Rain Alert: ಮಳೆ.. ಮಳೆ.. ಬಿಸಿಲು ಬರುವುದು ಯಾವಾಗ? ಈ ವಾರವೂ ವೀಕೆಂಡ್ ಮೋಜು & ಮಸ್ತಿಗೆ ಮಳೆ ಹಾಕಲಿದೆ ಬ್ರೇಕ್!
ಮಳೆ ಕಾಟ ತಡೆಯಲು ಆಗುತ್ತಿಲ್ಲ, ಬೇಸಿಗೆ ಸಮಯದಲ್ಲಿ ಒಂದಷ್ಟು ಮಳೆ ಬಂದರೆ ಸಾಕು ದೇವರೆ ಅಂತಾ ಕಾಯುತ್ತಿದ್ದ ಕನ್ನಡ ನಾಡಿನ ಮಕ್ಕಳಿಗೆ ಮುಂಗಾರು ಮಳೆ ಭಯ ತರಿಸಿದೆ. ಅದ್ರಲ್ಲೂ ಕಳೆದ 2 ತಿಂಗಳಿಂದ ನಿರಂತರವಾಗಿ ಕರ್ನಾಟಕದಲ್ಲಿ ಮಳೆ ಬೀಳುತ್ತಿದೆ. ಹೀಗಾಗಿ ಜನರಿಗೆ ಬಟ್ಟೆ ಒಣಗಿಸಲು ಸಹ ಬಿಸಿಲು ಕಾಣುತ್ತಿಲ್ಲ. ಹಾಗಾದ್ರೆ ಕರ್ನಾಟಕದಲ್ಲಿ ಬಿಸಿಲಿನ ಎಂಟ್ರಿ ಯಾವಾಗ? ಈ ವೀಕೆಂಡ್ ಅಂದ್ರೆ ಶನಿವಾರ & ಭಾನುವಾರ ಕೂಡ ಬೆಂಗಳೂರಿನಲ್ಲಿ ಮಳೆ ಬರಲಿದೆಯಾ? ಮಾಹಿತಿಗಾಗಿ ಮುಂದೆ ಓದಿ.
ಮುಂಗಾರು ಮಳೆ ಶುರುವಾಗಿ ಈಗಾಗಲೇ 2 ತಿಂಗಳು ಕಂಪ್ಲೀಟ್ ಆಗಿದೆ. ಜೂನ್ ತಿಂಗಳಲ್ಲಿ ಎಂಟ್ರಿ ಕೊಟ್ಟಿದ್ದ ಮುಂಗಾರು ಮಳೆಯ ಮೋಡಗಳು ಈಗಲೂ ಸೈಲೆಂಟ್ ಆಗಿಲ್ಲ. ಹೀಗಾಗಿ ಭರ್ಜರಿ ಮಳೆಯಿಂದ ಕರ್ನಾಟಕದ ಜನರು ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಕರ್ನಾಟಕ ರಾಜ್ಯದ ಮಲೆನಾಡು & ಕರಾವಳಿ ಪ್ರದೇಶದಲ್ಲಿ ಮಳೆ ಆರ್ಭಟ ಕೈಮೀರಿ ಹೋಗಿದೆ. ಹೀಗಿದ್ದಾಗಲೇ, ಇಂದು ಕೂಡ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಭರ್ಜರಿ ಮಳೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಭರ್ಜರಿ ಮಳೆ ಬೀಳಲಿರುವ ಜಿಲ್ಲೆಗಳು ಯಾವುವು? ಮಾಹಿತಿ ಮುಂದೆ ತಿಳಿಯೋಣ ಬನ್ನಿ.

ಬೆಂಗಳೂರಿನಲ್ಲಿ ಇಂದು ಭರ್ಜರಿ ಮಳೆ!
ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಕಡಿಮೆ ಆಗುತ್ತಿಲ್ಲ. ನಿರಂತರವಾಗಿ ಮಳೆರಾಯ ಅಬ್ಬರಿಸುತ್ತಿರುವ ಕಾರಣಕ್ಕೆ ಬೆಂಗಳೂರಿನ ಜನರು ಬೆಚ್ಚಿಬಿದ್ದಿದ್ದಾರೆ. ಮುಂಗಾರು ಮಳೆ ಬಿಡುವು ನೀಡದೆ ಸುರಿಯುತ್ತಿದೆ. 2024ರ ಜೂನ್ ತಿಂಗಳಲ್ಲಿ ಶುರುವಾದ ಮಳೆ ಅಬ್ಬರ ಜುಲೈ ತಿಂಗಳಲ್ಲಿ ಕೈಮೀರಿ ಹೋಗಿತ್ತು. ಇದು ಸಾಲದು ಎನ್ನುವಂತೆ ಇದೀಗ ಆಗಸ್ಟ್ ಪೂರ್ತಿ ಮತ್ತೆ ಮಳೆರಾಯ ಅಬ್ಬರಿಸುವ ಮುನ್ಸೂಚನೆ ಸಿಗುತ್ತಿದೆ. ಹಾಗಾದ್ರೆ ಮಳೆ ನಿಂತು ಹೋಗುವುದು ಯಾವಾಗ? ಮುಂದೆ ಓದಿ.
ವೀಕೆಂಡ್ ಮೋಜು & ಮಸ್ತಿಗೆ ಬ್ರೇಕ್!
ಮಳೆಯ ಅಬ್ಬರ ಹೇಗಿದೆ ಅಂದ್ರೆ ಬೆಂಗಳೂರಿನಲ್ಲಿ ಈ ವಾರಾಂತ್ಯದಲ್ಲಿ ಅಂದ್ರೆ ಶನಿವಾರ & ಭಾನುವಾರ ಕೂಡ ಮುಂಗಾರು ಮಳೆ ಅಬ್ಬರಿಸಲಿದೆ. ಹೀಗಾಗಿ ವೀಕೆಂಡ್ ಪಾರ್ಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಜನರಿಗೆ ಮತ್ತೆ ಶಾಕ್ ಸಿಕ್ಕಂತಾಗಿದೆ. ವೀಕೆಂಡ್ ಮೋಜು & ಮಸ್ತಿಗೆ ಪದೇ ಪದೇ ಬ್ರೇಕ್ ಬೀಳುತ್ತಿದೆ. ಜನರು ಕೂಡ ಮಳೆಯ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಹೀಗಾಗಿ ಆದಷ್ಟು ಬೇಗ ಬಿಸಿಲು ಬರಿಸಪ್ಪಾ ದೇವರೆ ಅಂತಿದ್ದಾರೆ. ಇನ್ನು ಬಿಸಿಲು ಬರಲು ಸೋಮವಾರ ಸಾಧ್ಯ ಎನ್ನಲಾಗುತ್ತಿದ್ದು, ಕಾದು ನೋಡಬೇಕಿದೆ. ಹಾಗಾದ್ರೆ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ?
ಮಳೆ ಎಲ್ಲೆಲ್ಲೂ ಆರ್ಭಟಿಸುತ್ತಿದ್ದು, ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಎಲ್ಲವು ಈಗ ಅಲ್ಲೋಲ & ಕಲ್ಲೋಲ ಎಬ್ಬಿಸುತ್ತಿದೆ ಕಳೆದ ಕೆಲವು ವಾರಗಳಿಂದಲೂ ಹೀಗೆ ನಿರಂತರವಾಗಿ ಮಳೆ ಬೀಳುತ್ತಿರುವುದು ಜನರ ಚಿಂತೆಗೆ ಕಾರಣ ಆಗಿತ್ತು. ಹೀಗಿದ್ದಾಗ, ಮಳೆ ಆರ್ಭಟ ಕಡಿಮೆ ಆಗಲಿದೆ ಎನ್ನಲಾಗಿತ್ತು. ಆದರೆ ಈಗ ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭರ್ಜರಿ ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಿದೆ.












Click it and Unblock the Notifications