Karnataka Rain: ಕೆಲವೇ ಕ್ಷಣಗಳಲ್ಲಿ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮುಂಗಾರು ಮಳೆ!
ಮಳೆರಾಯ ಕರ್ನಾಟಕದ ಮೇಲೆ ಕರುಣೆ ತೋರಿಸಿದ್ದಾನೆ. ಮುಂಗಾರು ಮಳೆಯು ಸೈಲೆಂಟ್ ಆಗ್ತಿದೆ ಅಂತಾ ಚಿಂತೆಯಲ್ಲಿ ಮುಳುಗಿದ್ದ ರೈತರಿಗೆ ಕಳೆದ 2 ವಾರಗಳಿಂದ ಖುಷಿ ಆಗುತ್ತಿದೆ. ಯಾಕಂದ್ರೆ ಮುಂಗಾರು ಮಳೆ ಕರ್ನಾಟಕದಲ್ಲಿ ಕಳೆದ 2 ವಾರಗಳಿಂದ ಅಬ್ಬರಿಸುತ್ತಿದೆ. ಹೀಗೆ ಮಳೆ ಅಬ್ಬರಕ್ಕೆ ಜನರು ಕೂಡ ಬೆಚ್ಚಿಬಿದ್ದಿದ್ದು, ನಾಳೆ ಅಂದ್ರೆ ಬುಧವಾರದಿಂದ ಮಳೆರಾಯ ಒಂದಷ್ಟು ಸೈಲೆಂಟ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಯಾಕಂದ್ರೆ ಹಲವು ಜಿಲ್ಲೆಗಳಲ್ಲಿ ನಾಳೆ ಕೂಡ ಭಾರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ.
ಮುಂಗಾರು ಮಳೆ 2024 ರಲ್ಲಿ ನುಡಿದಂತೆ ನಡೆಯುತ್ತಿದೆ ಎನ್ನಬಹುದು. ಯಾಕಂದ್ರೆ ಮಳೆ ಇಲ್ಲದೆ ಬಸವಳಿದು ಹೋಗಿದ್ದ ಕನ್ನಡಿಗರಿಗೆ ಹವಾಮಾನ ಇಲಾಖೆ ಅಧಿಕಾರಿಗಳು ಸಿಹಿಸುದ್ದಿ ನೀಡಿದ್ದರು. ಈ ವರ್ಷ ಅಂದ್ರೆ 2024 ರಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಬೀಳಬಹುದು ಎಂದು ಮುನ್ಸೂಚನೆ ನೀಡಲಾಗಿತ್ತು. ಆದರೂ ಮುಂಗಾರು ಮಳೆ ಜೂನ್ ಕೊನೆಯ ವಾರದ ತನಕ ಹೆಚ್ಚಾಗಿ ಆರ್ಭಟಿಸಲೇ ಇಲ್ಲ.

ಮಳೆ ಬರದ ಕಾರಣ ಜೂನ್ ತಿಂಗಳಲ್ಲಿ ಕರ್ನಾಟಕದ ಡ್ಯಾಂಗಳಿಗೆ ಬರುತ್ತಿದ್ದ ನೀರು ಕೂಡ ಕ್ಷೀಣವಾಗುತ್ತಾ ಸಾಗಿತ್ತು. ಹೀಗಿದ್ದಾಗ ಜೂನ್ ಕೊನೆಯ ವಾರ & ಜುಲೈ ಮೊದಲ ವಾರದಲ್ಲಿ ಮುಂಗಾರು ಮಳೆ ತನ್ನ ಅಸಲಿ ಮುಖ ತೋರಿಸಿದ್ದು, ಭರ್ಜರಿ ಮಳೆಗೆ ಕರ್ನಾಟಕ ರಾಜ್ಯ ಕೂಲ್ ಕೂಲ್ ಆಗಿದೆ. ಹಾಗೇ ಮುಂದಿನ 48 ಗಂಟೆ ಕಾಲ ಈ ಜಿಲ್ಲೆಗಳಿಗೆ ಭಾರಿ ಮಳೆ ಬೀಳುವುದು ಪಕ್ಕಾ ಆಗಿದೆ. ಹಾಗಾದ್ರೆ ಯಾವುವು ಆ ಜಿಲ್ಲೆಗಳು? ಮುಂದೆ ಓದಿ.
ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಈ ಬಾರಿ ಉತ್ತಮವಾಗಿ ಮಳೆ ಬೀಳುತ್ತಿದೆ. ಮಲೆನಾಡು ಪ್ರದೇಶ ಮಾತ್ರವಲ್ಲ, ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಭಾರಿ ಭರ್ಜರಿ ಮಳೆ ಆಗುತ್ತಿದೆ. ಹೀಗಿದ್ದಾಗ ಕರಾವಳಿ ಜಿಲ್ಲೆಗಳು & ಮಲೆನಾಡು ಜಿಲ್ಲೆಗಳಲ್ಲಿ ಜನರು ಮಳೆ ನಿಂತರೆ ಸಾಕಪ್ಪಾ ಅಂತಾ ಕಾಯುತ್ತಿದ್ದರು. ಹೀಗಿದ್ದಾಗಲೇ ನಿನ್ನೆ ಮಳೆ ಅಬ್ಬರ ಒಂದಷ್ಟು ಕಡಿಮೆ ಆಗಿತ್ತು. ಆದರೆ ಮುಂದಿನ 48 ಗಂಟೆ ಕಾಲ ಮತ್ತೆ ಮುಂಗಾರು ಮಳೆಯು ಅಬ್ಬರಿಸಿ ಬೊಬ್ಬಿರುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಲಿದೆ ಗೊತ್ತಾ? ಮುಂದೆ ಓದಿ.
ಮಳೆ.. ಮಳೆ.. ಭರ್ಜರಿ ಮಳೆ!
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ & ಉತ್ತರ ಕನ್ನಡ ಜಿಲ್ಲೆಗಳಿಗೆ ಮಳೆ ಪ್ರಮಾಣ ಈಗ ಒಂದಷ್ಟು ಕಡಿಮೆ ಆಗಿದೆ. ಹೀಗಿದ್ದರೂ ಮುಂದಿನ 48 ಗಂಟೆಯಲ್ಲಿ, ಭಾರಿ ಭರ್ಜರಿ ಮುಂಗಾರು ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ನಾಳೆ ಸಂಜೆ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದರ ಜೊತೆ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆ, ಹಾಸನ, ತುಮಕೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಲಾಗಿದೆ. ಹಾಗಾದ್ರೆ ಉತ್ತರ ಕರ್ನಾಟಕ & ಮಲೆನಾಡು ಜಿಲ್ಲೆಗಳ ಪರಿಸ್ಥಿತಿ ಏನು? ಮುಂದೆ ಓದಿ.
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಜೋರಾಗಿ ಇರಲಿದೆ ಎಂದು ಮುನ್ಸೂಚನೆ ಸಿಕ್ಕಿದ್ದು, ಅತ್ತ ಉತರ್ ಕರ್ನಾಟಕದಲ್ಲಿ ಕೂಡ ಮಳೆರಾಯ ಅಬ್ಬರಿಸಲಿದ್ದಾನೆ. ಈ ಮೂಲಕ ಮುಂದಿನ ಕೆಲವು ದಿನಗಳ ಕಾಲ ಈ ರೀತಿ ಮಳೆ ಆರ್ಭಟಿಸುವುದು ಗ್ಯಾರಂಟಿ ಆಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಈಗ ಸೂಚನೆ ನೀಡಲಾಗಿದೆ.












Click it and Unblock the Notifications