ಜಿಎಸ್‌ಟಿಯನ್ನು ಪುನಾರಚನೆ ಮಾಡುತ್ತೇವೆ : ರಾಹುಲ್ ಗಾಂಧಿ

Posted By: Gururaj
Subscribe to Oneindia Kannada

ಕಲಬುರಗಿ, ಫೆಬ್ರವರಿ 13 : 'ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಪುನಾರಚನೆ ಮಾಡಲಾಗುತ್ತದೆ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಕಲಬುರಗಿಯಲ್ಲಿ ಉದ್ಯಮಿಗಳ ಜೊತೆ ಸಂವಾದ ನಡೆಸಿದರು. ರಾಹುಲ್ ಗಾಂಧಿ ಅವರ 4 ದಿನದ ಪ್ರವಾಸ ಇಂದು ಅಂತ್ಯಗೊಳ್ಳಲಿದ್ದು, ಮಧ್ಯಾಹ್ನ ದೆಹಲಿಗೆ ಮರಳಲಿದ್ದಾರೆ.

ಚಿತ್ರಗಳು : ಕಲಬುರಗಿಯಲ್ಲಿ ರಾಹುಲ್ ಗಾಂಧಿ

ಕಲಬುರಗಿಯ ಎಚ್‌ಕೆಇಎಸ್‌ ಕನ್ವೆಕ್ಷನ್ ಹಾಲ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಪಾಲ್ಗೊಂಡಿದ್ದಾರೆ.

Rahul Gandhi interaction with industrialist in Kalaburagi, Karnataka

ಸಂವಾದದಲ್ಲಿ ರಾಹುಲ್ ಹೇಳಿದ್ದೇನು?

* ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲ ವಿಫಲವಾಗಿದೆ. 50 ಸಾವಿರ ಉದ್ಯೋಗವನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ.

* ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೃಷಿ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ನೆರೆಯ ದೇಶಗಳ ನಡುವೆ ಉತ್ತಮವಾದ ಬಾಂಧವ್ಯವಿಲ್ಲ.

* ಜಿಎಸ್‌ಟಿ ಜಾರಿಗೆ ಬಂದ ಬಳಿಕ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಜಿಎಸ್‌ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್

* ಜಿಎಸ್‌ಟಿಯಲ್ಲಿ ಹಲವಾರು ದೋಷಗಳಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್‌ಟಿಯನ್ನು ಪುನಾರಚನೆ ಮಾಡಲಾಗುತ್ತದೆ.

* ಅಂಕಿಸಂಖ್ಯೆಗಳ ಪ್ರಕಾರ ಎನ್‌ಡಿಎ ಸರ್ಕಾರಕ್ಕಿಂತ ಯುಪಿಎ ಅವಧಿಯಲ್ಲಿ ಎಂಎಸ್‌ಪಿ ಅಧಿಕವಾಗಿತ್ತು. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We will restructure the Goods and Service Tax (GST) if they come to power at the Centre in the 2019 general elections said AICC president Rahul Gandhi in Kalaburagi, Karnataka. Rahul Gandhi interact with industrialist on February 13, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