ರಾಜ್ಯಸಭೆ ಚುನಾವಣೆ ದಿನಾಂಕ ಘೋಷಣೆ

Posted By:
Subscribe to Oneindia Kannada

ಬೆಂಗಳೂರು, ಮೇ 12 : ರಾಜ್ಯಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ವಿಧಾನಸಭೆಯ ಶಾಸಕರು ನಾಲ್ವರು ಸದಸ್ಯರನ್ನು ರಾಜ್ಯಸಭೆಗೆ ಆರಿಸಿ ಕಳಿಸಲಿದ್ದಾರೆ. ಜೂನ್ 11ರಂದು ಚುನಾವಣೆ ನಡೆಯಲಿದೆ.

ಕೇಂದ್ರ ಚುನಾವಣಾ ಆಯೋಗ ಗುರುವಾರ ರಾಜ್ಯಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಕರ್ನಾಟಕ ಸೇರಿದಂತೆ 15 ರಾಜ್ಯಗಳ 57 ಸ್ಥಾನಗಳಿಗೆ ಜೂನ್ 11ರಂದು ಚುನಾವಣೆ ನಡೆಯಲಿದೆ. ಮೇ 24 ರಿಂದ ನಾಮತ್ರ ಸಲ್ಲಿಸಬಹುದಾಗಿದ್ದು, ಮೇ 31 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. [ರಾಜ್ಯಸಭೆ ಸದಸ್ಯರಾಗಲು ಪೈಪೋಟಿ]

vidhana soudha

ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಎಂ.ವೆಂಕಯ್ಯ ನಾಯ್ಡು (ಬಿಜೆಪಿ), ಆಯನೂರು ಮಂಜುನಾಥ್ (ಬಿಜೆಪಿ), ಆಸ್ಕರ್ ಫರ್ನಾಂಡೀಸ್ (ಕಾಂಗ್ರೆಸ್), ವಿಜಯ್ ಮಲ್ಯ(ಪಕ್ಷೇತರ) ಅವರ ಅವಧಿ ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ. ಇವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. [ಕುಮಾರಸ್ವಾಮಿ ರಾಜ್ಯಸಭೆಗೆ, ಗೌಡರ ಸ್ಪಷ್ಟನೆಗಳು]

45 ಮತಗಳು ಬೇಕು : ಕರ್ನಾಟಕ ವಿಧಾನಸಭೆಯಲ್ಲಿ 123 ಶಾಸಕ ಬಲ ಹೊಂದಿರುವ ಕಾಂಗ್ರೆಸ್ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿ ಕಳಿಸುವ ಶಕ್ತಿ ಹೊಂದಿದೆ. ಒಬ್ಬರು ಸದಸ್ಯರು ಆಯ್ಕೆ ಆಗಲು 45 ಮತಗಳು ಬೇಕು. ಒಂದು ವೇಳೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್ 3ನೇ ಸದಸ್ಯರನ್ನು ಆಯ್ಕೆ ಮಾಡಿ ಕಳಿಸಬಹುದಾಗಿದೆ. [ಮತ್ತೆ ರಾಜ್ಯಸಭೆಗೆ ವೆಂಕಯ್ಯ ನಾಯ್ಡು, ಕನ್ನಡಿಗರಿಗೆ ಇಲ್ಲ ಅವಕಾಶ?]

ಬಿಜೆಪಿಯಿಂದ ನಾಯ್ಡು ಆಯ್ಕೆ? : ಬಿಜೆಪಿ ವಿಧಾನಸಭೆಯಲ್ಲಿ 46 ಶಾಸಕ ಬಲ ಹೊಂದಿದೆ. ಆದ್ದರಿಂದ, ಒಬ್ಬರು ಅಭ್ಯರ್ಥಿಯನ್ನು ಆರಿಸಿ ಕಳಿಸಬಹುದಾಗಿದೆ. ಈ ಬಾರಿಯು ರಾಜ್ಯಸಭಾ ಸದಸ್ಯರಾಗಿ ವೆಂಕಯ್ಯ ನಾಯ್ಡು ಅವರು ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಮೂರು ಬಾರಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಅವರು ಆಯ್ಕೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Election commission of India announced schedule for Rajya sabha election 2016. Election will be held for 4 seats on June 11, 2016.
Please Wait while comments are loading...