ, ಮೋದಿಗೆ ರಾಜಕೀಯ ಬಿಟ್ಟು ಜನತೆಗಾಗಿ ಕೆಲಸ ಮಾಡೋಣವೆಂದ ಡಿಕೆಶಿ
ರೆಡ್ಡಿ ರಾಜೀನಾಮೆ ಅಂಗೀಕರಿಸೋಲ್ಲ, ಮೋದಿಗೆ ರಾಜಕೀಯ ಬಿಟ್ಟು ಜನತೆಗಾಗಿ ಕೆಲಸ ಮಾಡೋಣವೆಂದ ಡಿಕೆಶಿ

ಕನ್ನಡ ಹೋರಾಟಗಾರರ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ

ಈ ರಾಜೀನಾಮೆ ಪತ್ರವನ್ನು ಹಲವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. "ಅನ್ಯ ಭಾಷಾ ಹೇರಿಕೆಯ ವಿರುದ್ಧ ಸದಾ ಧ್ವನಿ ಎತ್ತುವ ನಮ್ಮ ಕನ್ನಡಪರ ಸಂಘಟನೆಗಳು ಮತ್ತು ಕರವೇ ಹೋರಾಟಗಾರರಿಗೆ ಆಡಳಿತ ಚುಕ್ಕಾಣಿ ಹಿಡಿದಿರುವವರ ಇಂತಹ ಭಾಷಾ ಅಸಡ್ಡೆ ಏಕೆ ಕಾಣಿಸುತ್ತಿಲ್ಲ? ಕಂಡೂ ಕಾಣದಂತೆ ತೆಪ್ಪಗಿರುವುದೇಕೆ?" ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

"ದೇವರೇ, ಕರ್ನಾಟಕವನ್ನು ಆಳುವ ಸಚಿವರಿಗೆ ಮತ್ತು ರಾಜಕಾರಣಿಗಳಿಗೆ ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ಪರಿಪೂರ್ಣ ಹಾಗೂ ದೋಷಮುಕ್ತ ರೂಪದಲ್ಲಿ ಬಳಸುವ ಜ್ಞಾನವನ್ನು ಕರುಣಿಸು" ಎಂದು ನೆಟ್ಟಿಗರು ವ್ಯಂಗ್ಯವಾಗಿ ಕಮೆಂಟ್ ಮಾಡುತ್ತಿದ್ದಾರೆ. ರಾಜಕೀಯ ಹೈಡ್ರಾಮಾದ ಮಧ್ಯೆ ಈ ಭಾಷಾ ದೋಷದ ವಿವಾದ ಈಗ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+