ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬರಗಾಲವೇ ಇರುವುದಿಲ್ಲ: ಆರ್. ಅಶೋಕ್
ತುಮಕೂರು,ಡಿಸೆಂಬರ್ 10: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬರಗಾಲವೇ ಇರುವುದಿಲ್ಲ.ರಾಜ್ಯ ಸುಭಿಕ್ಷವಾಗಿರುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಈ ಕುರಿತು ತುಮಕೂರು ಜಿಲ್ಲೆಯ ಶಿರಾದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಸರ್ಕಾರ ಇದ್ದಾಗ ಬರೀ ಬರಗಾಲವಿತ್ತು. ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯ ಸುಭೀಕ್ಷವಾಗಿದೆ. ಹಿಂದೆಂದೂ ಸುರಿಯದ ಮಳೆ ಬಂದು ಕೆರೆ ಕಟ್ಟೆ ತುಂಬಿದೆ. ಕೇವಲ ಮಳೆಯಿಂದ ಕೆರೆಗಳು ಮಾತ್ರ ತುಂಬಿದ್ದಲ್ಲ ರಾಜ್ಯ ಖಜಾನೆ ಕೂಡ ತುಂಬಿದೆ. ನಮ್ಮ ಅಂದಾಜು ಮೀರಿ ಖಜಾನೆ ತುಂಬಿದೆ . ಬಜೆಟ್ ನಲ್ಲಿ ಹಲವು ಜನಪರ ಯೋಜನೆ ಘೋಷಣೆ ಮಾಡುತ್ತೇವೆ ಎಂದರು
ಶಿರಾ ನಗರವು ದಿನೇ ದಿನೆ ಬೆಳವಣಿಗೆಯಾಗುತ್ತಿದ್ದು, ಇಲಾಖೆಗಳಿಗೆ ಸ್ವಂತ ಕಟ್ಟಡವಿದ್ದರೆ ಸಾರ್ವಜನಿಕರಿಗೆ ಉತ್ತಮ ಕೆಲಸ ಕಾರ್ಯಗಳು ಆಗುತ್ತವೆ. ಆ ನಿಟ್ಟಿನಲ್ಲಿ ಶಾಸಕ ಡಾ ಸಿಎಂ ರಾಜೇಶ್‌ಗೌಡ ಅವರ ಮನವಿ ಮೇರೆಗೆ ಸುಮಾರು 1.60 ಕೋಟಿ ರೂ. ವೆಚ್ಚದಲ್ಲಿ ಉಪ ನೋಂದಣಿ ಕಚೇರಿ ನೂತನ ಕಟ್ಟಡ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಾಗಿದೆ. ಕಟ್ಟಡವನ್ನು ಗುಣಮಟ್ಟದಲ್ಲಿ ಶೀಘ್ರವಾಗಿ ನಿರ್ಮಿಸುವಂತೆ ಹೇಳಿದರು.
ಶಾಸಕರೆಂದರೆ ಶಿರಾ ಕ್ಷೇತ್ರದ ಶಾಸಕ ಡಾ ಸಿಎಂ ರಾಜೇಶ್ ಗೌಡರ ರೀತಿ ಇರಬೇಕು. ಯಾವುದೇ ಕೆಲಸವನ್ನು ಅತ್ಯಂತ ಶದ್ಧೆಯಿಂದ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಜನರು ಡಾ ರಾಜೇಶ್ ಗೌಡವರನ್ನೇ ಗೆಲ್ಲಿಸಿ. ಅವರು ಗೆದ್ದರೆ ನಾನು ಗೆದ್ದಂತೆ ಎಂದು ಆರ್ ಅಶೋಕ್ ಹೇಳಿದರು.

