ರೈಲ್ವೆ ಬಜೆಟ್: ಕರ್ನಾಟಕ ಕೇಳಿದ್ದೇನು? ಸಿಕ್ಕಿದ್ದೇನು?

ಬೆಂಗಳೂರು, ಫೆ.12 : ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರು ಗದ್ದಲದ ನಡುವೆ ಬುಧವಾರ ಚೊಚ್ಚಲ ಬಾರಿಗೆ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಕರ್ನಾಟಕದ ಪಾಲಿಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಈ ಮಧ್ಯಂತರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಗುವಂತೆ ನೋಡಿಕೊಳ್ಳಲಾಗಿದೆ.

ಕಳೆದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಕೇವಲ ಎರಡು ಹೊಸ ಎಕ್ಸ್ ಪ್ರೆಸ್ ಮಾತ್ರ ಮಂಜೂರಾಗಿತ್ತು. ಈ ಬಾರಿ 10 ಹೊಸ ರೈಲುಗಳು ಕರ್ನಾಟಕದ ವಿವಿಧ ಭಾಗಗಳಿಂದ ಚಲಿಸಲಿವೆ. ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ ಕನ್ನಡಿಗರಲ್ಲಿ ಹಾಗೆ ಉಳಿದಿದೆ.

2014-15ರ ಮಧ್ಯಂತರ ಬಜೆಟ್ ನಲ್ಲಿ 72 ಹೊಸ ರೈಲುಗಳನ್ನು ಪರಿಚಯಿಸಲಾಗುತ್ತಿದೆ. 17 ಪ್ರೀಮಿಯಂ ಟ್ರೈನ್, 38 ಎಕ್ಸ್ ಪ್ರೆಸ್ ರೈಲು, 10 ಪ್ಯಾಸೆಂಜರ್ ರೈಲು, 4 MEMU, 3 DEMU ರೈಲುಗಳನ್ನು ನೀಡಲಾಗಿದೆ. ಮೂರು ರೈಲುಗಳ ಮಾರ್ಗ ವಿಸ್ತರಿಸಲಾಗಿದೆ. ಮೂರು ರೈಲುಗಳ ಅವಧಿಯನ್ನು ಹೆಚ್ಚಿಸಲಾಗಿದೆ. ಕರ್ನಾಟಕಕ್ಕೆ ಸಿಕ್ಕ ರೈಲು ಮಾರ್ಗಗಳು, ಯೋಜನೆಗಳ ವಿವರ ಇಂತಿದೆ:

ಕರ್ನಾಟಕಕ್ಕೆ ಸಿಕ್ಕ ಪ್ರೀಮಿಯಂ ರೈಲುಗಳು

ಕರ್ನಾಟಕಕ್ಕೆ ಸಿಕ್ಕ ಪ್ರೀಮಿಯಂ ರೈಲುಗಳು

* ಯಶವಂತಪುರ-ಜೈಪುರ ಎಸಿ ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ) ವಯಾ ಗುಲ್ಬರ್ಗಾ, ಪುಣೆ, ವಾಸೈ ರಸ್ತೆ
* ಪಾಟ್ನಾ-ಬೆಂಗಳೂರು ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ) ವಯಾ ಮುಘಲ್ ಸರೈ, ಛೆಯೊಕಿ, ಮಾಣಿಕ್ ಪುರ್, ನಾಗಪುರ್
* ಯಶವಂತಪುರ- ಕತ್ರಾ ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ) ವಯಾ ಗುಲ್ಬರ್ಗಾ, ಕಾಚಿಗುಡ, ನಾಗಪುರ, ನವದೆಹಲಿ
* ತಿರುವನಂತಪುರ-ಬೆಂಗಳೂರು (ಯಶವಂತಪುರ) ಎಕ್ಸ್ ಪ್ರೆಸ್ (ವಾರಕ್ಕೆರಡು ಬಾರಿ) ವಯಾ ಈರೋಡ್, ತಿರುಪುರ್

