ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Guaranteed Schemes: ಉಚಿತ ವಿದ್ಯುತ್, ‌2000 ರೂ ಕೊಡೋಕೆ ಜಾತಿ ಬೇಕಾ..? ಆರ್.‌ ಅಶೋಕ್

|
Google Oneindia Kannada News

ಬೆಂಗಳೂರು, ಜೂನ್‌ 08: ಉಚಿತ ವಿದ್ಯುತ್, ‌2000 ರೂ ಕೊಡೋಕೆ ಜಾತಿ ಬೇಕಾ..? ಕೆಲವು ಜಾತಿಗಳನ್ನ ಈ ಫ್ರೀ ಸ್ಕೀಮ್ ನಿಂದ ಹೊರಗಡೆ ಇಡೋದಕ್ಕೆ ಹುನ್ನಾರ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಆರ್‌ ಅಶೋಕ್‌ ಆರೋಪಿಸಿದರು.

ಈ ಕುರಿತು ನಗರದ ಬಿಜೆಪಿ ಕಚೇರಿಯಲ್ಲಿ ಗ್ಯಾರಂಟಿ ಅರ್ಜಿಗಳಲ್ಲಿ ಜಾತಿ ಕಾಲಮ್ ವಿಚಾರವಾಗಿ ಮಾತನಾಡಿ, ಜಾತಿ ಕಾಲಮ್ ಗಳನ್ನು ಹಾಕುವ ಮೂಲಕ ಜಿಲೆಬಿ ಬ್ರಾಂಡ್ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅಂದ್ರೆ ಜಿಲೆಬಿ ಅನ್ನೋ ಬ್ರಾಂಡ್ ಎಂದರು.

R Ashok Slams Congress Over Doing Caste Discrimination in Providing Government Schemes

ಗ್ಯಾರಂಟಿ ಘೋಷಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ನನಗೂ ಫ್ರೀ, ನಿಮಗೂ ಫ್ರೀ, ಎಲ್ಲರಿಗೂ ಫ್ರಿ, ಮಹದೇವಪ್ಪ ನಿನಗೂ ಉಚಿತ ಅಂದಿದ್ರು. ಆದರೆ ಈಗ ಹೇಳ್ತಿದ್ದಾರೆ ತೆರಿಗೆ ಪಾವತಿದಾರರಿಗೆ ಮಾತ್ರ ಅಂತಿದ್ದಾರೆ ಎಂದು ಮಾಜಿ ಸಚಿವ ಆರ್‌ ಆಕ್ರೋಶ ವ್ಯಕ್ತಪಡಿಸಿದರು.

 ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಕುರಿತ ಅಧ್ಯಾಯ ಕೈಬಿಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನ ಆರ್‌ಎಸ್‌ಎಸ್ ಸಂಸ್ಥಾಪಕ ಹೆಡಗೇವಾರ್ ಕುರಿತ ಅಧ್ಯಾಯ ಕೈಬಿಡಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನ

ಗ್ಯಾರಂಟಿ ಘೋಷಣೆ ಜಾರಿಯಲ್ಲಿ ಕಾಂಗ್ರೆಸ್ ಜನರಿಗೆ ಟೋಪಿ ಹಾಕುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ಯಾರಂಟಿಗಳ ಬಗ್ಗೆ ಗೊಂದಲದ ಮೇಲೆ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಪ್ರತಿ ಮಂತ್ರಿಯ ಹೇಳಿಕೆ ಗೊಂದಲ ಗೂಡಾಗಿದೆ ಎಂದು ಕಿಡಿಕಾರಿದರು.

ವಿದ್ಯುತ್ ಬಿಲ್ ಒಂದು ವರ್ಷದ ಸರಾಸರಿ ಆಧಾರದ ಮೇಲೆ ಕಟ್ಟಬೇಕು ಅಂತಿದ್ದಾರೆ. ಅಲ್ಲೂ ಮೋಸ ಮಾಡ್ತಿದ್ದಾರೆ. ಬಾಡಿಗೆ ದಾರರ ಸ್ಥಿತಿ ಶೋಚನೀಯವಾಗಿದೆ. ಅವರೆಲ್ಲಾ ಕರೆಂಟ್ ಬಿಲ್ ಓನರ್ ಕಡೆಯಿಂದ ತರಬೇಕಾಗುತ್ತದೆ. ಗ್ಯಾರಂಟಿ ಕಾರ್ಡ್ ನಲ್ಲಿ ಮೊದಲು ಒಂದು ಕಂಡಿಷನ್ ಹಾಕಿರಲಿಲ್ಲ. ವಿದ್ಯುತ್ ಬಿಲ್ ಡಿಪಾಸಿಟ್ ಚಾರ್ಜ್ 65% ಏರಿಕೆ ಮಾಡಿ ಇದರಲ್ಲಿ ಹಣ ಸಂಗ್ರಹ ಮಾಡ್ತಿದ್ದಾರೆ. ವಿದ್ಯುತ್ ದರ 70 ಪೈಸೆ ಏರಿಕೆ ಮಾಡಿದ್ದಾರೆ. ಅತಿ ದುಬಾರಿ ರೇಟ್ ಗಳನ್ನು ಹಾಕ್ತಿದ್ದಾರೆ ಎಂದು ಆರೋಪಿಸಿದರು.

R Ashok Slams Congress Over Doing Caste Discrimination in Providing Government Schemes

ಜನಗಳ ದುಡ್ಡು ತಗೊಂಡು ಅವರಿಗೆ ವಾಪಸ್ಸು ಫ್ರಿಯಾಗಿ ಕೊಡೋದು,‌ ಇದು ಕಾಂಗ್ರೆಸ್ ಬುದ್ಧಿವಂತಿಕೆ. ಇದನ್ನು ಮೆಚ್ಚಲೇಬೇಕು ಎಂದು ವ್ಯಂಗ್ಯವಾಗಿ ಟೀಕಿಸಿದ ಅವರು, ಇಡೀ ರಾಜ್ಯದ ಜನ ರೊಚ್ಚಿಗೆದ್ದು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ. ಗ್ಯಾರಂಟಿ ಕಾರ್ಡ್ ಘೋಷಣೆ ಭರವಸೆ ಕೊಟ್ಟಂತೆ ನಡೆದುಕೊಳ್ಳಿ, ಇಲ್ಲಾಂದ್ರೆ ಜನ ಕೇಳಿದಾಗ ಚುರುಕು ಮುಟ್ಟುತ್ತದೆ.
ನಾವು ಹೋರಾಟ ಮಾಡುತ್ತೇವೆ ಎಂದರು.

English summary
R Ashok said that Congress Over Doing Caste Discrimination in Providing Government Schemes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X