Rahul Gandhi: ಗೃಹಲಕ್ಷ್ಮಿ ಯೋಜನೆ ಜಾರಿ; ಮಹಿಳೆಯರನ್ನು ಹೊಗಳಿದ ರಾಹುಲ್ ಗಾಂಧಿ ಹೇಳಿದ್ದೇನು?
ಮೈಸೂರು, ಆಗಸ್ಟ್ 30: ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದ್ದಕ್ಕೆ ನಮ್ಮ ಮಹಿಳೆಯರ ಪಾತ್ರವೇ ಪ್ರಧಾನವಾಗಿದೆ. ಮರದ ಬೇರು ಕಣ್ಣಿಗೆ ಕಾಣುವುದಿಲ್ಲ ಆದರಂತೆ ನಮ್ಮ ಮಹಿಳೆಯರ ಶ್ರಮ ಯಾರಿಗೂ ಕಾಣುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಬಳಿಕ ಮಾತನಾಡಿ ಅವರು, ಗ್ಯಾಸ್ ಸಿಲಿಂಡರ್, ಆಹಾರ ಧಾನ್ಯಗಳು ಸೇರಿದಂತೆ ನೂರಾರು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಬಿಸಿ ನೇರವಾಗಿ ತಟ್ಟುತ್ತದೆ. ಭಾರತ್ ಜೋಡೊ ಮಾಡುವಾಗ ಸಾವಿರಾರು ಜನ ಮಹಿಳೆಯರ ಜೊತೆ ಮಾತನಾಡುವ ಅವಕಾಶ ನನ್ನದಾಯಿತು. ಆಗ ಹೆಚ್ಚಿನ ಜನ ಹೇಳಿದ್ದು ಬೆಲೆ ಏರಿಕೆಯಿಂದ ನಾವು ತತ್ತಿರಿಸಿ ಹೋಗಿದ್ದೇವೆ, ಏನಾದರೂ ಸಹಾಯ ಮಾಡಿ ಎಂದು ಕೇಳಿದ್ದರು.

ನನಗೆ ಆಗ ಹೊಳೆಯಿತು ಕರ್ನಾಟಕದ ಹೆಣ್ಣು ಮಕ್ಕಳೇ ನಮಗೆ ಭದ್ರವಾದ ಅಡಿಪಾಯದು. ಅವರು ಕೊಟ್ಟ ಮಾತನ್ನು ಮರೆಯಲಿಲ್ಲ ಬದಲಾಗಿ ಈಗ ಗ್ಯಾರಂಟಿಗಳ ಪರವಾಗಿ ನಿಂತು ಗೆಲ್ಲಿಸಿದ್ದಾರೆ. ಮರದ ಬೇರು ಕಣ್ಣಿಗೆ ಕಾಣುವುದಿಲ್ಲ ಆದರಂತೆ ನಮ್ಮ ಮಹಿಳೆಯರ ಶ್ರಮ ಯಾರಿಗೂ ಕಾಣುವುದಿಲ್ಲ ಎಂದು ಮಹಿಳೆಯರ ಕುರಿತು ಹೊಗಳಿದ್ದಾರೆ.
ವಿಧಾನಸಭಾ ಚುನಾವಣೆಗು ಮುಂಚಿತವಾಗಿ ನಾವು ನಿಮಗೆ 5 ಗ್ಯಾರಂಟಿಗಳ ಭರವಸೆ ನೀಡಿದ್ದೆವು. ನಮಗೆ ಭರವಸೆ ಇತ್ತು ನಾವು ನುಡಿದಂತೆ ನಡೆಯುತ್ತೇವೆ ಎಂದು ಅದರಂತೆ ನಡೆದುಕೊಂಡಿದ್ದೇವೆ. ರಕ್ಷಾ ಬಂಧನದ ದಿನ ಮಹಿಳೆಯರಿಗೆ, ಅಕ್ಕ- ತಂಗಿಯರಿಗೆ ಮರೆಯಲಾರದ ಕೊಡುಗೆ ನೀಡಿದ್ದೇವೆ. ಕರ್ನಾಟಕ ಮಾದರಿ ಈಗ ಇಡೀ ದೇಶದ ರಾಜಕಾರಣದ ದಿಕ್ಕನ್ನೇ ಬದಲಾಯಿಸಲಿದೆ. ಎಲ್ಲಾ ಗ್ಯಾರಂಟಿ ಯೋಜನೆಗಳು ನಮ್ಮ ಕಾಂಗ್ರೆಸ್ ಸರ್ಕಾರದ್ದಲ್ಲ ಬದಲಾಗಿ ನಿಮ್ಮ ಯೋಜನೆಗಳು ಇವು, ನಿಮಗಾಗಿ ಮಾಡಿದ ಯೋಜನೆಗಳು ಎಂದು ಹೇಳಿದರು.