ರಾಜ್ಯಕ್ಕೆ ಸಿಕ್ಕ ಎಕ್ಸ್ ಪ್ರೆಸ್ ರೈಲುಗಳು

ರಾಜ್ಯಕ್ಕೆ ಸಿಕ್ಕ ಎಕ್ಸ್ ಪ್ರೆಸ್ ರೈಲುಗಳು

* ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ (ಪ್ರತಿದಿನ) ವಯಾ ಬಂಗಾರಪೇಟೆ, ಜೋಳಾರ ಪೇಟೆ
* ಹೌರಾ-ಯಶವಂತಪುರ ಎಸಿ ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ) ವಯಾ ಭುವನೇಶ್ವರ್, ಗುಡೂರು, ಕಾಟ್ಪಾಡಿ
* ಹುಬ್ಬಳ್ಳಿ- ಮುಂಬೈ ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ) ವಯಾ ಬಿಜಾಪುರ, ಶೋಲಾಪುರ
* ಹೈದರಾಬಾದ್- ಗುಲ್ಬರ್ಗಾ ಇಂಟರ್ ಸಿಟಿ (ಪ್ರತಿದಿನ)
* ವಾರಣಾಸಿ- ಮೈಸೂರು ಎಕ್ಸ್ ಪ್ರೆಸ್ ( ವಾರಕ್ಕೆರಡು ಬಾರಿ) ವಯಾ ವಾಡಿ ದೌಂಡ್

ರೈಲು ಅವಧಿ ವಿಸ್ತರಣೆ, ಮಾರ್ಗ ಬದಲಾವಣೆ

ರೈಲು ಅವಧಿ ವಿಸ್ತರಣೆ, ಮಾರ್ಗ ಬದಲಾವಣೆ

*Train number 16571/16572 Bidar - Yesvantpur Express - Currently 3 days - increased to daily
* Train number 17225/17226 Hubli - Vijayawada Express - Currently 3 days - increased to daily
* Train number 17319/17320 Hubli - Secunderabad Express - Currently 3 days - increased to daily

ಹೊಸ ಮಾರ್ಗಗಳು, ಸಮೀಕ್ಷೆ ಜಾರಿ

ಹೊಸ ಮಾರ್ಗಗಳು, ಸಮೀಕ್ಷೆ ಜಾರಿ

* ತಿಪಟೂರು-ದುಡ್ಡ
* ಚಳ್ಳಕೆರೆ- ಹಿರಿಯೂರು- ಹುಳಿಯೂರು- ಚಿಕ್ಕನಾಯಕನಹಳ್ಳಿ- ಕೆಬಿ ಕ್ರಾಸ್- ತುರುವೇಕೆರೆ- ಚನ್ನರಾಯಣಪಟ್ಟಣ
* ಬೆಳಗಾವಿ-ಹುಬ್ಬಳ್ಳಿ ವಯಾ ಕಿತ್ತೂರು
* ಬಳ್ಳಾರಿ- ಲಿಂಗಸುಗೂರು ವಯಾ ಸಿರುಗುಪ್ಪ, ಸಿಂಧನೂರು
* ಮಿರಾಜ್ -ಕವಥೆಮಹನ್ಕಲ್-ಜಾಥ್- ಬಿಜಾಪುರ

ಕೇಳಿದ್ದು ಗಂಜಿ ಸಿಕ್ಕಿದ್ದು ಪಾಯಸ ಆದರೆ ಫುಲ್ ಸಪ್ಪೆ

ಕೇಳಿದ್ದು ಗಂಜಿ ಸಿಕ್ಕಿದ್ದು ಪಾಯಸ ಆದರೆ ಫುಲ್ ಸಪ್ಪೆ

ಖರ್ಗೆ ಅವರು ಎಕ್ಸ್ ಪ್ರೆಸ್ ರೈಲುಗಳ ಸಂಖ್ಯೆ ಹೆಚ್ಚಿಸಿದ್ದು ಸ್ವಾಗತಾರ್ಹ ಆದರೆ, ಇಂಟರ್ ಸಿಟಿ ಹಾಗೂ ಕೆಲವು ರೈಲು ಮಾರ್ಗ ವಿಸ್ತರಣೆ ಮಾಡದೇ ರಾಜ್ಯದ ಜನತೆಗೆ ನಿರಾಶೆ ಮೂಡಿಸಿದ್ದಾರೆ.

