ಮೋದಿ ಭೇಟಿ ಹಿನ್ನಲೆ ರಾಹುಲ್ ಏ.13ರ ರಾಜ್ಯ ಪ್ರವಾಸ ಮುಂದೂಡಿಕೆ
ಬೆಂಗಳೂರು, ಏಪ್ರಿಲ್ 7 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಏ.13ರ ಕರ್ನಾಟಕ ಭೇಟಿಯನ್ನು ಮುಂದೂಡಲಾಗಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳೂರಿನಲ್ಲಿ ಈ ಕುರಿತು ಹೇಳಿಕೆ ನೀಡಿದರು. 'ಏ.13ಕ್ಕೆ ನರೇಂದ್ರ ಮೋದಿ ಅವರು ದಕ್ಷಿಣ ಕನ್ನಡಕ್ಕೆ ಬರುವ ಉದ್ದೇಶವೇನು?. ಅಂದು ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮ ಇದೆ' ಎಂದು ಹೇಳಿದರು.
'ಎರಡು ಕಾರ್ಯಕ್ರಮಗಳು ಕ್ಲಾಷ್ ಆಗಬಾರದು ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಏನು ಸಂದೇಶ ಕೊಡುತ್ತಾರೆ. ಮೋದಿ ಮುಖ ನೋಡಿ ಜನ ಏಕೆ ಮತ ನೀಡಬೇಕು?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ರೋಡ್ ಶೋ ಇತ್ತು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಏ.13ರಂದು ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ದಕ್ಷಿಣ ಕನ್ನಡದಲ್ಲಿ ಅವರು ಪ್ರಚಾರ ನಡೆಸಬೇಕಾಗಿತ್ತು. ಬಳಿಕ ಕೆ.ಆರ್.ನಗರ ಮತ್ತು ಮಂಡ್ಯದಲ್ಲಿ ಅವರು ರೋಡ್ ಶೋ ನಡೆಸಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮತಯಾಚನೆ ಮಾಡಬೇಕಿತ್ತು.
ಆದರೆ, ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಒಂದೇ ದಿನ ಬಂದರೆ ಗಲಾಟೆ ನಡೆಯಬಹುದು ಎಂಬ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಮೋದಿ ಭೇಟಿ : ನರೇಂದ್ರ ಮೋದಿ ಅವರು ಏ.9ರಂದು ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಏ.13ರಂದು ಮಂಗಳೂರಿನಲ್ಲಿ ಸಮಾವೇಶ ನಿಗದಿಯಾಗಿದೆ.












Click it and Unblock the Notifications