ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ದೇವಸ್ಥಾನ ಭೇಟಿಗೂ ಕಾಂಗ್ರೆಸ್ ರಣತಂತ್ರಕ್ಕೂ ಸಂಬಂಧವಿಲ್ಲ: ಪರಮೇಶ್ವರ್

By Sachhidananda Acharya
|
Google Oneindia Kannada News

ಬೆಂಗಳೂರು, ಜನವರಿ 31: ರಾಹುಲ್ ಗಾಂಧಿಯವರ ದೇವಾಲಯ ಭೇಟಿಗೂ ಕಾಂಗ್ರೆಸ್ ಪಕ್ಷದ ಚುನಾವಣೆ ರಣತಂತ್ರಕ್ಕೂ ಸಂಬಂಧವಿಲ್ಲ. ದೇವಾಲಯ ಭೇಟಿ ಹಿನ್ನಲೆಯಲ್ಲಿ ಪಕ್ಷದ ತಂತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

"ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಶೃಂಗೇರಿ ಸ್ವಾಮಿಗಳನ್ನು ಭೇಟಿಯಾಗಿದ್ದರು.. ಇಂದಿರಾಜಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.. ನಮ್ಮ ಮತ್ತು ರಾಹುಲ್ ಜೀ ಅವರ ತಂತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ಪರಮೇಶ್ವರ್ ಪಿಟಿಐಗೆ ತಿಳಿಸಿದ್ದಾರೆ.

Rahul's temple visits do not indicate any change in Cong

ಇನ್ನು ಕರ್ನಾಟಕ ಭೇಟಿ ವೇಳೆ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, "ಯಾರಾದರೂ ಸಲಹೆ ನೀಡಿದರೆ ಅವರು ಭೇಟಿ ನೀಡಲೂಬಹುದು. ಆದರೆ ಈ ರೀತಿಯ ಯಾವುದೇ ಯೋಜನೆ ಇಲ್ಲ," ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪರಮೇಶ್ವರ್ ಬಿಜೆಪಿಗೆ ಧಾರ್ಮಿಕತೆಯ ಪೇಟೆಂಟ್ ನೀಡಿಲ್ಲ ಎಂದಿದ್ದಾರೆ. ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬದಲಾವಣೆ ಎಂದರೆ ರಾಜೀವ್ ಗಾಂಧಿಯರ ಕನಸಿನ ಆಧುನಿಕ ಭಾರತವನ್ನು ನಿರ್ಮಿಸುವುದಾಗಿದೆ ಎಂದಿದ್ದಾರೆ.

ಇನ್ನು ಚುನಾವಣೆ ವೇಳೆ ಹಿಂದುತ್ವ ಭಯೋತ್ಪಾದನೆ ಮತ್ತು ಬೀಫ್ ವಿಚಾರಗಳನ್ನು ಪ್ರಸ್ತಾಪಿಸದಂತೆ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ ಎಂಬ ವರದಿಯನ್ನೂ ಪರಮೇಶ್ವರ್ ಅಲ್ಲಗಳೆದಿದ್ದಾರೆ.
"ರಾಹುಲ್ ಗಾಂಧಿಯವರ ಜತೆಗಿನ ಸಭೆಯಲ್ಲಿ ಬೀಫ್ ಆಗಲೀ, ಹಿಂದುತ್ವ ಭಯೋತ್ಪಾದನೆ ಬಗ್ಗೆಯಾಗಲಿ ನಾವು ಚರ್ಚೆಯನ್ನೇ ನಡೆಸಿಲ್ಲ. ಮತ್ತು ಅವರು ಈ ವಿಚಾರಗಳನ್ನು ಪ್ರಸ್ತಾಪಿಸದಂತೆ ನಮಗೆ ಹೇಳಿಯೂ ಇಲ್ಲ.. ನಾವು ಸ್ಟ್ರಾಟೆಜಿ, ಅಭ್ಯರ್ಥಿಗಳ ಆಯ್ಕೆ ಮಾನದಂಡ ಮತ್ತು ಪ್ರಚಾರದ ಬಗ್ಗೆ ಮಾತ್ರ ಚರ್ಚಿಸಿದ್ದೇವೆ," ಎಂದಿದ್ದಾರೆ.

"ಒಂದೊಮ್ಮೆ ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡಿದರೆ ನಾವು ಅಭಿವೃದ್ಧಿ ಬಗ್ಗೆ ಮಾತನಾಡುತ್ತೇವೆ. ನಮ್ಮದೇನಿದ್ದರೂ ಒಳಗೊಳ್ಳುವಿಕೆಯ ಅಜೆಂಡಾ. ಅವರದೇನಿದ್ದರೂ ಹಿಂದುತ್ವ ಮತ್ತು ಧರ್ಮದ ಆಧಾರದ ಮೇಲೆ ಒಡೆಯುವ ಅಜೆಂಡಾ," ಎಂದು ಪರಮೇಶ್ವರ್ ಟೀಕಿಸಿದ್ದಾರೆ.

English summary
Recent temple visits by Congress President Rahul Gandhi do not indicate any change in the party's strategy as his father and grandmother too had offered prayers in shrines, Karnataka state unit chief G Parameshwara said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X