Karnataka Rain: ಮಳೆ ಆರ್ಭಟ ಮತ್ತಷ್ಟು ಜೋರು, ಕರ್ನಾಟಕದಲ್ಲಿ ಮಳೆಯ ಅಬ್ಬರ ಗ್ಯಾರಂಟಿ!
ಮಳೆ ಇಲ್ಲದೆ ಕನ್ನಡಿಗರು ಕಂಗಾಲಾದ ಸಮಯಕ್ಕೇ ಮಳೆರಾಯ ಕೋಪ ಕಡಿಮೆ ಮಾಡಿಕೊಂಡು ಕರ್ನಾಟಕದ ಮೇಲೆ ಕರುಣೆ ತೋರಿಸಿದ್ದ. ಈ ಕಾರಣಕ್ಕೆ 2024ರ ಬೇಸಿಗೆ ಸಮಯದಲ್ಲೇ ಮಳೆ ಆರಂಭ ಆಗಿತ್ತು. ಯಾಕಂದ್ರೆ ಕಳೆದ ವರ್ಷ ತೀವ್ರ ಬರದ ಕಾರಣ ಒಂದೊಂದು ಹನಿ ನೀರು ಕೂಡ ಕನ್ನಡಿಗರಿಗೆ ಮುಖ್ಯವಾಗಿತ್ತು. ಹೀಗೆ ಬೇಸಿಗೆ ಸಮಯದಲ್ಲಿ ಶುರುವಾದ ಮಳೆ ಇನ್ನೂ ನಿಂತಿಲ್ಲ. ಈಗಾಗಲೇ ಭರ್ಜರಿ ಮುಂಗಾರು ಬಿದ್ದರೂ, ಚಳಿಗಾಲ ಸಮೀಪಿಸುತ್ತಿರುವ ವೇಳೆ ಮತ್ತೆ ಮಳೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇದೀಗ ಮತ್ತೆ ಮಳೆ ಬೀಳಲಿರುವ ಕರ್ನಾಟಕದ ಜಿಲ್ಲೆ & ಪ್ರದೇಶಗಳು ಯಾವುವು?
ಮಳೆಗಾಲ ಮುಗಿದು ಹೋದರೂ ಜನರಿಗೆ ಮಾತ್ರ ನೆಮ್ಮದಿಯೇ ಇಲ್ಲವಾಗಿದೆ ಯಾಕಂದ್ರೆ ಭೂಮಿ ಮೇಲೆ ಪ್ರಾಕೃತಿಕ ವಿಕೋಪ ಹೆಚ್ಚಾಗುತ್ತಿರುವ ಕಾರಣ ಆತಂಕ ನಿರ್ಮಾಣ ಆಗಿದೆ. ಇದೇ ಹಿನ್ನೆಲೆ ಸಕಾಲಿಕ ಮಳೆ ಅಂದ್ರೆ ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೀಳುತ್ತಿಲ್ಲ. ಬದಲಾಗಿ, ಅಕಾಲಿ ಮಳೆ ಅಂದ್ರೆ ಯಾವುದೋ ಕಾಲದಲ್ಲಿ ಮಳೆ ಸುರಿಯುವಂತೆ ಆಗಿದೆ. ಇದು ಜನರನ್ನು ಕಂಗಾಲಾಗುವ ರೀತಿ ಮಾಡಿದೆ. ಇದೇ ಸಮಯದಲ್ಲಿ ಮತ್ತೆ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ & ಭಾಗದಲ್ಲಿ ಭರ್ಜರಿ ಮಳೆ ಈಗ ಬೀಳಲಿದೆ? ಮುಂದೆ ಓದಿ.

ಬೆಂಗಳೂರು ಸೇರಿದಂತೆ ಮೈಸೂರು....
ಬಂಗಾಳ ಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಚಂಡಮಾರುತವೇ ಇದೀಗ ರೂಪುಗೊಂಡಿದೆ. ಹೀಗೆ ಚಂಡಮಾರುತದ ಅಬ್ಬರ ಕಾರಣಕ್ಕೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಗ್ಯಾರಂಟಿ ಆಗಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಹಾಗಾದರೆ ಬೆಂಗಳೂರಿನ ಕಥೆ ಏನು?
ಬೆಂಗಳೂರಿನಲ್ಲೂ ಭರ್ಜರಿ ಮಳೆ!
ಅಂದಹಾಗೆ ಈಗಾಗಲೇ ಬೆಂಗಳೂರು ನಗರದಲ್ಲಿ ಕಳೆದ 2 ದಿನಗಳಿಂದ ಮೋಡ ಮುಸುಕಿದ ವಾತಾವರಣ ಇದೆ. ಅಲ್ಲದೆ ಇಂದು ಕೂಡ ಬೆಂಗಳೂರಿನ ಹಲವು ಭಾಗದಲ್ಲಿ ಸಾಧಾರಣ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆ ನಾಳೆ & ನಾಡಿದ್ದು ಕೂಡ ಮಳೆಯ ಆರ್ಭಟ ಇದೇ ರೀತಿ ಇರಲಿದೆ ಎನ್ನಲಾಗಿದೆ. ಕರ್ನಾಟಕ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲೂ ಭಾರಿ ಮಳೆ ಗ್ಯಾರಂಟಿ ಎನ್ನಲಾಗಿದೆ.
ಒಟ್ನಲ್ಲಿ ಮಳೆ ಅಬ್ಬರಿಸುತ್ತಿದೆ, ವಾಯುಭಾರ ಕುಸಿತದ ಹಿನ್ನೆಲೆ ಮತ್ತೆ 2 ರಿಂದ 3 ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಆತಂಕ ಮೂಡಿದೆ. ಹೀಗಾಗಿ ಜನ ಕೂಡ ಮಳೆ ನಿಲ್ಲಲಿ ಎಂದು ಪ್ರಾರ್ಥನೆ ಮಾಡುವ ಪರಿಸ್ಥಿತಿ ಬಂದಿದೆ. ಮುಂದೆ ಇದು ಸರಿಯಾಗುತ್ತಾ? ಮಳೆ ಯಾವಾಗ ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications