ರೈಲು : ಕರ್ನಾಟಕದ ಆಸೆಗಳು, ನಿರಾಸೆಗಳು

ಸಿಕ್ಕಿದ್ದೇನು: ಕರ್ನಾಟಕಕ್ಕೆ 2 ಹೊಸ ಎಕ್ಸ್ ಪ್ರೆಸ್ ರೈಲು ಮಾತ್ರ
* ಹುಬ್ಬಳ್ಳಿ-ಮುಂಬೈ ಎಕ್ಸ್‌ಪ್ರೆಸ್ ವಯಾ ಮೀರಜ್, ಪುಣೆ (ವಾರಕ್ಕೊಮ್ಮೆ)
* ಬೆಂಗಳೂರು - ಮಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
* ಶ್ರೀನಿವಾಸಪುರ-ಮದನಪಲ್ಲಿ ಹೊಸ ರೈಲು ಮಾರ್ಗ* ಗದಗ್ -ವಾಡಿ ಹೊಸ ಮಾರ್ಗ
* ಬಿಜಾಪುರ -ಕಿರಣ್ ದುಲ್ ಹೊಸ ಮಾರ್ಗ ಸಮೀಕ್ಷೆ
* ತಾಳಗುಪ್ಪ- ಶಿವಮೊಗ್ಗ ಪ್ಯಾಸೆಂಜರ್ ರೈಲು ಪ್ರತಿದಿನ ಸಂಚಾರ
* ಉಡುಪಿ- ಕಾರವಾರ-ಮಡಗಾಂವ್ ಮಂಗಳೂರು ಇಂಟರ್ ಸಿಟಿ ಏಕ್ಸ್ ಪ್ರೆಸ್
* ಪ್ರತಿದಿನ ತಿರುಚಿನಾಪಳ್ಳಿ- ಮಧುರೈ- ನಾಗರಕೋಯಿಲ್ ಬೆಂಗಳೂರು
* ಮೀರಜ್ -ಪುಣೆ- ಹುಬ್ಬಳ್ಳಿ
* ಯಶವಂತಪುರ -ಬಾಗಲಕೋಟೆ ರೈಲು ಮೈಸೂರಿಗೆ ವಿಸ್ತರಣೆ
* ವಾರಕ್ಕೊಮ್ಮೆ ಬೆಂಗಳೂರು- ಮಂಗಳೂರು ಎಕ್ಸ್ ಪ್ರೆಸ್ ಸಂಚಾರ
* ಗುಲ್ಬರ್ಗಾ-ಸುಲ್ತಾನ್ ಪುರ ರೈಲು ಈ ವರ್ಷ ಪೂರ್ಣ
* ಪಂಡರಾಪುರ ಬಿಜಾಪುರ ವಯಾ ಮಂಗಳವೇಡ ಹೊಸ ಸಮೀಕ್ಷೆ
* ರಾಯಚೂರು ಪಾಂಡುರಂಗಸ್ವಾಮಿಗೆ ಹಣ ಬಿಡುಗಡೆ
* ತುಮಕೂರು ಮದ್ದೂರು ಮಳವಳ್ಳಿ ರೈಲು ಮಾರ್ಗದ ಸಮೀಕ್ಷೆ
* ದರ್ಭಂಗ ಬೆಂಗಳೂರು ಎಕ್ಸ್ ಪ್ರೆಸ್ ಮೈಸೂರಿಗೆ ವಿಸ್ತರಣೆ
* ಚಿಕ್ಕಬಳ್ಳಾಫುರ -ಪುಟ್ಟಪರ್ತಿ ಹೊಸ ರೈಲು
* ಚಿಕ್ಕಬಳ್ಳಾಪುರ- ಗೌರಿಬಿದನೂರು ಹೊಸ ರೈಲು
* ತುಮಕೂರು-ಅರಸೀಕೆರೆ ರೈಲು ಮಾರ್ಗ ಡಬ್ಲಿಂಗ್
* ಜಬಲ್ ಪುರ್ ಯಶವಂತಪುರ ವಯಾ ಧರ್ಮಾವರಂ (ವಾರಕ್ಕೊಮ್ಮೆ)
