ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ ನಲ್ಲಿ ಕರ್ನಾಟಕದ ನಿರೀಕ್ಷೆಗಳೇನು?

By Mahesh
|
Google Oneindia Kannada News

ಬೆಂಗಳೂರು, ಫೆ.11: ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರು ಚೊಚ್ಚಲ ಬಾರಿಗೆ ರೈಲ್ವೆ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಕರ್ನಾಟಕದ ಪಾಲಿಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದಾರೆ. ಕಳೆದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಕೇವಲ ಎರಡು ಹೊಸ ಎಕ್ಸ್ ಪ್ರೆಸ್ ಮಾತ್ರ ಮಂಜೂರಾಗಿತ್ತು. ಈ ಬಾರಿ ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಕನ್ನಡಿಗರಲ್ಲಿದೆ.

ಬೆಂಗಳೂರು-ಹಾಸನ, ಮುನಿರಾಬಾದ್-ಮೆಹಬೂಬ್, ಬೀದರ್-ಗುಲ್ಬರ್ಗಾ ನೂತನ ಮಾರ್ಗಗಳು ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಜೋಡಿ ಮಾರ್ಗ ಅಳವಡಿಕೆ ಹಾಗೂ ವಿದ್ಯುತೀಕರಣ ಕಾಮಗಾರಿ ಮುಗಿದಿಲ್ಲ. ಹುಬ್ಬಳ್ಳಿ-ಅಂಕೋಲ, ಚಾಮರಾಜನಗರ-ಮೆಟ್ಟುಪಾಳ್ಯ, ಚಾಮರಾಜನಗರ-ಸತ್ಯಮಂಗಲ, ಕುಶಾಲನಗರ-ಮಡಿಕೇರಿ ಮತ್ತು ತಾಳಗುಪ್ಪ-ಹೊನ್ನಾವರ ನೂತನ ಮಾರ್ಗಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಜೋಡಿ ಮಾರ್ಗ ರಚನೆ ಆಗಬೇಕಿದೆ ಚಾಲ್ತಿಯಲ್ಲಿರುವ ಈ ಕಾಮಗಾರಿಗಳ ನಡುವೆ ಹೊಸ ಮಾರ್ಗಗಳ ಬೇಡಿಕೆ ಈ ಬಾರಿ ಹೆಚ್ಚಾಗಿದೆ.[ರೈಲು : ಕರ್ನಾಟಕದ ಆಸೆಗಳು, ನಿರಾಸೆಗಳು]

ಕಳೆದ ಬಜೆಟ್ ನಲ್ಲಿ ಹೊಸ ರೈಲು, ಎಕ್ಸ್ ಪ್ರೆಸ್ ರೈಲು, ಹೊಸ ಮಾರ್ಗಗಳ ಜತೆಗೆ ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ, ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಸಿಕ್ಕಿದ್ದು ಬಿಟ್ಟರೆ ಮತ್ತೇನು ಉಪಯೋಗವಾಗಿರಲಿಲ್ಲ. ಈ ಬಾರಿಯ ಬೇಡಿಕೆಗಳನ್ನು ವಲಯವಾರು ರೀತಿಯಲ್ಲಿ ಮುಂದೆ ನೋಡಿ...

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?

ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?

* ಮೈಸೂರು-ದೆಹಲಿ ಸ್ವರ್ಣ ಜಯಂತಿ ಏಕ್ಸ್ ‍ಪ್ರೆಸ್ (ವಾರಕೊಮ್ಮೆ ಇರುವ ರೈಲು ವಾರಕ್ಕೆ 2 ಬಾರಿ ಬರಲಿ ಅನ್ನೋದು ಜನರ ಬೇಡಿಕೆ.
* ಬೆಂಗಳೂರು-ಮುಂಬೈ ಉದ್ಯಾನ್ ಏಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಣೆಯಾಗಲಿ
* ಮೈಸೂರಿನಿಂದ ವಾರಣಾಸಿಗೆ ಹೊಸ ರೈಲು ಓಡಾಡಬೇಕಿದೆ.
* ಹಾಸನ-ಬೆಂಗಳೂರು ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣವಾಗಲಿ
* ಚನ್ನಪಟ್ಟಣ ರೇಲ್ವೆ ಗೇಟ್ ‍ಗೆ ಓವರ್ ‍ಬ್ರಿಡ್ ಆಗಬೇಕಿದೆ.
* ಚಿಕ್ಕಬಳ್ಳಾಪುರದಿಂದ ಪುಟ್ಟಪರ್ತಿ, ಗೌರಿಬಿದನೂರಿಗೆ ನೂತನ ಮಾರ್ಗ
* ಬೆಂಗಳೂರು-ಮಾರಿಕುಪ್ಪಂಗೆ ಹೆಚ್ಚುವರಿ ರೈಲು
* ಬಂಗಾರಪೇಟೆ-ಬೆಂಗಳೂರಿಗೆ ಹೆಚ್ಚುವರಿ ರೈಲು ಓಡಾಡಬೇಕು ಅನ್ನೋದು ಹಲವು ವರ್ಷಗಳ ಬೇಡಿಕೆ

 ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು

ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು

* ಬಾಗಲಕೋಟೆ-ಕುಡಚಿಗೆ ಹೊಸ ಮಾರ್ಗದ ನಿರೀಕ್ಷೆಯಿದೆ.
* ಬಳ್ಳಾರಿ-ಹೊಸಪೇಟೆ ಟು ಬೆಂಗಳೂರು ಇಂಟರ್‍ಸಿಟಿ ರೈಲು ಓಡಾಡಿದ್ರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
* ಗುಂತಕಲ್, ಬಿಜಾಪುರ-ಬಳ್ಳಾರಿ ಇಂಟರ್‍ಸಿಟಿ ರೈಲು ಹಾಗೇ ಬೀದರ್ ಗುಲ್ಬರ್ಗಾ ನಡುವೆ ರೈಲು ಮಾರ್ಗ ಬೇಕಿದೆ.
* ರಾಯಚೂರಿನಲ್ಲಿ ರೈಲು ವಿಭಾಗದ ಕಚೇರಿ ಸ್ಥಾಪನೆಯಾಗಲಿ ಅನ್ನೋ ಬೇಡಿಕೆ ಉತ್ತರ ಕರ್ನಾಟಕ ಭಾಗದ ಜನರಲ್ಲಿದೆ.

