ಮಳೆ ಕೊರತೆ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್ 18: ಕರ್ನಾಟಕದಲ್ಲಿನ ಮಳೆ ಕೊರತೆ, ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರು ಸೇರಿದಂತೆ ಹಲವು ವಿವರಗಳುಳ್ಳ ಪತ್ರವನ್ನು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದಾರೆ. ಪತ್ರದ ಮೂಲಕ ರಾಜ್ಯದ ಸದ್ಯದ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದಾರೆ.

ಕೃಷ್ಣಾ ಮತ್ತು ಕಾವೇರಿ ನದಿ ಕೊಳ್ಳದಲ್ಲಿ ಮಳೆ ಕೊರತೆ ಉಂಟಾಗಿದೆ. ಇದು ರಾಜ್ಯದ ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಸಿದ್ದರಾಮಯ್ಯ ವಿವರಿಸಿದ್ದಾರೆ.[ಬಿಬಿಎಂಪಿಗೆ ಸೇರಿದ 110 ಗ್ರಾಮಗಳಿಗೆ ಶೀಘ್ರವೇ ನೀರಿನ ಭಾಗ್ಯ]

karnataka

ಜಲಾಶಯಗಳು ಶೇ. 46-48 ರಷ್ಟು ನೀರಿನ ಸಂಗ್ರಹವನ್ನು ಹೊಂದಿವೆ. ಬೆಂಗಳೂರು ಸೇರಿದಂತೆ ಅನೇಕ ಕಡೆ ಕುಡಿಯುವ ನೀರಿಗೆ ತೊಂದರೆಯಾಗಬಹುದು. ಸರ್ಕಾರ ಈಗಾಗಲೇ ಪರಿಹಾರ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ.[ಅಡಿಕೆ, ತೆಂಗು ಬೆಳೆಗಾರರ ಹಿತ ಕಾಯಲು ಮತ್ತೊಮ್ಮೆ ಕೇಂದ್ರಕ್ಕೆ ಮನವಿ]

karnataka

ಈ ಬಾರಿ ಸಾಮಾನ್ಯ ಮಳೆಯಾಗಿದ್ದು ಮಾನ್ಸೂನ್ ಮಾರುತಗಳು ಆರ್ಭಟಿಸಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲರೂ ಒಂದಾಗಬೇಕಿದೆ ಎಂದು ಸಿದ್ದರಾಮಯ್ಯ ಕೋರಿಕೊಂಡಿದ್ದು ರಾಜ್ಯದ ವಾಸ್ತವದ ಸ್ಥಿತಿಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

karnataka

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka CM Siddaramaiah wrote to Prime Minister Narendra Modi to brief him on the severe rainfall shortage in Karnataka and its possible adverse impact on the water availability for drinking, cultivation and on hydel power generation in the state this year. The overall rainfall deficit in the state during the south-west monsoon(1st June-15 Aug 2016) is 10% and the severe rainfall shortage in Cauvery and Krishna river catchment areas have left the reservoirs with just 46-48% of their storage capacity, CM pointed out in his letter.
Please Wait while comments are loading...