Rain Alert: ಮಳೆ ಆರ್ಭಟ ಮತ್ತೆ ಶುರು, ಮುಂದಿನ 48 ಗಂಟೆಗಳ ಕಾಲ ರಣಮಳೆ ಅಬ್ಬರ...

ಕರ್ನಾಟಕ ರಾಜ್ಯದಲ್ಲಿ 2025 ಪೂರ್ತಿ ಮಳೆ ಆರ್ಭಟ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಯಾಕಂದ್ರೆ ಈಗಾಗಲೇ ಭರ್ಜರಿ ಮಳೆ ಸುರಿದಿದ್ದರೂ ಕರ್ನಾಟಕದಲ್ಲಿ ಮಳೆ ಮೋಡಗಳ ಅಬ್ಬರ ಮಾತ್ರ ಸೈಲೆಂಟ್ ಆಗಿಲ್ಲ. ಬದಲಾಗಿ ಮುಂಗಾರು ಮಳೆ ಮೋಡಗಳು ಮತ್ತೆ ಅಲರ್ಟ್ ಆಗಿದ್ದು, ಭರ್ಜರಿ ಮಳೆ ಕಾರಣಕ್ಕೆ ಈಗ ಇಡೀ ಕರ್ನಾಟಕ ಮತ್ತೆ ನಲುಗಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ ಇನ್ನು ಕೆಲವೇ ಗಂಟೆಗಳಲ್ಲಿ ಭಾರಿ ಮಳೆ ದೊಡ್ಡ ಅವಾಂತರ ಸೃಷ್ಟಿ ಮಾಡುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ? ಮುಂದೆ ಓದಿ.

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಭರ್ಜರಿ ಜೋರಾಗಿದ್ದು, ಎಲ್ಲೆಲ್ಲೂ ಮಳೆರಾಯನ ಅಬ್ಬರ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಒಂದು ಕಡೆ ನದಿಗಳು ತುಂಬಿ ಹರಿದು ಜಲಾಶಯಗಳಲ್ಲಿ ಕೂಡ ಭಾರಿ ನೀರು ಸಂಗ್ರಹ ಆಗಿದೆ. ಇಂತಹ ಸಮಯದಲ್ಲೇ ಭಾರಿ ಮಳೆಯು ಬೀಳುತ್ತಿರುವ ಕಾರಣಕ್ಕೆ ಹಲವು ಜಿಲ್ಲೆಗಳಲ್ಲಿ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲೇ ಮುಂದಿನ 48 ಗಂಟೆಗಳ ಕಾಲ ರಣಮಳೆ ಅಬ್ಬರದ ಮುನ್ಸೂಚನೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಇದೀಗ ಮಳೆ ಆರ್ಭಟ ಶುರುವಾಗಲಿದೆ? ಸಂಪೂರ್ಣ ಮಾಹಿತಿ ತಿಳಿಯೋಣ...

Rain Alert Given To These Places Of Karnataka From August 6 Of 2025

ಮುಂದಿನ 48 ಗಂಟೆಗಳ ಕಾಲ ಮಳೆ!

ಮಳೆ.. ಮಳೆ.. ಮಳೆ.. ಹೀಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಪ್ರಕಾರ ಮುಂದಿನ 48 ಗಂಟೆಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದು ಸಮಸ್ಯೆ ಎದುರಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ & ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆ ಅಬ್ಬರಿಸುವುದು ಗ್ಯಾರಂಟಿ ಆಗುತ್ತಿದೆ. ಹೀಗಾಗಿಯೇ ಈಗ ಭಾರಿ ಕಟ್ಟೆಚ್ಚರ ಕೈಗೊಳ್ಳಲಾಗಿದ್ದು, ಕರಾವಳಿ ಮಾತ್ರವಲ್ಲ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಕೂಡ ಮಳೆಯ ಕಾಟ ಇರಲಿದೆ ಎಂದು ಇದೀಗ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ, ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ?

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ?

ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ & ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುವ ಜೊತೆಗೆ ಮಂಡ್ಯ & ಮೈಸೂರು ಭಾಗದಲ್ಲೂ ಮಳೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಇನ್ನೊಂದು ಕಡೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೂ ಭಾರಿ ಮಳೆಯ ಕಾಟ ಇರಲಿದೆ ಎಂದು ಇದೀಗ ಮುನ್ನೆಚ್ಚರಿಕೆ ನೀಡಿರುವುದು ಭಾರಿ ಆತಂಕ ಮೂಡಿಸಿದೆ. ಹಾಗಾದ್ರೆ ಉತ್ತರ ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ? ಮಳೆ ಹೆಚ್ಚಾಗಿ ಬರುವ ಜಿಲ್ಲೆಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆಯಾ? ಮುಂದೆ ಓದಿ.

ಅಂದಹಾಗೆ, ಉತ್ತರ ಕರ್ನಾಟಕ ಭಾಗದಲ್ಲಿ ಬಾಗಲಕೋಟೆ ಜಿಲ್ಲೆ, ಬೆಳಗಾವಿ ಜಿಲ್ಲೆ & ಬೀದರ್ ಜಿಲ್ಲೆ ಸೇರಿ ಧಾರವಾಡ ಹಾಗೂ ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ಇದೆ. ಹಾಗೇ ರಾಯಚೂರು, ವಿಜಯಪುರ & ಯಾದಗಿರಿ ಜಿಲ್ಲೆಗಳಲ್ಲೂ ಭಾರಿ ಮಳೆಯ ಕುರಿತು ಮುನ್ನೆಚ್ಚರಿಕೆ ಇದ್ದು ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಹೀಗಾಗಿಯೇ ಕಾದು ನೋಡಬೇಕಿದೆ. ಮತ್ತೊಂದು ಕಡೆ, ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಡ್ಯಾಂಗಳು ಇದೀಗ ತುಂಬಿ ಹೋಗಿದ್ದು, ರೈತರ ಬೆಳೆಗೆ ಸಾಕಷ್ಟು ನೀರು ಸಿಗುವ ನಿರೀಕ್ಷೆ ಕೂಡ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+