ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಬಾರಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ರಾಹುಲ್ ಗಾಂಧಿ

By Manjunatha
|
Google Oneindia Kannada News

Recommended Video

ಸಿದ್ದಗಂಗಾ ಮಠಕ್ಕೆ ಮೊದಲ ಬಾರಿಗೆ ಭೇಟಿ ಕೊಟ್ಟ ರಾಹುಲ್ ಗಾಂಧಿ | Oneindia Kannada

ತುಮಕೂರು, ಏಪ್ರಿಲ್ 04: ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಮೂರನೇ ಬಾರಿ ಭೇಟಿ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು.

ಇಂದು ದಾವಣಗೆರೆಯಲ್ಲಿ ನಡೆದ ವ್ಯಾಪಾರಿಗಳೊಂದಿಗಿನ ಸಂವಾದ ಕಾರ್ಯಕ್ರಮ ಮುಗಿಸಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಶತಾಯುಷಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದರು.

ಚಿತ್ರಗಳು :ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ರಾಹುಲ್ ಗಾಂಧಿ

ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚಲಾವಣೆಯಲ್ಲಿರುವಾಗಲೇ ರಾಹುಲ್ ಅವರ ಈ ಭೇಟಿ ಮಹತ್ವದ್ದೆನಿಸಿದೆ.

Rahul Gandhi visits Siddaganga mutt for the first time

ಈಗಾಗಲೇ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಕಳೆದ ಬಾರಿ ಅಮಿತ್ ಶಾ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮರು ದಿನವೇ ಮಠದ ಕಿರಿಯ ಸ್ವಾಮಿಗಳು ಲಿಂಗಾಯತ ಪ್ರತ್ಯೇಕ ಧರ್ಮ ನಿರ್ಣಯಕ್ಕೆ ಸಿದ್ದಗಂಗಾ ಮಠದ ಬೆಂಬಲ ಇರುವುದಾಗಿ ಪತ್ರ ಬರೆದಿದ್ದರು.

ಬಿಜೆಪಿ ಏಕೆ ಸೋಲುತ್ತದೆ ಎಂದು ವಿವರಿಸಿದ ರಾಹುಲ್ ಗಾಂಧಿ!ಬಿಜೆಪಿ ಏಕೆ ಸೋಲುತ್ತದೆ ಎಂದು ವಿವರಿಸಿದ ರಾಹುಲ್ ಗಾಂಧಿ!

Rahul Gandhi visits Siddaganga mutt for the first time

ರಾಹುಲ್ ಗಾಂಧಿ ಅವರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಸಂಸದ ಮಲ್ಲಿಕಾರ್ಜುನ ಖರ್ಗೆ ಇನ್ನೂ ಹಲವು ರಾಜ್ಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

English summary
AICC president Rahul Gandhi visits Tumakur Siddaganga Mutt for the first time and take blessings from Siddaganga Sri. CM Siddaramaiah, Parameshwar, Kharge and many other congress leader there with Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X