ಇಂದು ಬಟನ್ ಒತ್ತುವುದರ ಮೂಲಕ ಎಲ್ಲಾ ತಾಯಂದಿರ- ಹೆಣ್ಣು ಮಕ್ಕಳ ಖಾತೆಗೆ 2 ಸಾವಿರ ಹಣ ಬಂದಿದೆ. ಇದು ಕೇವಲ ಈ ತಿಂಗಳು ಮಾತ್ರವಲ್ಲ ನಮ್ಮ ಸರ್ಕಾರ ಇರುವ ತನಕವೂ ಬರುತ್ತದೆ. ಒಂದು ಯೋಜನೆಯನ್ನು ಬಿಟ್ಟು ಮಿಕ್ಕ ನಾಲ್ಕು ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಇರುವಂತಹ ಯೋಜನೆಗಳು ಇವು. ಎಂತಹ ದೊಡ್ಡ ಮರವಿದ್ದರು ಅದಕ್ಕೆ ಬೇರುಗಳು ಗಟ್ಟಿಯಾಗಿರಬೇಕು. ಆಗ ಎಂತಹ ಚಂಡಮಾರುತ ಬಂದರೂ ಗಟ್ಟಿಯಾಗಿ ಅದನ್ನು ಎದುರಿಸಬಹುದು. ಅದಕ್ಕೆ ಈ ದೇಶದ ಬುನಾದಿ ಹೆಣ್ಣು ಮಕ್ಕಳು. ಆದ ಕಾರಣ ಅವರನ್ನು ನಾವು ಆರ್ಥಿಕವಾಗಿ ಗಟ್ಟಿಮಾಡುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ.
ಕರ್ನಾಟಕ ಸರ್ಕಾರ ಯಶಸ್ವಿ 100 ದಿನಗಳನ್ನು ಸಾಕಷ್ಟು ಕೊಡುಗೆಗಳನ್ನು ನೀಡಿದಿ ಇದಕ್ಕೆ ನಿಮಗೆಲ್ಲಾ ಕೃತಜ್ಞತೆ ಸಲ್ಲಿಸುತ್ತೇನೆ. ಮೋದಿ ಸರ್ಕಾರ ಕೇವಲ ಬಂಡವಾಳಶಾಹಿಗಳ, ಕೋಟ್ಯಾಧಿಪತಿಗಳ ಪರವಾಗಿ ಕೆಲಸ ಮಾಡುತ್ತಿದೆ. ಮೋದಿಯವರ ಇಬ್ಬರು - ಮೂರು ಜನ ಗೆಳೆಯರಿಗೆ ಮಾತ್ರ ಸರ್ಕಾರ ಲಾಭ ಮಾಡಿಕೊಡುತ್ತಿದೆ. ನಾವು ಎಂದಿಗೂ ಬಡವರಪರ ಕೆಲಸ ಮಾಡುತ್ತೇವೆ.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸರ್ಕಾರ ಲೇವಡಿ ಮಾಡಿತು, ಆದರೆ ಈಗ ನಕಲು ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿಗಳು ಮಾತನಾಡುತ್ತಾ "ಕಾಂಗ್ರೆಸ್ ಪಕ್ಷ ಸುಳ್ಳು ಹೇಳುತ್ತಿದೆ ಎಂದರು, ಆದರೆ ನಿಜ ಇಂದು ನಿಮ್ಮ ಮುಂದೆ ಕಾಣುತ್ತಿದೆ. ಭಾರತ ದೇಶದ ಅತಿದೊಡ್ಡ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ಯೋಜನೆ ಇದಾಗಿದ್ದು, 1.9 ಕೋಟಿ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ.
ಶಕ್ತಿ ಯೋಜನೆ ಮೂಲಕ ಇಡೀ ಕರ್ನಾಟಕ ಪ್ರವಾಸ ಮಾಡುತ್ತಿದ್ದಾರೆ, ಅನ್ನ ಭಾಗ್ಯದ ಮೂಲಕ ಮೂರು ಹೊತ್ತು ಊಟ ಮಾಡುತ್ತಿದ್ದಾರೆ, ಉಚಿತ ವಿದ್ಯುತ್‌ನಿಂದ ಉಳಿದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿದ್ದಾರೆ. ಇವುಗಳು ಕ್ರಾಂತಿಕಾರಕ ಬದಲಾವಣೆಗಳು ಎಂದು ರಾಹುಲ್ ಗಾಂಧಿ ಹೇಳಿದರು.











Click it and Unblock the Notifications