ರಾಹುಲ್ ಗಾಂಧಿ ರಾಜ್ಯ ಪ್ರವಾಸ : ಕಾರ್ಯಕ್ರಮಗಳ ಪಟ್ಟಿ

Posted By: Gururaj
Subscribe to Oneindia Kannada

ಬೆಂಗಳೂರು, ಫೆಬ್ರವರಿ 5 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸದ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿದೆ. ಫೆ.10ರಿಂದ ಮೂರು ದಿನಗಳ ಕಾಲ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆಯೂ ಎದುರಾಗುತ್ತಿದೆ. ಆದ್ದರಿಂದ, ರಾಹುಲ್ ಗಾಂಧಿ ಭೇಟಿ ಮಹತ್ವ ಪಡೆದುಕೊಂಡಿದೆ.

ಕೊಟ್ಟೂರು ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ?

ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರು ಪ್ರವಾಸ ಮಾಡಲಿದ್ದಾರೆ. ಹಲವು ಸಂವಾದ ಕಾರ್ಯಕ್ರಮ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕರ್ತರ ಜೊತೆ ಮಾತುಕತೆ ನಡೆಸಲಿದ್ದಾರೆ.

70 ಸದಸ್ಯರ ಪ್ರಚಾರ ಸಮಿತಿಗೆ ರಾಹುಲ್ ಗ್ರೀನ್ ಸಿಗ್ನಲ್!

ರಾಹುಲ್ ಗಾಂಧಿ ಅವರು ಉತ್ತರ ಮತ್ತು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿಯೇ ಪ್ರವಾಸ ಮಾಡಲಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಕಡೆ ಪ್ರವಾಸ ಮಾಡುತ್ತಿಲ್ಲ. ದೇವಾಲಯಗಳಿಗೆ ಅವರು ಭೇಟಿ ನೀಡಲಿದ್ದಾರೆ ಎಂಬುದು ಸದ್ಯದ ಸುದ್ದಿ.

ಹೈದರಾಬಾದ್-ಕರ್ನಾಟಕ ಭಾಗದಿಂದ ರಾಹುಲ್ ರಾಜ್ಯ ಪ್ರವಾಸ

ಕರ್ನಾಟಕ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿಯೇ ಹೆಚ್ಚು ಪ್ರಯಾಣ ಮಾಡಲಿದ್ದಾರೆ. ತಾಲೂಕು ಕೇಂದ್ರಗಳಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಪುನಃ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ.

ಫೆ.10ರ ಕಾರ್ಯಕ್ರಮಗಳು

ಫೆ.10ರ ಕಾರ್ಯಕ್ರಮಗಳು

ಫೆ.10ರಂದು ರಾಹುಲ್ ಗಾಂಧಿ ಬಳ್ಳಾರಿಗೆ ಆಗಮಿಸಲಿದ್ದಾರೆ. ಹೊಸಪೇಟೆಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಕೊಪ್ಪಳದ ಮುನಿರಾಬಾದ್‌ಗೆ ಭೇಟಿ. ಸಂಜೆ 6 ಗಂಟೆಗೆ ಕುಕನೂರಿನಲ್ಲಿ ಸಮಾವೇಶ ಉದ್ದೇಶಿಸಿ ಭಾಷಣ. ಅಲ್ಲಿಯೇ ವಾಸ್ತವ್ಯ.

ಫೆ.11ರ ಕಾರ್ಯಕ್ರಮಗಳೇನು

ಫೆ.11ರ ಕಾರ್ಯಕ್ರಮಗಳೇನು

ಫೆ.11ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕಾರಟಗಿ, ಗಂಗಾವತಿ, ಕನಕಗಿರಿ ಪಟ್ಟಣಗಳಿಗೆ ಭೇಟಿ. ಕಾರಟಗಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿ. ಹಂಚಿನಾಳ ಕ್ಯಾಂಪ್ ನಿವಾಸಿಗಳ ಜೊತೆ ಮಾತುಕತೆ. ರಾಯಚೂರಿಗೆ ಭೇಟಿ ಸಿಂಧನೂರಿನಲ್ಲಿ ರೈತರೊಂದಿಗೆ ಚರ್ಚೆ. ರಾಯಚೂರಿನಲ್ಲಿ ವಾಸ್ತವ್ಯ.

ಫೆ.12ರಂದು ರಾಯಚೂರು, ಕಲಬುರಗಿಗೆ ಭೇಟಿ

ಫೆ.12ರಂದು ರಾಯಚೂರು, ಕಲಬುರಗಿಗೆ ಭೇಟಿ

ಫೆ.12ರಂದು ರಾಯಚೂರಿನಿಂದ ದೇವದುರ್ಗಕ್ಕೆ ಪ್ರಯಾಣ. ಜೇವರ್ಗಿಯಲ್ಲಿ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳ ಭೇಟಿ. ಕಲಬುರಗಿಯ ಬಂದೇನವಾಜ್ ದರ್ಗಾಕ್ಕೆ ಭೇಟಿ. ಕಲಬುರಗಿಯಲ್ಲಿ ವಾಸ್ತವ್ಯ.

ಫೆ.13ರ ಕಾರ್ಯಕ್ರಮಗಳು

ಫೆ.13ರ ಕಾರ್ಯಕ್ರಮಗಳು

ದಿ.ಖಮರುಲ್ ಇಸ್ಲಾಂ ನಿವಾಸಕ್ಕೆ ಭೇಟಿ. ಎಚ್‌.ಕೆ.ಸೊಸೈಟಿಯಲ್ಲಿ ಉದ್ಯಮಿಗಳ ಜೊತೆ ಚರ್ಚೆ. ಹೆಲಿಕಾಪ್ಟರ್ ಮೂಲಕ ಬೀದರ್‌ನ ಬಸವಕಲ್ಯಾಣಕ್ಕೆ ಭೇಟಿ. ಅಲ್ಲಿಂದ ಹೈದರಾಬಾದ್‌ಗೆ ಪ್ರಯಾಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AICC president Rahul Gandhi will visit Karnataka on February 10, 2018. In his three day tour he will visit North Karnataka districts. Here are the road show, route map.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