* ಮಂಗಳೂರು ಕಾಚಿಗುಡ (ವಾರಕ್ಕೊಮ್ಮೆ)
* ಚಿಕ್ಕಮಗಳೂರು- ಸಕಲೇಶಪುರ ರೈಲುಮಾರ್ಗಕ್ಕೆ ಗ್ರೀನ್ ಸಿಗ್ನಲ್
* ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ
* ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ
* ಸವಣೂರು - ಮಂಗಳೂರು ಜೋಡಿ ಮಾರ್ಗ
ಬೇಡಿಕೆ ಏನಿತ್ತು?: ವಾರಕೊಮ್ಮೆ ಓಡುವ ಕೊಚ್ಚುವೇಲಿ - ಡೆಹ್ರಾಡೂನ್ ರೈಲು ಮತ್ತು ಕೊಚ್ಚುವೇಲಿ - ಅಮೃತಸರ ರೈಲುಗಳಿಗೆ ಉಡುಪಿಯಲ್ಲಿ ನಿಲುಗಡೆಯ ಬೇಡಿಕೆ
* ಗೋವಾದ ವಾಸ್ಕೋ-ಡ-ಗಾಮದಿಂದ ಬೆಳಗ್ಗೆ ಮಂಗಳೂರಿಗೆ ಪ್ಯಾಸೆಂಜರ್ ರೈಲು ಬೇಕು
* ಸಿಎಸ್‌ಟಿ - ಮಂಗಳೂರು ಸೂಪರ್ ಫಾಸ್ಟ್ ರೈಲಿಗೆ ದಾದರ್‌ನಲ್ಲಿ ನಿಲುಗಡೆ ನೀಡಲು ಮನವಿ
* ಮುಂಬೈ ನಗರದ ಉತ್ತರದ ದಾದರ್‌ನಿಂದ ಭಯಂಧರ್ ವರೆಗಿನ ಜನರ ಅನುಕೂಲಕ್ಕಾಗಿ ಬಾಂದ್ರಾ-ವಸಾರೋಡ್ ಜಂಕ್ಷನ್‌ಗಾಗಿ ಮಂಗಳೂರಿಗೆ
ವಾರಕ್ಕೆ ಎರಡಾವರ್ತಿ ರೈಲು ಓಡಿಸಲು ಮನವಿ
* ಹೊಸ ಯೋಜನೆ : ಗದಗ-ಹಾವೇರಿ,ಮೈಸೂರು-ಕುಶಾಲನಗರ,ಧಾರವಾಡ-ಬೆಳಗಾವಿ ಸಂಪರ್ಕಕ್ಕೆ ಮನವಿ
* ಪ್ರಮುಖ ನಿಲ್ದಾಣಗಳಾದ ಬೆಳಗಾವಿ, ಗುಲ್ಬರ್ಗ, ಕಾರವಾರ, ಗದಗ, ಬೀದರ್ ಹಾಗೂ ರಾಯಚೂರಿನಿಂದ ಬೆಂಗಳೂರು ನಡುವೆ ಇಂಟರ್‌ಸಿಟಿ ರೈಲು
* ಯಶವಂಪುರ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣ ಮೇಲ್ದರ್ಜೆಗೇರಿಸಲು ಮನವಿ
* ಗುಲ್ಬರ್ಗಾದಲ್ಲಿ ವಿಭಾಗೀಯ ಕಚೇರಿ ಸ್ಥಾಪಿಸಬೇಕು, ಮಂಗಳೂರಿನ ವಿಭಾಗವನ್ನು ಎ ದರ್ಜೆಗೇರಿಸಬೇಕು.
