Rain Alert: ಗೌರಿ-ಗಣೇಶ ಹಬ್ಬದ ದಿನವೂ ಕರ್ನಾಟಕದಲ್ಲಿ ಅಬ್ಬರಿಸಲಿದೆ ಮಳೆ!

ಕರ್ನಾಟಕದಲ್ಲಿ ಇಂದು ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಜನರು ಕೂಡ ಈ ಸಮಯದಲ್ಲಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಹಿಂದೂಗಳ ಹಬ್ಬಗಳಲ್ಲೇ ಅತ್ಯಂತ ಶ್ರೇಷ್ಠ ಹಬ್ಬ ಇದಾಗಿದೆ ಎಂಬ ಪ್ರತೀತಿ ಇದೆ. ಹೀಗಿದ್ದಾಗಲೇ ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕಲು ಮಳೆರಾಯ ಎಂಟ್ರಿ ಕೊಡುತ್ತಿದ್ದಾನೆ. ಹೌದು, ಇಂದು ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಇರಲಿದೆ? ಬನ್ನಿ ತಿಳಿಯೋಣ.

ಮಳೆ.. ಮಳೆ.. ಈ ಪದ ಕೇವಲ 4 ತಿಂಗಳ ಹಿಂದೆ ಕೇಳಿದ್ದರೂ ಖುಷಿ ಆಗುತ್ತಿತ್ತು. ಯಾಕಂದ್ರೆ 2024ರ ಬೇಸಿಗೆ ಅಂದ್ರೆ ಇದೇ ವರ್ಷದ ಬೇಸಿಗೆ ಸಮಯದಲ್ಲಿ ಕರ್ನಾಟಕ ರಾಜ್ಯ ಮಳೆ ಇಲ್ಲದೆ ನರಳಿ ಹೋಗಿತ್ತು. ಆದರೆ ಕೇವಲ 5 ತಿಂಗಳು ಕಳೆಯುವ ಒಳಗೆ, ಪರಿಸ್ಥಿತಿ ಬದಲಾಗಿ ಹೋಗಿದೆ. ಅಲ್ಲದೆ ಕರ್ನಾಟಕದ ಬಹುತೇಕ ಎಲ್ಲಾ ಡ್ಯಾಂಗಳು ತುಂಬಿ ತುಳುಕುತ್ತಿವೆ. ಈ ಮೂಲಕ ಇನ್ನು ಕನಿಷ್ಠ ಕನಿಷ್ಠ ಅಂದ್ರು 1 ವರ್ಷಕ್ಕೆ ಯಾವುದೇ ರೀತಿ ನೀರಿನ ಸಮಸ್ಯೆ ಇಲ್ಲ ಎನ್ನಬಹುದು. ಹೀಗಿದ್ದರೂ ಮಳೆ ಮಾತ್ರ ಸೈಲೆಂಟ್ ಆಗಿಲ್ಲ, ಅದರಲ್ಲೂ ಮುಂದಿನ 48 ಗಂಟೆ ಕರ್ನಾಟಕದ ಈ ಪ್ರದೇಶಗಳಲ್ಲಿ ಮಳೆ ಚಚ್ಚಿ ಬಿಸಾಡಲಿದೆ ಎಂಬ ಮಾಹಿತಿ ತಲ್ಲಣ ಸೃಷ್ಟಿ ಮಾಡಿದೆ!

Rain Alert Has Been Given To These Parts Of The Karnataka For Next 48 Hours On 7Th Sep 2024

3 ದಿನ ಕಾಲ ಭರ್ಜರಿ...

ಅಂದಹಾಗೆ ಇದೀಗ ಬಂಗಾಳ ಕೊಲ್ಲಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹೀಗೆ, ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಇಂದಿನಿಂದ ಭರ್ಜರಿಯಾಗಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 3 ದಿನ ಕಾಲ, ಭಾರೀ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಮೂಲಕ ಸೆಪ್ಟೆಂಬರ್ 7 ಅಂದರೆ, ಇಂದಿನಿಂದ ಹಿಡಿದು ಸೆ. 14 ರವರೆಗೂ ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ಮಲೆನಾಡು & ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ. ಹೀಗಾಗಿ ಮುಂದಿನ 3 ದಿನಗಳ ಕಾಲ ಹಳದಿ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಅಲರ್ಟ್ ಆಗಿ ಇರುವಂತೆ ಅಧಿಕಾರಿಗಳಿಗೆ ಕೂಡ ಸೂಚನೆ ನೀಡಲಾಗಿದೆ. ಮಳೆಗಾಲ ಬಹುತೇಕ ಮುಕ್ತಾಯದ ಹಂತಕ್ಕೆ ಬಂದರೂ ಮುಂಗಾರು ಮಳೆ ಸೈಲೆಂಟ್ ಆಗುತ್ತಿಲ್ಲ.

ಬೆಳಗಾವಿ, ಬೀದರ್, ಕಲಬುರಗಿ...

ಮತ್ತೊಂದ್ಕಡೆ ಉತ್ತರ ಒಳನಾಡು & ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 5 ದಿನಗಳ ಕಾಲ ಸಾಧಾರಣ ಮಳೆ ಬೀಳಲಿದೆ. ಇದರ ಜೊತೆಗೆ, ಬೆಳಗಾವಿ, ಬೀದರ್, ಕಲಬುರಗಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲೂ ಮಳೆರಾಯ ತಂಪು ತಂಪು ಕೂಲ್ ಕೂಲ್ ಮಾಡಲಿದ್ದಾನೆ. ಹೀಗಾಗಿ ರಾಜ್ಯದಲ್ಲಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೂ ಇಂದು ಹಗುರ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಹಬ್ಬದ ದಿನ ಕೂಡ ಮಳೆರಾಯ ತನ್ನ ಅಬ್ಬರ ತೋರಿಸಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+