Breaking; ಭಾರತ್ ಜೋಡೋ, ಮೂರು ದಿನ ರಾಹುಲ್‌ಗೆ ಬಿಡುವು
ಬೆಂಗಳೂರು, ಅಕ್ಟೋಬರ್ 21; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದ ರಾಯಚೂರಿನಲ್ಲಿದೆ. ರಾಹುಲ್ ಗಾಂಧಿ ಮೂರು ದಿನಗಳ ಕಾಲ ಯಾತ್ರೆಯಿಂದ ಬಿಡುವು ಪಡೆಯಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಶುಕ್ರವಾರ ಈ ಕುರಿತು ಮಾಹಿತಿ ನೀಡಿದರು, "ಅಕ್ಟೋಬರ್ 24, 25 ಮತ್ತು 26ರಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಿಂದ ಬಿಡುವು ಪಡೆಯಲಿದ್ದಾರೆ" ಎಂದರು.

"ಮೂರು ದಿನಗಳ ಬಿಡುವು ಪಡೆಯಲಿರುವ ರಾಹುಲ್ ಗಾಂಧಿ ನೂತನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅಧ್ಯಕೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅಕ್ಟೋಬರ್ 26ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ.
ರಾಹುಲ್ ಗಾಂಧಿ ಗುರುವಾರ ಮಂತ್ರಾಲಯ ಮಠಕ್ಕೆ ಭೇಟಿ ನೀಡಿದ್ದರು. ಶುಕ್ರವಾರ ಮಂತ್ರಾಲಯದಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕರ್ನಾಟಕದ ರಾಯಚೂರಿನ ಗಿಲ್ಲೆಸೂಗೂರು ತಲುಪಿತು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಯಾತ್ರೆ ಸ್ವಾಗತಿಸಿದರು.
ಸಂಜೆ 4 ಗಂಟೆಗೆ ಕೆರೆಬೂದೂರು ಗ್ರಾಮದಿಂದ ಪಾದಯಾತ್ರೆ ಮತ್ತೆ ಆರಂಭವಾಗಲಿದೆ. ಸಂಜೆ 7 ಗಂಟೆಗೆ ಯುರಗೇರಾ ಗ್ರಾಮದ ಬಸ್ ನಿಲ್ದಾಣದಲ್ಲಿ ವಿರಾಮ ಪಡೆಯಲಿದೆ. ರಂಗನಾಥ ಸ್ವಾಮಿ ದೇವಾಲಯದಲ್ಲಿ ರಾತ್ರಿ ವಾಸ್ತವ್ಯ ಹೂಡಲಾಗುತ್ತದೆ.
ಭಾರತ್ ಜೋಡೋ ಯಾತ್ರೆಗೆ ದಸರಾ ಸಂದರ್ಭದಲ್ಲಿ ಎರಡು ದಿನ ಬಿಡುವು ನೀಡಲಾಗಿತ್ತು. ಆಗ ಯಾತ್ರೆ ಮಂಡ್ಯದಲ್ಲಿತ್ತು. ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕೀಯ ಚುನಾವಣೆ ಹಿನ್ನಲೆಯಲ್ಲಿ ಒಂದು ದಿನ ಬಿಡುವು ನೀಡಲಾಗಿತ್ತು. ರಾಹುಲ್ ಗಾಂಧಿ ಸೇರಿದಂತೆ ಇತರ ನಾಯಕರು ಭಾರತ್ ಜೋಡೋ ಯಾತ್ರೆ ಇದ್ದ ಬಳ್ಳಾರಿಯ ಸಂಗನಕಲ್ಲುವಿನಲ್ಲಿ ಮತದಾನ ಮಾಡಿದ್ದರು.












Click it and Unblock the Notifications