ಮಳೆ.. ಮಳೆ.. ಈ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Karnataka Rain
ಭಾರಿ ಮಳೆಯ ಅಬ್ಬರಕ್ಕೆ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿದ್ದು, ಇದೀಗ ಸುರಿಯುತ್ತಿರುವ ಮಳೆ ಅಬ್ಬರ ಕಂಡು ಕರ್ನಾಟಕದ ರೈತರು & ಸಾಮಾನ್ಯ ಜನರು ಭಯ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕಂದ್ರೆ ಅಷ್ಟು ಜೋರಾಗಿ ಮಳೆ ಅಬ್ಬರಿಸುತ್ತಿರುವ ಕಾರಣಕ್ಕೆ ಯಾವ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುತ್ತೋ ಅನ್ನೋ ಆತಂಕ ಎದುರಾಗಿದೆ. ಇಂತಹ ಸಮಯದಲ್ಲೇ ಮತ್ತಷ್ಟು ಮಳೆ ಸುರಿಯುವ ಬಗ್ಗೆ ಇದೀಗ ವಾರ್ನಿಂಗ್ ಕೊಡಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ದಾಗಲೇ, ಮಳೆ.. ಮಳೆ.. ಈ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಮಳೆಗಾಲ ಆರಂಭವಾಗಿ ಇನ್ನೂ 2 ತಿಂಗಳು ಕಳೆದಿಲ್ಲ, ಆಗಲೇ ಎಲ್ಲಾ ಜಲಾಶಯಗಳು ತುಂಬಿ ಹೋಗಿವೆ. ಮಳೆ ಈ ರೀತಿಯಾಗಿ ಅಬ್ಬರಿಸುತ್ತಿರುವುದು ನೋಡಿದ ಜನ ಗೊಣಗುತ್ತಿದ್ದಾರೆ, ಅಲ್ಲದೆ ಹೀಗೆ ಸುರಿಯುತ್ತಿರುವ ಮಳೆ ನಿಂತು ಹೋಗಲಿ ದೇವರೆ ಅಂತಾ ಬೇಡುತ್ತಿದ್ದಾರೆ. ಯಾಕಂದ್ರೆ ಇಲ್ಲಿ ಮಳೆ ಅಬ್ಬರಕ್ಕೆ ಬ್ರೇಕ್ ಬೀಳುತ್ತಿಲ್ಲ ಮತ್ತು ಹೀಗಾಗಿಯೇ ಜನ ಕೂಡ ಹಲವು ರೀತಿಯ ಸಮಸ್ಯೆ ಎದುರಿಸುವಂತೆ ಆಗುತ್ತಿದೆ. ಅದರಲ್ಲೂ ರೈತ ಸಮುದಾಯ ಹೀಗೆ ಭಾರಿ ಮಳೆ ಕಾರಣಕ್ಕೆ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ಇದೆ. ಇಂತಹ ಸಮಯದಲ್ಲೇ ಮತ್ತೆ ಭಾರಿ ಮಳೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಘೋರ ಮಳೆಗಾಲ ಶುರುವಾಗಿದ್ದು, ಸತತವಾಗಿ ಮಳೆ ತನ್ನ ಆರ್ಭಟ ತೋರಿಸುತ್ತಿದೆ. ಉಡುಪಿ, ದಕ್ಷಿಣ ಕನ್ನಡ & ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದೀಗ ಮಳೆ ಅಬ್ಬರ ಜನರನ್ನು ಬೆಚ್ಚಿ ಬೀಳಿಸಿದೆ. ಇದರ ಜೊತೆಗೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲೂ ಭಾರಿ ಮಳೆಯ ಆಘಾತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಇಷ್ಟಾದರೂ ಮಳೆ ಮಾತ್ರ ಸೈಲೆಂಟ್ ಆಗುತ್ತಿಲ್ಲ, ಬದಲಾಗಿ ಇನ್ನಷ್ಟು ಮಳೆ ಸುರಿಯುತ್ತಿರುವ ಕಾರಣಕ್ಕೆ ಹೊಸ ಚಿಂತೆ ಶುರುವಾಗಿದೆ.
ಮಳೆ.. ಮಳೆ.. ಭಾರಿ ಮಳೆ..!
ಹೌದು, ಜುಲೈ 25 ಶುಕ್ರವಾರ ಕೂಡ ಭಾರಿ ಘೋರವಾಗಿ ಮಳೆ ಬರುತ್ತಿರುವ ಕಾರಣಕ್ಕೆ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮತ್ತೊಂದು ಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಮಳೆ ತನ್ನ ಅಸಲಿ ರೂಪ ತೋರಿಸುತ್ತಿದ್ದು ಈಗಾಗಲೇ ಬೀದರ್, ವಿಜಯಪುರ, ಬಾಗಲಕೋಟೆ & ರಾಯಚೂರು, ಬಳ್ಳಾರಿ ಸೇರಿದಂತೆ ಬೆಳಗಾವಿ, ಹುಬ್ಬಳ್ಳಿ & ಧಾರವಾಡ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಇನ್ನೂ ಹಲವು ದಿನಗಳ ಕಾಲ ಇದೇ ರೀತಿಯಾಗಿ ಕರ್ನಾಟಕದ ಬಹುತೇಕ ಎಲ್ಲಾ ಭಾಗಕ್ಕೆ ಮಳೆ ಮೋಡಗಳು ಇದೇ ರೀತಿ ಅಪ್ಪಳಿಸುವುದು ಕನ್ಫರ್ಮ್ ಆಗಿದೆ.












Click it and Unblock the Notifications