* ಬಳ್ಳಾರಿ-ಹೊಸಪೇಟೆ ಟು ಬೆಂಗಳೂರು ಇಂಟರ್ ಸಿಟಿ ರೈಲು
* ಗುಂತಕಲ್, ಬಿಜಾಪುರ-ಬಳ್ಳಾರಿ ಇಂಟರ್‍ಸಿಟಿ ರೈಲು ಹಾಗೇ ಬೀದರ್ ಗುಲ್ಬರ್ಗಾ ನಡುವೆ ರೈಲು ಮಾರ್ಗ

* ಶಿವಮೊಗ್ಗ-ಬೆಂಗಳೂರಿಗೆ ಹೆಚ್ಚುವರಿ ರೈಲು

* ಶಿವಮೊಗ್ಗ ಕಡೂರು ಚಿಕ್ಕಮಗಳೂರು ರೈಲು ಹಾಸನದವರೆಗೂ ವಿಸ್ತರಣೆ
* ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವ ಎಲ್ಲ ರೈಲುಗಳನ್ನು ಧಾರವಾಡದಿಂದ ಬಿಡಬೇಕು
* ಹುಬ್ಬಳ್ಳಿ- ಮಂಗಳೂರು ಸೆಂಟ್ರಲ್ ( ವಯಾ ಹಾಸನ-ಅರಸೀಕೆರೆ) ರಾತ್ರಿ ಎಕ್ಸ್ ಪ್ರೆಸ್
* ಕುಶಾಲ ನಗರ-ಮಡಿಕೇರಿ, ತಾಳಗುಪ್ಪ-ಹೊನ್ನಾವರ ಈ ರೀತಿ ಆಂತರಿಕ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ವಿಫಲ
* ರಾಜ್ಯದಿಂದ ಹೆಚ್ಚಿನ ಎಕ್ಸ್ ಪ್ರೆಸ್ , ಪ್ರೀಮಿಯಂ ರೈಲುಗಳು ಪರರಾಜ್ಯಕ್ಕೆ ಸಂಚರಿಸುವುದರಿಂದ ಇಲ್ಲಿಗಿಂತ ಅಲ್ಲಿನ ಜನತೆಗೆ ಹೆಚ್ಚಿನ ಅನುಕೂಲಕರ ಎಂಬುದು ದುರಂತ ಸತ್ಯ.

ಹೊಸ ಮಾರ್ಗಗಳು, ಸಮೀಕ್ಷೆ ಜಾರಿ

ಹೊಸ ಮಾರ್ಗಗಳು, ಸಮೀಕ್ಷೆ ಜಾರಿ

ಕಳೆದ ಬಾರಿ ಬಜೆಟ್ ನಲ್ಲಿ ಮಂಜೂರಾದ ಮಾರ್ಗಗಳು:

* ಕಡೂರು- ಚಿಕ್ಕಮಗಳೂರು (46 ಕಿ.ಮೀ) ಗೇಜ್ ಪರಿವರ್ತನೆ: ಕೋಲಾರ- ಚಿಕ್ಕಬಳ್ಳಾಪುರ (85 ಕಿ.ಮೀ)
* ಹನುಮಗರ್-ಶ್ರೀಗಂಗಾನಗರ (64 ಕಿ.ಮೀ) ಡಬ್ಲಿಂಗ್ : ಮದ್ದೂರು-ಮಂಡ್ಯ( 19 ಕಿ.ಮೀ)
* ಬೀರೂರು- ಅಜ್ಜಂಪುರ (18 ಕಿ.ಮೀ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+