ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆಯ ರೆಡ್ ಅಲರ್ಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18: ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ವ್ಯಾಪಕವಾಗಿ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.ಸೆಪ್ಟೆಂಬರ್ 19ರಿಂದ 21ರವರೆಗೆ ಆರೆಂಜ್ ಅಲರ್ಟ್, ಸೆಪ್ಟೆಂಬರ್ 21ರಿಂದ 22ರವರೆಗೆ ರೆಡ್‌ ಅಲರ್ಟನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಆಗುಂಬೆಯಲ್ಲಿ 15 ಸೆಂ.ಮೀ ಮಳೆಯಾಗಿದೆ.

ಶಿವಮೊಗ್ಗ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟಶಿವಮೊಗ್ಗ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಮಂಕಿ, ಪಣಂಬೂರು, ಮಂಗಳೂರು, ಕೊಲ್ಲೂರು, ಕಾರವಾರ, ಭಟ್ಕಳ, ಶಿರಾಲಿ, ಕುಂದಾಪುರ, ಸಿದ್ದಾಪುರ, ಕಾರ್ಕಳ, ಮಾಣಿಯಲ್ಲಿ ಭಾರಿ ಮಳೆಯಾಗಿದೆ.

Rain Red Alert Issued For Karnatakas Coastal And Malnad Region

ಗೋಕರ್ಣ, ಕುಮಟಾ, ಮೂಡಬಿದಿರೆ, ಇಳಕಲ್, ಅಂಕೋಲಾ, ಉಡುಪಿ, ಕೊಟ್ಟಿಗೆಹಾರ, ಬನವಾಸಿ, ಚಿತ್ತಾಪುರ, ಶಿರಸಿ, ಬಾಗಲಕೋಟೆ, ಹುನಗುಂದ, ಕಂಪ್ಲಿ, ಬಸವಕಲ್ಯಾಣ, ರಾಮಗಿರಿ, ಸಕಲೇಶಪುರ, ಎಚ್‌ಡಿ ಕೋಟೆಯಲ್ಲಿ ಮಳೆಯಾಗಿದೆ.

Recommended Video

Islam ಧರ್ಮಕ್ಕೆ ಗೆ ಮತಾಂತರ ಆಗಿದ್ದಾರೆಯೇ Sanjjanaa Galrani | Oneindia Kannada

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಚಿಸಲಾಗಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಯೆಲ್ಲೋ , ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.

English summary
Meteorological Department issued Rain Red and Orange alert for Karnataka's Coastal And Malnad Region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X