* ನಿರೀಕ್ಷಿತ ಇಂಟರ್ ಸಿಟಿ ರೈಲುಗಳು : ಬೆಂಗಳೂರಿಂದ ಚಾಮರಾಜನಗರ, ಚಿಕ್ಕಮಗಳೂರು, ಮೀರಜ್, ಹೊಸಪೇಟೆ,ಚಿತ್ರದುರ್ಗ,ದಾವಣಗೆರೆ,
* ಬೆಂಗಳೂರಿನಿಂದ ಹಾಸನ ಅಥವಾ ಸಕಲೇಶಪುರ ಹಾಗೂ ಬೆಂಗಳೂರು - ಬೆಂಗಳೂರು ವರ್ತುಲ ರೈಲು - ಹುಬ್ಬಳ್ಳಿ, ವಾಸ್ಕೊ, ಕಾರವಾರ, ಮಂಗಳೂರು ಮತ್ತು ಮೈಸೂರು ಮಾರ್ಗಕ್ಕೆ ಹೆಚ್ಚಿನ ರೈಲು ಬೇಡಿಕೆ
* ಸೂಪರ್ ಫಾಸ್ಟ್ ರೈಲು: ಬೆಂಗಳೂರಿನಿಂದ ಜಮ್ಮು, ಡೆಹ್ರಾಡೂನ್, ಗಯಾ, ಅಮೃತಸರ, ರಾಮೇಶ್ವರಂ, ಉದಯಪುರ, ಔರಂಗಾಬಾದ್, ಬಿಕಾನೇರ್, ಭಾವನಗರ್, ರಾಜ್ ಕೋಟ್, ಜೈಪುರ
ಹೆಚ್ಚುವರಿ ಓಡಾಟಕ್ಕೆ ಮನವಿ : ಹುಬ್ಬಳ್ಳಿ - ವಿಜಯವಾಡ ಅಮರಾವತಿ ಎಕ್ಸ್ ಪ್ರೆಸ್, ಯಶವಂತಪುರ- ಕಾರವಾರ, ಬೆಂಗಳೂರು - ಸೊಲ್ಲಾಪುರ / ವಾರಕ್ಕೆ ಮೂರು ದಿನಕ್ಕೆ ಬದಲು ಪ್ರತಿದಿನಕ್ಕೆ ಮನವಿ
* ಯಶವಂತಪುರ - ವಾಸ್ಕೊ/ ವಾರಕ್ಕೆ ಎರಡಕ್ಕೆ ಬದಲಾಗಿ ಪ್ರತಿದಿನಕ್ಕೆ ಮನವಿ
* ಬೆಂಗಳೂರು - ಜೋಧಪುರ, ಬೆಂಗಳೂರು - ಅಜ್ಮೀರ್ / ವಾರಕ್ಕೆ ಎರಡಕ್ಕೆ ಬದಲಾಗಿ ಮೂರು ದಿನ
ಸಂಚಾರ ಮಾರ್ಗ ವಿಸ್ತರಣೆ: ತಿರುಪತಿ-ಗುಂತಕಲ್/ ಬಳ್ಳಾರಿಯವರೆಗೆ. ಮುಂಬೈ-ಸೊಲ್ಲಾಪುರ/ಗದಗದವರೆಗೆ.
ಚಾಲ್ತಿಯಲ್ಲಿರುವ ಕಾಮಗಾರಿಗಳು: ಬೆಂಗಳೂರು-ಹಾಸನ, ಮುನಿರಾಬಾದ್-ಮೆಹಬೂಬ್, ಬೀದರ್-ಗುಲ್ಬರ್ಗಾ ನೂತನ ಮಾರ್ಗಗಳು ದಶಕಗಳು
ಕಳೆದರೂ ಪೂರ್ಣಗೊಂಡಿಲ್ಲ. ಜೋಡಿ ಮಾರ್ಗ ಅಳವಡಿಕೆ ಹಾಗೂ ವಿದ್ಯುತೀಕರಣ ಕಾಮಗಾರಿ ಮುಗಿದಿಲ್ಲ.
ಹುಬ್ಬಳ್ಳಿ-ಅಂಕೋಲ, ಚಾಮರಾಜನಗರ-ಮೆಟ್ಟುಪಾಳ್ಯ, ಚಾಮರಾಜನಗರ-ಸತ್ಯಮಂಗಲ, ಕುಶಾಲನಗರ-ಮಡಿಕೇರಿ ಮತ್ತು ತಾಳಗುಪ್ಪ-ಹೊನ್ನಾವರ ನೂತನ ಮಾರ್ಗಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಜೋಡಿ ಮಾರ್ಗ ರಚನೆ ಆಗಬೇಕಿದೆ.












Click it and Unblock the Notifications