ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಚಂದ್ರಾಪುರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ

|
Google Oneindia Kannada News

ಬೆಂಗಳೂರು, ಜ. 14 : ರಾಮಚಂದ್ರಾಪುರ ಮಠಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗಿದೆ ಎಂಬ ವಿವಾದ ಅಂತ್ಯಗೊಂಡಿದೆ. 7 ವರ್ಷದ ನನ್ನ ಮಗನನ್ನು ಉತ್ತರಾಧಿಕಾರಿಯಾಗಿ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ರಾಘವೇಶ್ವರ ಶ್ರೀಗಳ ಆಪ್ತರಾದ ಜಗದೀಶ್ ಶರ್ಮಾ ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಜಗದೀಶ್ ಶರ್ಮಾ ಅವರು, ರಾಮಚಂದ್ರಪುರ ಮಠದ ಮೇಲೆ ಪಿತೂರಿಗಳು ನಡೆಯುತ್ತಿವೆ. ಮಹಿಳೆಯೊಬ್ಬಳನ್ನು ಬಳಸಿಕೊಂಡು ನಡೆಸಿದ ಪಿತೂರಿ ಸೋಲುವ ಹಂತ ತಲುಪಿದಾಗ, ಪುಟ್ಟ ಮಗುವನ್ನು ಬಳಸಿಕೊಂಡು ಮತ್ತೊಂದು ವಿವಾದ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು. [ಶ್ರೀಗಳ ಕೇಸ್, ವಿಚಾರಣೆಯಿಂದ ಹಿಂದೆ ಸರಿದ ಜಡ್ಜ್]

ramachandrapura math

ರಾಮಚಂದ್ರಪುರದ ಮಠಕ್ಕೆ ದೇವಿಶರ್ಮ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂಬ ಆರೋಪ ಆಧಾರರಹಿತವಾಗಿದ್ದು. ನನ್ನ ಮಗ ದೇವಿಶರ್ಮನಿಗೆ ಏಳು ವರ್ಷ ವಯಸ್ಸು, ಅವನನ್ನು ಉತ್ತರಾಧಿಕಾರಿಯಾಗಿ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದರು. [ರಾಘವೇಶ್ವರ ಶ್ರೀಗಳಿಗೆ ನಿಷ್ಠ : ಹವ್ಯಕ ಮಹಾಮಂಡಲ]

ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಅವರು ನಾಲಿಗೆ ಚಪಲಕ್ಕಾಗಿ ಜಗದೀಶ್ ಶರ್ಮ ಅವರು ಮಗನನ್ನು ಉತ್ತರಾಧಿಕಾರಿಯಾಗಿ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇಂತಹ ಹೇಳಿಕೆ ನೀಡಿ ಗೊಂದಲ ಮೂಡಿಸುವ ಬದಲು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. [ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಉತ್ತರಾಧಿಕಾರಿ ಘೋಷಣೆ]

ಮಠದಿಂದಲೂ ಸ್ಪಷ್ಟನೆ : ಜಗದೀಶ್ ಶರ್ಮಾ ಅವರ ಎರಡನೇ ಪುತ್ರನನ್ನು ರಾಮಚಂದ್ರಾಪುರ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂಬ ಸುದ್ದಿಗಳು ಸುಳ್ಳು ಎಂದು ಮಠವೂ ಸ್ಪಷ್ಟನೆ ನೀಡಿದೆ. ಪುಟ್ಟ ಬಾಲಕನನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಠ ಪ್ರಕಟಣೆಯಲ್ಲಿ ತಿಳಿಸಿದೆ.

English summary
Successor not selected for Ramachandrapura mutt, Hosanagara said Jagadish Sharma on Wednesday. Jagadish Sharma said my son Divisharma not selected as successor he is just 7 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X