ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ರಾಜೀವ್‌ ಚಂದ್ರಶೇಖರ್‌ ಕಣಕ್ಕೆ? ಯಾವ ಕ್ಷೇತ್ರ?

ಬೆಂಗಳೂರು, ಫೆಬ್ರವರಿ 17: 2023 ರ ವಿಧಾನಸಭಾ ಚುನಾವಣೆಯಲ್ಲಿ ಯಾರೂ ನಿರೀಕ್ಷೆ ಮಾಡದ ಫಲಿತಾಂಶವನ್ನ ಕಾಂಗ್ರೆಸ್ ಕಂಡಿತ್ತು. ಆದರೆ, ಕಳೆದ ಬಾರೀ ಅಧಿಕಾರದಲ್ಲಿದ್ದ ಬಿಜೆಪಿ ಹೀನಾಯವಾಗಿ ಸೋಲು ಕಂಡಿದ್ದು, ಜೆಡಿಎಸದ ಸಹ ಕೇವಲ 19 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

ಇದೀಗ ಆಡಳಿತರೂಢ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ದತೆಯನ್ನ ನಡೆಸಿದೆ. ಸದ್ಯ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿ ಸಂಸದರಿದ್ದಾರೆ. ಈ ಚುನಾವಣೆಯಲ್ಲಿ ಹಲವು ಹಾಲಿ ಸಂಸದರಿಗೆ ಟಿಕೆಟ್‌ ಕೈ ತಪ್ಪಲಿದೆ. ಅದರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಪಿ ಸಿ ಮೋಹನ್‌ ಅವರಿಗೆ ಟಿಕೆಟ್‌ ಕೈ ತಪ್ಪಿಲಿದ್ದು, ಈ ಕ್ಷೇತ್ರದಿಂದ ಕಣಕ್ಕಿಳಿಸಲು ರಾಜೀವ್‌ ಚಂದ್ರಶೇಖರ್‌ ಭರ್ಜರಿ ಪ್ಲಾನ್‌ ನಡೆಸಿದ್ದಾರೆ.

Rajeev Chandrasekhar is Likely to Contest in Lok Sabha Elections 2024: Know Which Constituency

ಇನ್ನೂ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸುವ ಕುರಿತು ರಾಜೀವ್‌ ಚಂದ್ರ ಶೇಖರ್‌ ಅವರು ಬಿಜೆಪಿ ಹೈಕಮಾಂಡ್‌ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇನ್ನೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಮಾತನಾಡಿ, ನನ್ನ ಮೊದಲ ಲೋಕಸಭಾ ಚುನಾವಣೆಗೆ ಎದುರು ನೋಡುತ್ತಿದ್ದು, ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ನಾನು ಸ್ಪರ್ಧಿಸುವ ಕ್ಷೇತ್ರ ಯಾವುದು ಎಂದು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಸ್ಪರ್ಧೆಸುವ ಕುರಿತು ಒಲವು ತೋರಿದ್ದಾರೆ.

ಸದ್ಯ ಕರ್ನಾಟಕ ರಾಜ್ಯಸಭಾ ಸ್ಥಾನದಿಂದ ಅವರು ನಿವೃತ್ತರಾಗಿರುವ ರಾಜೀವ್‌ ಚಂದ್ರಶೇಖರ್‌ ಅವರು, ಬೆಂಗಳೂರು ಸೆಂಟ್ರಲ್‌ ಅಥವಾ ಕೇರಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದೀಗ ರಾಜೀವ್‌ ಚಂದ್ರಶೇಖರ್‌ ಅವರೇ ಸ್ಪರ್ಧಿಸುವ ಕುರಿತು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

Rajeev Chandrasekhar is Likely to Contest in Lok Sabha Elections 2024: Know Which Constituency

ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದ ಇನ್ನೊಂದು ರೋಚಕ ಹಂತ ನೋಡಲು ಕಾತರನಾಗಿದ್ದೇನೆ. ಲೋಕಸಭಾ ಸದಸ್ಯರಾಗಲು ರಾಜಕಾರಣಿಯು ತಳಮಟ್ಟದ ಅನುಭವ ಹೊಂದಿರಬೇಕು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅಧೀನದಲ್ಲಿ ನನಗೆ ಕೆಲಸ ಮಾಡಲು ಸಾಧ್ಯವಾಗಿದ್ದು ನನ್ನ ಪಾಲಿನ ಅದೃಷ್ಟ. ಹೀಗಾಗಿ ನಾನು ಲೋಕಸಭೆಗೆ ಸ್ಪರ್ಧಿಸಲು ಅರ್ಹನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಬೆಂಗಳೂರಿನಿಂದ ಅಥವಾ ಕೇರಳದ ತಿರುವನಂತಪುರದಿಂದ ಸ್ಪರ್ಧಿಸಬಹುದು ಎಂಬ ವರದಿಯಾಗಿರುವ ಕುರಿತು, ಅವು ಕೇವಲ ಊಹಾಪೋಹ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ನಾಯಕತ್ವ ನಿರ್ಧರಿಸಲಿದೆ. ಅಲ್ಲಿ ನಾನು ಹೋರಾಡಿ ಗೆಲ್ಲುತ್ತೇನೆ ಎಂದು ಹೇಳಿದರು.

ಲೋಕಸಭಾ ಸದಸ್ಯರಾಗಲು ನೀವು ಅತ್ಯಂತ ತಳಮಟ್ಟದ ರಾಜಕಾರಣಿಯಾಗಿರಬೇಕು.ಲೋಕಸಭೆ ಸದಸ್ಯನಾಗುವುದು ಸುಲಭವಲ್ಲ, ಜನರೊಂದಿಗೆ ಸಂಪರ್ಕ ಹೊಂದಿರಬೇಕು. ಈಗಿನ ಮಾಹಿತಿ ಮತ್ತು ಸಾಮಾಜಿಕ ಮಾಧ್ಯಮದ ಈ ಆಧುನಿಕ ಜಗತ್ತಿನಲ್ಲಿ ಅತ್ಯಂತ ಜವಾಬ್ದಾರಿಯುತ ರಾಜಕಾರಣಿಗಳಾಗಿರಬೇಕು. ನಾನು ಅದನ್ನು ಮಾಡಲು ಸಮರ್ಥನಾಗಿದ್ದೇನೆ ಎಂದು ನನ್ನ ನಾಯಕತ್ವ ಭಾವಿಸಿದೆ ಎಂದು ನನಗೆ ಖುಷಿಯಾಗಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+