ಮಲೆನಾಡು ಭಾಗದ ನಿರೀಕ್ಷೆಗಳೇನು..?

ಮಲೆನಾಡು ಭಾಗದ ನಿರೀಕ್ಷೆಗಳೇನು..?

* ಶಿವಮೊಗ್ಗ-ಹೊನ್ನಾವರ ಮಾರ್ಗ
* ಶಿವಮೊಗ್ಗ-ಹರಿಹರ ಮಾರ್ಗ
* ಶಿವಮೊಗ್ಗ-ಬೆಂಗಳೂರಿಗೆ ಹೆಚ್ಚುವರಿ ರೈಲು
* ಶಿವಮೊಗ್ಗ-ಅರಸೀಕೆರೆ ಮಾರ್ಗ ಡಬ್ಲಿಂಗ್
* ಶಿವಮೊಗ್ಗ ಕಡೂರು ಚಿಕ್ಕಮಗಳೂರು ರೈಲು ಹಾಸನದವರೆಗೂ ವಿಸ್ತರಣೆ

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?

ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?

* ಹೈದರಾಬಾದ್- ಚಿತ್ರದುರ್ಗ- ಮೈಸೂರು ರೈಲು
* ಯಶವಂತಪುರ- ಜೋಧಪುರ ರೈಲು ಮಾರ್ಗವನ್ನು ಖಾಯಂಗೊಳಿಸ್ಬೇಕು
* ಚಿತ್ರದುರ್ಗ ರೈಲು ನಿಲ್ದಾಣವನ್ನು " ಡಿ" ದರ್ಜೆಯಿಂದ "ಬಿ" ದರ್ಜೆಗೆ ಏರಿಸಬೇಕು
* ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಎಲ್ಲ ರೈಲುಗಳನ್ನು ಧಾರವಾಡದಿಂದ ಬಿಡಬೇಕು
* ಹಾವೇರಿ-ಗದಗ ನೂತನ ಮಾರ್ಗ

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆಗಳು

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆಗಳು

* ಅಹಮದಾಬಾದ್- ಮಂಗಳೂರು ಸೆಂಟ್ರಲ್ (ರಜೆ ಸಮಯದ ರೈಲು ನಿರಂತರಗೊಳಿಸಲು ಮನವಿ)
* ವಾಸ್ಕೋ-ಮಂಗಳೂರು ಸೆಂಟ್ರಲ್ ಇಂಟರ್ ಸಿಟಿ
* ಹುಬ್ಬಳ್ಳಿ- ಮಂಗಳೂರು ಸೆಂಟ್ರಲ್ ( ವಯಾ ಹಾಸನ-ಅರಸೀಕೆರೆ) ರಾತ್ರಿ ಎಕ್ಸ್ ಪ್ರೆಸ್
* ಭಟ್ಕಳ-ಮಂಗಳೂರು ಸೆಂಟ್ರಲ್ ಡಿಎಂಯು
* ವಾಸ್ಕೋ-ಮಂಗಳೂರು- ತಿರುಪತಿ
* ನವದೆಹಲಿ- ಸುಬ್ರಮಣ್ಯ ರಸ್ತೆ (ವಯಾ MAO-MAJN)

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ -2

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ -2

* 16515/16 ಕಾರವಾರ- ಯಶವಂತಪುರ ಎಕ್ಸ್ ಪ್ರೆಸ್ ಪ್ರತಿದಿನ ಸಂಚಾರಕ್ಕೆ ಮನವಿ (ಸದ್ಯಕ್ಕೆ ವಾರಕ್ಕೆ ಮೂರಾವರ್ತಿ ಇದೆ)
* ಮಂಗಳೂರು- ಜಮ್ಮು ಥಾವಿ ನವ್ ಯುಗ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ
* ಮಂಗಳೂರು- ಹೌರಾ ವಿವೇಕ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಮನವಿ
* ಕಾರೈಕಲ್-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಯಾ TPJ
* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರ

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-3

ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-3

* ಮಂಗಳೂರು- ಹೌರಾ ವಯಾ ಮಡಗಾಂವ್- ಹುಬ್ಬಳ್ಳಿ
* ಕೊಯಮತ್ತೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ಪ್ರತಿದಿನ ವಯಾ ಯಶವಂತಪುರ
* ಡೀಸೆಲ್ ಲೋಕೋಮೋಟಿವ್ ಘಟಕ, ಮಂಗಳೂರು
* ನೀಲಂಬುರ್-ನಂಜನಗೂಡು ರೈಲ್ವೆ ಯೋಜನೆಗೆ ಚಾಲನೆ
* ಕೊಯಮತ್ತೂರು-ಬೆಂಗಳೂರು-ಮೈಸೂರು( ಇಂಟರ್ ಸಿಟಿ ವಯಾ ತಿರುಪುರ್, ಈರೋಡ್)

English summary
Railway Minister Mallikarjun Kharge set to present the Railway Budget 2014-15 on Feb.12,2014. what will be the Karnataka share in the budget? What are the expectations? here are the details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X