Rain Alert: ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳಲಿದೆ ಹುಷಾರ್!
ಮಳೆ ಭರ್ಜರಿಯಾಗಿ ಬೀಳುತ್ತಿದ್ದು, ಚಿಂತೆಯಲ್ಲಿ ಮುಳುಗಿದ್ದ ಕನ್ನಡ ನಾಡಿನ ಪ್ರಜೆಗಳಿಗೆ ಇದೀಗ ನೆಮ್ಮದಿ ಸಿಕ್ಕಂತಾಗಿದೆ. ಆದರೆ ಮಳೆ ಬಾ ಅಂದ್ರೆ ಈ ರೇಂಜ್‌ಗೆ ಬರೋದಾ? ಮಳೆರಾಯ ಅಬ್ಬರ ತೋರಿಸುತ್ತಿರುವ ರೀತಿಗೆ ಇಡೀ ಕರ್ನಾಟಕ ಬೆಚ್ಚಿಬಿದ್ದಿದೆ. ಅದರಲ್ಲೂ ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಈ ಭಾಗದಲ್ಲಿ ಮತ್ತಷ್ಟು ಜೋರಾಗಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದ್ದು, ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ? ಬನ್ನಿ ತಿಳಿಯೋಣ.
ಮುಂಗಾರು ಮಳೆ ಮುಗಿಯಲು ಇನ್ನೂ ಕೆಲವು ತಿಂಗಳು ಬಾಕಿ ಇದೆ. ಆದರೆ ಈಗಾಗಲೇ ನಮ್ಮ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿ ಆಗಿವೆ. ಅದರಲ್ಲೂ ಕರ್ನಾಟಕದ ಮಲೆನಾಡು ಭಾಗ & ಕರಾವಳಿ ಪ್ರದೇಶ ಈ ಭರ್ಜರಿ ಮಳೆಗೆ ಬೆಚ್ಚಿಬಿದ್ದಿದೆ. ಕಾವೇರಿ ನದಿ ಪ್ರದೇಶದ ಡ್ಯಾಂಗಳು ಸೇರಿ ಕೃಷ್ಣಾ ನದಿ ಭಾಗದ ಜಲಾಶಯಗಳು, ಮಲೆನಾಡು ಭಾಗದ ಜಲಾಶಯಗಳು ಭರ್ತಿಯಾಗಿವೆ. ಈ ರೀತಿ ಜುಲೈ ತಿಂಗಳಲ್ಲಿ ಕರ್ನಾಟಕದ ಬಹುತೇಕ ಡ್ಯಾಂಗಳು ತುಂಬಿ ತುಳುಕುತ್ತಿವೆ. ಹೀಗಿದ್ದರೂ ಕರ್ನಾಟಕದಲ್ಲಿ ಮಳೆ ಅಬ್ಬರ ಕಡಿಮೆ ಆಗಿಲ್ಲ. ಹಾಗಾದ್ರೆ ಇದೀಗ ಭರ್ಜರಿ ಮಳೆ ಬೀಳುವ ಜಿಲ್ಲೆ ಮತ್ತು ಪ್ರದೇಶಗಳು ಯಾವುವು? ಮುಂದೆ ಓದಿ.

ಮಳೆ.. ಮಳೆ.. ಭರ್ಜರಿ ಮಳೆ!
ಮುಂದಿನ 24 ಗಂಟೆ ಅವಧಿಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ದೇವರು ಅಬ್ಬರದ ಮೂಲಕ ಕಾಟ ಕೊಡಲಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಮಲೆನಾಡು ಜಿಲ್ಲೆ, ಪ್ರದೇಶದಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ ಆಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ ದಕ್ಷಿಣ ಒಳನಾಡು ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಅಲ್ಲಲ್ಲಿ ತುಂತುರು ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ 24 ಗಂಟೆ ಮಳೆ ಮತ್ತಷ್ಟು ಅಬ್ಬರಿಸುವ ಸಾಧ್ಯತೆ ಇದೆ.
ರೈತರ ಮುಖದಲ್ಲಿ ಮಂದಹಾಸ!
ಒಟ್ನಲ್ಲಿ ಈ ಬಾರಿ ಕರ್ನಾಟಕದಲ್ಲಿ ಭರ್ಜರಿ ಮಳೆ ಬಿದ್ದಿದೆ. ಈ ಮೂಲಕ ಕರ್ನಾಟಕದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ 2023 ರಲ್ಲಿ ಕರ್ನಾಟಕ ತೀವ್ರ ಬರಗಾಲವನ್ನು ಎದುರಿಸಿತ್ತು. ಆದ್ರೆ 2024 ರಲ್ಲಿ ಈ ಮಾತು ಸುಳ್ಳಾಗಿದ್ದು, ಮಳೆರಾಯ ಕನ್ನಡ ನಾಡಿನಲ್ಲಿ ಭರ್ಜರಿ ಮಳೆ ಸುರಿಸಿದ್ದಾನೆ. ಅದರಲ್ಲೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸಿಂಚನವಾಗಿ, ಮುಂದಿನ ದಿನಗಳಲ್ಲಿ ಮಳೆ ಕೊರತೆ ಉಂಟಾದರೂ ಅದನ್ನ ಸಹಿಸುವ ಶಕ್ತಿ ಈಗ ಸಿಕ್ಕಂತಾಗಿದೆ. ಹೀಗಾಗಿ ಕನ್ನಡ ನಾಡಿನ ರೈತರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications