25 ಸಾವಿರ ಪೆನ್ ಡ್ರೈವ್: 'ಪ್ರಜ್ವಲ್ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ಮಾಹಿತಿ ಇದ್ದಂತಿದೆ '

ಬೆಂಗಳೂರು, ಮೇ 08 : . ಹಾಸನ ನಗರದಾದ್ಯಂತ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ, ಅವರನ್ನ ಎಸ್ ಐಟಿ ವಿಚಾರಣೆಗೆ ಕರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಅಂಕಿ ಅಂಶಗಳ ಸಮೇತ ಈ ವಿಷಯ ಹೇಳಿದ್ದಾರೆ. ಎಲ್ಲರಿಗಿಂತ ಮೊದಲೇ ಈ ಮಾಹಿತಿ ಅವರಿಗೆ ಸಿಕ್ಕಿರಬೇಕು. ಪೆನ್ ಡ್ರೈವ್ ನಲ್ಲಿದ್ದ ವಿಡಿಯೋಗಳನ್ನು ಅವರು ನೋಡಿರಬೇಕು. ಹೀಗಾಗಿ ಅವರಿಂದ ತನಿಖಾ ತಂಡ ಮಾಹಿತಿ ಪಡೆಯಬೇಕು. ಕೂಡಲೇ ಅವರಿಗೆ ಸಮನ್ಸ್ ಜಾರಿ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಪಡಿಸಿದರು.

Rahul Gandhi Seems To Have All The Information About The Prajwal Case Says HD Kumaraswamy

ರಾಹುಲ್ ಗಾಂಧಿ ಅವರು ಅತ್ಯಾಚಾರಕ್ಕೆ ಒಳಗಾದವರಲ್ಲಿ 16 ವರ್ಷದೊಳಗಿನ ಹೆಣ್ಣುಮಕ್ಕಳಿದ್ದಾರೆ ಎಂದು ಹೇಳಿದ್ದಾರೆ. ಅವರು ಯಾವ ಆಧಾರದಲ್ಲಿ ಈ ಹೇಳಿಕೆ ಕೊಟ್ಟರು? ಪೋಕ್ಸೋ ಪ್ರಕರಣದಲ್ಲಿ ಕೇಸ್ ಹಾಕಬೇಕೆಂದು ಅವರು ಒತ್ತಾಯ ಮಾಡಿದ್ದಾರೆ. "ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಅವರೇ. ಯಾಕಪ್ಪಾ.. ಇನ್ನೂ ರಾಹುಲ್ ಗಾಂಧಿಗೆ ನೋಟಿಸ್ ಕೊಟ್ಟಿಲ್ಲ?" ಎಂದು ಪ್ರಶ್ನಿಸಿದರು.

ಪೆನ್ ಡ್ರೈವ್ ನಲ್ಲಿ ಹೆಣ್ಣುಮಕ್ಕಳ ಪೋಟೋ ಹಾಕಿ ಏನು ಮಾಡಿದಿರಿ ನೀವು,? ರಾಜ್ಯದ ಮಾನ ಮರ್ಯಾದೆ ಹಾಳು ಮಾಡಿದವರು ನೀವು. ಇದರಲ್ಲಿ ಪ್ರಧಾನಿ, ಕೇಂದ್ರ ಗೃಹ ಸಚಿವರನ್ನು ಯಾಕೆ ಎಳೆದು ತರುತ್ತೀರಿ? ಜೆಡಿಎಸ್ ಬಿಜೆಪಿ ಮೈತ್ರಿ ಆದಾಗಲೇ ನಿಮ್ಮ ನಿದ್ದೆ ಹೋಗಿದೆ. ಅದಕ್ಕೆ ಈ ಪ್ರಕರಣವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಮಾಡಿಸುತ್ತಿದ್ದೀರಿ. ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಂದೀಪ ಸುರ್ಜೇವಾಲ ಅವರು ಇದ್ದಾರಲ್ಲ, ಸಂತ್ರಸ್ತರಿಗೆ ಹಣಕಾಸು ಪರಿಹಾರ ಕೊಡಲಾಗುವುದು ಎಂದು ಹೇಳಿದ್ದಾರೆ.