ಇನ್ನೂ ಶಾಸಕ ಡಾ ಸಿಎಂ ರಾಜೇಶ್ ಗೌಡ ಮಾತನಾಡಿ, ಶಿರಾದಲ್ಲಿ ಬಹಳ ದಿನದಿಂದಲೂ ಉಪ ನೋಂದಣಿ ಕಚೇರಿ ಆಗಬೇಕೆಂಬ ಬೇಡಿಕೆ ಇತ್ತು. ಈಗ ಇರುವ ಉಪ ನೋಂದಣಾಧಿಕಾರಿ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಸುಮಾರು 1.60 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಬೆಂಗಳೂರು, ತುಮಕೂರುಗಳಲ್ಲಿ ಇರುವಂತೆ ಪಾಸ್‌ಪೋರ್ಟ್ ಸೇವಾ ಕೇಂದ್ರದ ರೀತಿಯಲ್ಲಿಉಪ ನೋಂದಣಾಧಿಕಾರಿ ಕಚೇರಿ ನಿರ್ಮಾಣವಾಗಲಿದೆ. ಇಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಅವರು, ಕಂದಾಯ ಸಚಿವ ಆರ್ ಅಶೋಕ್ ಕಂದಾಯ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರ ಫಲವಾಗಿ ಕಂದಾಯ ದಾಖಲೆ ಮನೆ ಮನೆಗೆ ತಲುಪಲು ಸಾಧ್ಯವಾಗಿದೆ ಎಂದರು.
ಇನ್ನೂ ಈ ಸಂದರ್ಭದಲ್ಲಿಎಂಎಲ್‌ಸಿ ಚಿದಾನಂದ್ ಎಂ ಗೌಡ, ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಬಿಕೆ ಮಂಜುನಾಥ್, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತೆ ಡಾ ಮಮತಾ ಬಿ ಆರ್., ಜಿಲ್ಲಾ ನೋಂದಣಾಧಿಕಾರಿ ಶಶಿಕಲಾ ಬಿಎನ್, ತಹಶೀಲ್ದಾರ್ ತಿಪ್ಪೇಸ್ವಾಮಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಡಿ ರಾಜಶೇಖರ್, ಸೇರಿದಂತೆ ಮತ್ತಿತರರಿದ್ದರು.ತುಮಕೂರು,ಡಿಸೆಂಬರ್ 10: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬರಗಾಲವೇ ಇರುವುದಿಲ್ಲ.ರಾಜ್ಯ ಸುಭಿಕ್ಷವಾಗಿರುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಈ ಕುರಿತು ತುಮಕೂರು ಜಿಲ್ಲೆಯ ಶಿರಾದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಸರ್ಕಾರ ಇದ್ದಾಗ ಬರೀ ಬರಗಾಲವಿತ್ತು. ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯ ಸುಭೀಕ್ಷವಾಗಿದೆ. ಹಿಂದೆಂದೂ ಸುರಿಯದ ಮಳೆ ಬಂದು ಕೆರೆ ಕಟ್ಟೆ ತುಂಬಿದೆ. ಕೇವಲ ಮಳೆಯಿಂದ ಕೆರೆಗಳು ಮಾತ್ರ ತುಂಬಿದ್ದಲ್ಲ ರಾಜ್ಯ ಖಜಾನೆ ಕೂಡ ತುಂಬಿದೆ. ನಮ್ಮ ಅಂದಾಜು ಮೀರಿ ಖಜಾನೆ ತುಂಬಿದೆ . ಬಜೆಟ್ ನಲ್ಲಿ ಹಲವು ಜನಪರ ಯೋಜನೆ ಘೋಷಣೆ ಮಾಡುತ್ತೇವೆ ಎಂದರು
ಶಿರಾ ನಗರವು ದಿನೇ ದಿನೆ ಬೆಳವಣಿಗೆಯಾಗುತ್ತಿದ್ದು, ಇಲಾಖೆಗಳಿಗೆ ಸ್ವಂತ ಕಟ್ಟಡವಿದ್ದರೆ ಸಾರ್ವಜನಿಕರಿಗೆ ಉತ್ತಮ ಕೆಲಸ ಕಾರ್ಯಗಳು ಆಗುತ್ತವೆ. ಆ ನಿಟ್ಟಿನಲ್ಲಿ ಶಾಸಕ ಡಾ ಸಿಎಂ ರಾಜೇಶ್‌ಗೌಡ ಅವರ ಮನವಿ ಮೇರೆಗೆ ಸುಮಾರು 1.60 ಕೋಟಿ ರೂ. ವೆಚ್ಚದಲ್ಲಿ ಉಪ ನೋಂದಣಿ ಕಚೇರಿ ನೂತನ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿದೆ. ಕಟ್ಟಡವನ್ನು ಗುಣಮಟ್ಟದಲ್ಲಿ ಶೀಘ್ರವಾಗಿ ನಿರ್ಮಿಸುವಂತೆ ಹೇಳಿದರು.
