ರಾಕೇಶ್ ವಿರುದ್ಧ ಕಾಮೆಂಟ್ ಮಾಡಿದ ಯುವಕರ ವಿರುದ್ಧ ಕೇಸ್

Posted By:
Subscribe to Oneindia Kannada

ರಾಯಚೂರು, ಆಗಸ್ಟ್ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ ರಾಕೇಶ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದ ಆರೋಪದ ಮೇಲೆ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟರ್ ಹಾಕಿದ್ದ ಆರೋಪದ ಮೇಲೆ ನವೀನ್ ಹಾಗೂ ಶರಣಬಸಪ್ಪ ಎಂಬುವವರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಎಫ್ ಐಆರ್ ಹಾಕಲಾಗಿದೆ. [ರಾಕೇಶ್ ಗ್ರೂಪ್ ಫೋಟೋ ಬಗ್ಗೆ ಗೆಳೆಯ ಹೇಳಿದ್ದೇನು?]

ಸಾಮಾಜಿಕ ಜಾಲ ತಾಣಗಳಲ್ಲಿ ರಾಕೇಶ್ ಅವರ ನಿಂದನೆಯಾಗುತ್ತಿದೆ, ಕ್ರಮ ಜರುಗಿಸುವಂತೆ ಕೋರಿ ಗದ್ದಪ್ಪಗೌಡ ಎಂಬುವವರು ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [ಕಂಬನಿ ಮಿಡಿಯುತ್ತಲೇ ಜನತೆಗೆ ಧನ್ಯವಾದ ಅರ್ಪಿಸಿದ ಸಿದ್ದರಾಮಯ್ಯ]

Raichur : Two booked for posting comments against Rakesh Siddaramaiah

ಶರಣ ಬಸಪ್ಪ ಹಗೂ ನವೀನ್ ವಿರುದ್ದ ಐಪಿಸಿ ಸೆಕ್ಷನ್ 153 ಎ, 504,506 ಹಾಗೂ 34ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಅವ್ಯಾಚ ಶಬ್ದಗಳಿಂದ ಜಾತಿ ನಿಂದನೆ, ಸಾರ್ವಜನಿಕ ಶಾಂತಿಗೆ ಭಂಗ ಮುಂತಾದ ಆರೋಪದಡಿ ಇಬ್ಬರ ವಿರುದ್ದ ಕೇಸ್ ದಾಖಲಾಗಿದೆ.

ಕುರುಬ ಸಮಾಜಕ್ಕೆ ಸೇರಿದ ಗದ್ದನ ಗೌಡ ಅವರು ಜುಲೈ 31ರಂದು ನೀಡಿದ ದೂರಿನ ಪ್ರಕಾರ, ಆರೋಪಿಗಳಿಬ್ಬರು ಲಿಂಗಸುಗೂರು ಹುಡುಗರ ವಾಟ್ಸಾಪ್ ಗುಂಪಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ರಾಕೇಶ್ ವಿರುದ್ಧ 10 ರಿಂದ 12 ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಕುರುಬ ಸಮಾಜಕ್ಕೆ ಧಕ್ಕೆ ಉಂಟಾಗುವಂತೆ ಮಾತನಾಡಿದ್ದಾರೆ.

ಅನಾರೋಗ್ಯದಿಂದ ಬೆಲ್ಜಿಯಂನಲ್ಲಿ ಮೃತರಾದ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆ ಮೈಸೂರಿನ ಟಿ ಕಾಟೂರಿನಲ್ಲಿ ನೆರವೇರಿತು. ರಾಕೇಶ್ ಅವರ ನಿಧನದ ಸುದ್ದಿ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸಿದ್ದರಾಮಯ್ಯ ಹಾಗೂ ರಾಕೇಶ್ ವಿರುದ್ಧ ಅವಹೇಳನಕಾರಿ, ಅಣಕು ಸಂದೇಶಗಳು ಹರಿದಾಡತೊಡಗಿದ್ದನ್ನು ಇಲ್ಲಿ ಸ್ಮರಿಸಬಹುದು. ರಾಕೇಶ್ ಅವರ ಬಗ್ಗೆ ವಾಟ್ಸಪ್ ನಲ್ಲಿ ಬಂದ ಚಿತ್ರಗಳು ಹಾಗೂ ಸಂದೇಶಗಳೆಲ್ಲ ಸುಳ್ಳು ಎಂಬುದು ಈಗಾಗಲೇ ಸ್ಪಷ್ಟವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two youths booked by Lingasugur police, Raichur for posting comments against Rakesh Siddaramaiah on various social networking sites and spreading derogatory messages on Whatsapp group
Please Wait while comments are loading...