ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವಾರ್ತಾ ಇಲಾಖೆ ಸಾಕ್ಷ್ಯಚಿತ್ರಕ್ಕೆ ರಜತ ಕಮಲ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 02; ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ್ದ 'ನಾದದ ನವನೀತ ಡಾ. ಪಂಡಿತ್ ವೆಂಕಟೇಶ್ ಕುಮಾರ್' ಸಾಕ್ಷ್ಯಚಿತ್ರವು ರಜತ ಕಮಲ ಪ್ರಶಸ್ತಿ ಪಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲಾಖೆಯ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಭಾರತ ಸರ್ಕಾರವು 2020ರ ಕ್ಯಾಲೆಂಡರ್ ವರ್ಷಕ್ಕೆ ಅನ್ವಯಿಸಿದಂತೆ ನೀಡುವ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ್ದ ಸಾಕ್ಷ್ಯಚಿತ್ರವು ರಜತ ಕಮಲ ಪ್ರಶಸ್ತಿ ಪಡೆದಿದೆ.

ಉಡುಪಿಗೆ ರಜತ ಮಹೋತ್ಸವ; ಜಿಲ್ಲೆ ರಚನೆ ಹಿಂದಿನ ಕಥೆ ಉಡುಪಿಗೆ ರಜತ ಮಹೋತ್ಸವ; ಜಿಲ್ಲೆ ರಚನೆ ಹಿಂದಿನ ಕಥೆ

ಧಾರವಾಡದ ಅದ್ವಿತೀಯ ಹಿಂದುಸ್ತಾನಿ ಗಾಯಕರಾದ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020ರಲ್ಲಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿತ್ತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದರು.

ರಜತ ಸಂಭ್ರಮ: ಎಸ್.ಎಲ್. ಭೈರಪ್ಪನವರಿಗೆ ಕೃಷ್ಣಾನುಗ್ರಹ ಪ್ರಶಸ್ತಿರಜತ ಸಂಭ್ರಮ: ಎಸ್.ಎಲ್. ಭೈರಪ್ಪನವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಚಲನಚಿತ್ರೇತರ ವಿಭಾಗದ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ. ಶುಕ್ರವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ರಜತ ಕಮಲ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕ ಹೂಡಿಕೆಗೆ ಪ್ರಶಸ್ತ ತಾಣ: ಚೀನಾ-ಇಂಡಿಯಾ ವೇದಿಕೆಯಲ್ಲಿ ಸಿಎಂಕರ್ನಾಟಕ ಹೂಡಿಕೆಗೆ ಪ್ರಶಸ್ತ ತಾಣ: ಚೀನಾ-ಇಂಡಿಯಾ ವೇದಿಕೆಯಲ್ಲಿ ಸಿಎಂ

ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ

ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ

ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮಾತನಾಡಿ, "68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಕನ್ನಡದ 'ಡೊಳ್ಳು' ಅತ್ಯುತ್ತಮ ಕನ್ನಡ ಚಲನಚಿತ್ರ ಮತ್ತು ಪರಿಸರ ಸಂರಕ್ಷಣೆ ವಿಭಾಗದಲ್ಲಿ 'ತಲೆದಂಡ' ಚಲನಚಿತ್ರವು ಅತ್ಯುತ್ತಮ ಪ್ರಶಸ್ತಿಯನ್ನು ಸೆಪ್ಟೆಂಬರ್ 30ರಂದು ನಡೆದ ಸಮಾರಂಭದಲ್ಲಿ ಸ್ವೀಕರಿಸಿದವು. ಅದೇ ರೀತಿ ವಾರ್ತಾ ಇಲಾಖೆಯು ಸಹ ನಾದದ ನವನೀತ ಸಾಕ್ಷ್ಯಚಿತ್ರವು ರಜತ ಕಮಲ ಪ್ರಶಸ್ತಿಯನ್ನು ಸ್ವೀಕರಿಸಿದೆ. ಈ ಎಲ್ಲಾ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳ ನಿರ್ಮಾಣ ತಂಡಗಳ ಸಾಧನೆಯನ್ನು ಮುಖ್ಯಮಂತ್ರಿಗಳು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ" ಎಂದರು.

ಸಾಕ್ಷ್ಯಚಿತ್ರ ನಿರ್ಮಾಣ

ಸಾಕ್ಷ್ಯಚಿತ್ರ ನಿರ್ಮಾಣ

ರಾಷ್ಟ್ರಮಟ್ಟದಲ್ಲಿ ರಜತ ಕಮಲ ಪ್ರಶಸ್ತಿಗಳ ಮೂಲಕ ಕನ್ನಡ ಚಿತ್ರರಂಗದ ಸಾಧನೆಯನ್ನು ಉನ್ನತ ಮಟ್ಟಕ್ಕೆ ಏರಿಸಿರುವ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಎಲ್ಲಾ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರತಂಡದ ಸಾಧನೆಯ ಶ್ಲಾಘನೀಯ.

"ಅದರಲ್ಲೂ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ವಾರ್ತಾ ಇಲಾಖೆಯು ಸದಾ ಮುಂಚೂಣಿಯಲ್ಲಿದೆ. ಇಲಾಖೆಯ ಸಂಗ್ರಹಗಾರದಲ್ಲಿ ಅಪರೂಪದ ಸಾಕ್ಷ್ಯಚಿತ್ರಗಳಿವೆ. 2020ರ ಸಾಲಿನದ್ದು ಶ್ರೇಷ್ಠ ಸಾಧನೆಯಾಗಿದೆ" ಎಂದು ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಬಣ್ಣಿಸಿದ್ದಾರೆ.

ಇಲಾಖೆ ಸಾಧನೆ ಮಾಡಿದೆ

ಇಲಾಖೆ ಸಾಧನೆ ಮಾಡಿದೆ

"ಇದೇ ಮೊದಲ ಬಾರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯು ನಿರ್ಮಿಸಿರುವ ಸಾಕ್ಷ್ಯಚಿತ್ರವು ರಾಷ್ಟ್ರೀಯ ಮಟ್ಟದಲ್ಲಿ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ. ಹಾಗೆಯೇ, 2020ರಲ್ಲಿ ವಾರ್ತಾ ಇಲಾಖೆಯೊಂದೇ ದೇಶದಲ್ಲಿ ಈ ಬಗೆಯ ಸಾಧನೆಯನ್ನು ಮಾಡಿದೆ" ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ. ಹರ್ಷ ಪಿ. ಎಸ್. ಹೇಳಿದರು.

ಇಲಾಖೆಯ ಎಲ್ಲರಿಗೂ ಅಭಿನಂದನೆ

ಇಲಾಖೆಯ ಎಲ್ಲರಿಗೂ ಅಭಿನಂದನೆ

"ಇಲಾಖೆಗೆ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ರಜತ ಕಮಲ ಪ್ರಶಸ್ತಿ ಸಂದಿರುವುದು ಇಲಾಖೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕಾಗಿ ಶ್ರಮಿಸಿದ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಮತ್ತು ವೈಯಕ್ತಿಕವಾಗಿ ಹಿರಿಯ ಹಾಗೂ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಇಲಾಖೆಯು ಇನ್ಮುಂದೆಯೂ ಉತ್ತಮ ಸದಭಿರುಚಿಯ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲಿದೆ" ಎಂದು ಡಾ. ಹರ್ಷ ಪಿ. ಎಸ್. ಹೇಳಿದರು.

English summary
Karnataka information & publicity department bagged Silver Lotus Award (Rajat Kamal) for Naadad Navaneetha Dr. Pandit Venkatesh Kumar documentary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X