ಶಾಸಕರೆಂದರೆ ಶಿರಾ ಕ್ಷೇತ್ರದ ಶಾಸಕ ಡಾ ಸಿಎಂ ರಾಜೇಶ್ ಗೌಡರ ರೀತಿ ಇರಬೇಕು. ಯಾವುದೇ ಕೆಲಸವನ್ನು ಅತ್ಯಂತ ಶದ್ಧೆಯಿಂದ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಜನರು ಡಾ ರಾಜೇಶ್ ಗೌಡವರನ್ನೇ ಗೆಲ್ಲಿಸಿ. ಅವರು ಗೆದ್ದರೆ ನಾನು ಗೆದ್ದಂತೆ ಎಂದು ಆರ್ ಅಶೋಕ್ ಹೇಳಿದರು.
ಇನ್ನೂ ಶಾಸಕ ಡಾ ಸಿಎಂ ರಾಜೇಶ್ ಗೌಡ ಮಾತನಾಡಿ, ಶಿರಾದಲ್ಲಿ ಬಹಳ ದಿನದಿಂದಲೂ ಉಪ ನೋಂದಣಿ ಕಚೇರಿ ಆಗಬೇಕೆಂಬ ಬೇಡಿಕೆ ಇತ್ತು. ಈಗ ಇರುವ ಉಪ ನೋಂದಣಾಧಿಕಾರಿ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಸುಮಾರು 1.60 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಬೆಂಗಳೂರು, ತುಮಕೂರುಗಳಲ್ಲಿ ಇರುವಂತೆ ಪಾಸ್‌ಪೋರ್ಟ್ ಸೇವಾ ಕೇಂದ್ರದ ರೀತಿಯಲ್ಲಿಉಪ ನೋಂದಣಾಧಿಕಾರಿ ಕಚೇರಿ ನಿರ್ಮಾಣವಾಗಲಿದೆ. ಇಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಅವರು, ಕಂದಾಯ ಸಚಿವ ಆರ್ ಅಶೋಕ್ ಕಂದಾಯ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದರ ಫಲವಾಗಿ ಕಂದಾಯ ದಾಖಲೆ ಮನೆ ಮನೆಗೆ ತಲುಪಲು ಸಾಧ್ಯವಾಗಿದೆ ಎಂದರು.
ಇನ್ನೂ ಈ ಸಂದರ್ಭದಲ್ಲಿಎಂಎಲ್‌ಸಿ ಚಿದಾನಂದ್ ಎಂ ಗೌಡ, ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಬಿಕೆ ಮಂಜುನಾಥ್, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತೆ ಡಾ ಮಮತಾ ಬಿ ಆರ್.ಜಿಲ್ಲಾ ನೋಂದಣಾಧಿಕಾರಿ ಶಶಿಕಲಾ ಬಿಎನ್, ತಹಶೀಲ್ದಾರ್ ತಿಪ್ಪೇಸ್ವಾಮಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಡಿ ರಾಜಶೇಖರ್, ಸೇರಿದಂತೆ ಮತ್ತಿತರರಿದ್ದರು.

Click it and Unblock the Notifications