ಯಾವ ವಿಡಿಯೋ ಮೊದಲು ಬಿಡಬೇಕು, ಯಾವುದನ್ನು ಆಮೇಲೆ ಬಿಡಬೇಕು ಎಂದು ಟಿಕ್ ಮಾಡಿದ್ರಲ್ಲ ಸುರ್ಜೇವಾಲ ಅವರೇ.. ಯಾವುದನ್ನು ಯಾವಾಗ ಬಿಡಬೇಕು ಎಂದು ಯಾರಪ್ಪ ಪ್ಲಾನ್ ಮಾಡಿದ್ದು? ಈಗ ನೋಡಿದರೆ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ ಎಂದು ಹೇಳುತ್ತಿದ್ದೀರಿ. ನಾಚಿಕೆ ಆಗೋದಿಲ್ಲವೇ ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದರು.

25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ

ಹಾಸನ ಜಿಲ್ಲೆಯ ಡಿಸಿ, ಎಸ್ಪಿ ಅವರಿಗೆ ಪೂರ್ಣಚಂದ್ರ ತೇಜಸ್ವಿ ಅವರು ನೀಡಿದ ದೂರಿಗೆ ಪ್ರತಿಯಾಗಿ ಅವರು ಹಿಂಬರಹ ನೀಡಿದ್ದಾರೆ. ಅಂದ ಮೇಲೆ ಈ ವಿಷಯ ಸರ್ಕಾರದ ಗಮನಕ್ಕೆ ಹೊಯ್ತು ಎಂದು ಅರ್ಥ ಅಲ್ಲವೇ? ಅಲ್ಲಿನ ಸೆನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಯಿತು. ಹಾಸನ ನಗರದಾದ್ಯಂತ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ದೂರು ದಾಖಲಿಸಿದ ಬಳಿಕವೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾರಾದರೊಬ್ಬರು ಯಾರ ವಿರುದ್ಧವಾದರೂ ಒಂದು ಅವಹೇಳನಕಾರಿ ಪೋಸ್ಟ್ ಹಾಕಿದರೆ ಪೊಲೀಸರು ತಕ್ಷಣ ಹುಡುಕಿಕೊಂಡು ಅವನ ಮನೆ ಬಾಗಿಲಿಗೆ ಹೋಗುತ್ತಾರೆ. ಆದರೆ, ಈ ಪ್ರಕರಣದಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದರು.

ಮೊದಲು ಹೊಳೇನರಸೀಪುರದಲ್ಲಿ ಒಂದು ಕೇಸ್ ದಾಖಲು ಮಾಡಿದ್ದರು. ನಂತರ ಗನ್ ಪಾಯಿಂಟ್ ನಲ್ಲಿ ಅತ್ಯಾಚಾರ ಎಸಗಿದರು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಒಬ್ಬರಿಂದ ದೂರು ಕೊಡಿಸಿದ್ದಾರೆ. ಆದರೆ, ಗನ್ ಪಾಯಿಂಟ್ ನಲ್ಲಿ ಅತ್ಯಾಚಾರಕ್ಕೆ ಒಳಗಾದ ಆ ಮಹಿಳೆ ಆ ಘಟನೆ ನಡೆದ ಮರುದಿನವೇ ಆರೋಪಿತ ವ್ಯಕ್ತಿಯ ಜತೆಯೇ ವೇದಿಕೆ ಹಂಚಿಕೊಂಡು ಅವರ ಪಕ್ಕದಲ್ಲಿಯೇ ಅಸೀನರಾಗಿದ್ದಾರೆ. ಮೊದಲ ಪೆನ್ ಡ್ರೈವ್ ನಲ್ಲಿದ್ದ ಮಹಿಳೆ ಏಪ್ರಿಲ್ 22ರಂದು ಚುನಾವಣೆಯ ಪ್ರಚಾರದಲ್ಲಿ ಪ್ರಜ್ವಲ್ ಜತೆ ಇದ್ದಾರೆ. ಅದೇ ಏಪ್ರಿಲ್ 28ರಂದು ಆ ಮಹಿಳೆಯಿಂದ ದೂರು ಕೊಡಿಸಿದ್ದಾರೆ. ಈ ಮಾಹಿತಿಗಳೆಲ್ಲ ಸೋರಿಕೆ ಮಾಡಿದವರು ಯಾರು? ಇಂಥ ಅಧಿಕಾರಿಗಳಿಂದ ಸರಿಯಾದ ತನಿಖೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+