ಶಾಲಾ ಬಿಸಿಯೂಟಕ್ಕೆ ರಾಗಿಮುದ್ದೆ, ಜೋಳದ ರೊಟ್ಟಿಯ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ! ಕಾರಣವೇನು?
ಬೆಂಗಳೂರು, ಜುಲೈ 31: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿರಾಗಿ ಮುದ್ದೆ ಹಾಗೂ ಜೋಳದ ರೊಟ್ಟಿ ಸೇವಿಸುವ ಭಾಗ್ಯ ಸಿಗದಂತಾಗಿದ್ದು, ರಾಜ್ಯದ ಮಕ್ಕಳಿಗೆ ನಿರಾಸೆಯುಂಟಾಗಿದೆ.
ಹೌದು, ರಾಜ್ಯ ಸರಕಾರವು ರಾಜ್ಯದ ಶಾಲಾ ಮಕ್ಕಳಿಗೆ ರಾಗಿ ಮುದ್ದೆ ಅಥವಾ ಜೋಳದ ರೊಟ್ಟಿ ನೀಡಲು ಅಗತ್ಯವಿರುವ ಆಹಾರಧಾನ್ಯ ಖರೀದಿಗೆ ಅನುದಾನ ಕೋರಿ ಕೇಂದ್ರ ಸರ್ಕಾಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಿತ್ತು, ಆದರೆ, ಈ ಪ್ರಸ್ತಾವನೆಯನ್ನ ಕೇಂದ್ರ ಸರಕಾರ ತಿರಸ್ಕರಿಸಿದೆ.

ಈ ಹಿಂದೆ ಮಕ್ಕಳ ಆರೋಗ್ಯದ ದೃಷ್ಠಿಯಿಂದಾಗಿ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಮಿಲೆಟ್ ಅನ್ನು ಬಳಸುವಂತೆ ಕೇಂದ್ರ ಸರಕಾರವೇ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚದ ರಾಗಿ ಮತ್ತು ಜೋಳದಿಂದ ಸಿದ್ಧಪಡಿಸಿದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲು ರಾಜ್ಯ ಸರ್ಕಾರವೂ ತೀರ್ಮಾನಿಸಿತ್ತು. ಅದರಂತೆ ಈ ಆಹಾರ ಧಾನ್ಯಗಳ ಖರೀದಿ ವೆಚ್ಚ ನೀಡುವಂತೆ ಕೋರಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ವಿಭಾಗಕ್ಕೆ ಪ್ರಸ್ತಾವನೆ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನ ಸಲ್ಲಿಸಿತ್ತು.
ಇನ್ನೂ ರಾಜ್ಯ ಸರ್ಕಾರದ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ಕಾರಣವನ್ನು ನೀಡದೆ ರಾಗಿ ಅಥವಾ ಜೋಳದ ಬದಲಾಗಿ ಅಕ್ಕಿಯನ್ನು ಮುಂದುವರಿಸುವುದಕ್ಕೆ ಸೂಚಿಸಿ ಶಿಕ್ಷಣ ಇಲಾಖೆಯ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಪತ್ರ ಬರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೀಗಾಗಿ, ಮಧ್ಯಾಹ್ನ ಬಿಸಿಯೂಟದ ಮೆನುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟವಾಗಿದೆ.
ಇತ್ತ ರಾಜ್ಯ ಸರ್ಕಾರ ಮಕ್ಕಳ ಆರೋಗ್ಯದ ದೃಷ್ಠಿಯಿಂದಾಗಿ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಲು ಮಿಲೆಟ್ ಆಹಾರಕ್ಕೆ ಮೊದಲಿಗಿಂತ ರಾಗಿ ಹಾಗೂ ಜೋಳದ ರೊಟ್ಟಿ ಊಟ ನೀಡಿದರೆ ವೆಚ್ಚ ಜಾಸ್ತಿಯಾಗಲಿದೆ ಎಂಬ ಕಾರಣಕ್ಕೆ ಕೇಂದ್ರ ಸರಕಾರವು, ಅಕ್ಕಿಯಿಂದ ತಯಾರಿಸಿದ ಆಹಾರವನ್ನೇ ನೀಡುವಂತೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಕೇಂದ್ರ ಸರ್ಕಾರ ಅನುದಾನ ತಿರಸ್ಕರಿಸಿದ ಹಿನ್ನೆಲೆ ರಾಜ್ಯ ಶಿಕ್ಷಣ ಇಲಾಖೆಯು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಎಂದಿನಂತೆ ಅಕ್ಕಿಯನ್ನೇ ಬಳಕೆ ಮಾಡಲು ನಿರ್ಧರಿಸಿದೆ. ಪ್ರಸ್ತುತ ಮೆನು ಪ್ರಕಾರ ಶಾಲೆಯಲ್ಲಿ ಐದು ದಿನ ಪಲಾವ್, ಅನ್ನ ಮತ್ತು ಸಾಂಬರ್ ನೀಡಲಾಗುತ್ತಿದೆ. ಒಂದು ದಿನ ಗೋಧಿ ಪಾಯಸವನ್ನು ಕೊಡಲಾಗುತ್ತಿದೆ.
ಶಿಕ್ಷಣ ಇಲಾಖೆಯು ಬಿಸಿಯೂಟ ಯೋಜನೆಗೆ 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ತಲಾ 4.13 ರೂ ಹಾಗೂ 6-8 ನೇ ತರಗತಿಗೆ 6.18 ರೂ. ಮತ್ತು 9-10ನೇ ತರಗತಿಗೆ 6.18 ರೂ. ವೆಚ್ಚ ಮಾಡುತ್ತಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರವು ಶೇ 40:60ರ ಅನುಪಾತದಲ್ಲಿ ವೆಚ್ಚ ಭರಿಸುತ್ತಿವೆ.
ಮಕ್ಕಳನ್ನು ಶಾಲೆಗೆ ಕರೆತರುವ ಉದ್ದೇಶದಿಂದ ಉಪಹಾರ ಯೋಜನೆಯನ್ನು ಜಾರಿಗೆ ತಂದಿತು. ಸರಕಾರಿ ಹಾಗೂ ಅನುದಾನಿತ ಸೇರಿ 55,307 ಶಾಲೆಗಳಿಂದ 55.08 ಲಕ್ಷ ವಿದ್ಯಾರ್ಥಿಗಳು ಮಧ್ಯಾಹ್ನ ಬಿಸಿಯೂಟ ಮಾಡುತ್ತಿದ್ದು, ಬಿಸಿಯೂಟದ ಜೊತೆಗೆ ಕ್ಷೀರ ಭಾಗ್ಯ, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡುತ್ತಿದೆ.












Click it and Unblock the Notifications