ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಪಕ್ಕ ಕಟ್ಟಡ ಗುರುತಿಸುವಿಕೆ ಹೇಗೆ?
ಬೆಂಗಳೂರು, ಸೆಪ್ಟೆಂಬರ್ 06; ಕರ್ನಾಟಕದ ಲೋಕೋಪಯೋಗಿ ಇಲಾಖೆ ತನ್ನ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡ ನಿಯಂತ್ರಣ ರೇಖೆಯನ್ನು ಗುರುತಿಸುವ ಕುರಿತು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡಗಳು ಎಲ್ಲಿರಬೇಕು? ಎಂದು ವಿವರಣೆ ನೀಡಲಾಗಿದೆ.
ಕೆ. ಸಿ. ವಿಜಯ ಕುಮಾರಿ ಸರ್ಕಾರದ ಉಪ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ (ಸಂ & ಕ) ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸರ್ಕಾರದ ಆದೇಶ ದಿನಾಂಕ 9/10/1998, ಸರ್ಕಾರದ ದಿನಾಂಕ: 16/11/2002 ಮತ್ತು ಸರ್ಕಾರದ ಆದೇಶ ದಿನಾಂಕ 18/10/2004 ಉಲ್ಲೇಖ ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ, ಸುಧಾರಣೆ ಮತ್ತು ನಿರ್ವಹಣೆಯನ್ನು ಕೈಗೊಳ್ಳಲಾಗುತ್ತಿದೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
'ಇಂಡಿಯನ್ ರೋಡ್ ಕಾಂಗ್ರೆಸ್' ನ ವಿಶೇಷ ಪ್ರಕಟಣೆ 15ರನ್ವಯ ರಾಜ್ಯ ಹೆದ್ದಾರಿಗಳ ಅಕ್ಕ-ಪಕ್ಕಗಳಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಅದರ ತಡೆ (Prevention of Ribbon Development along Highways)ಇದರ ಉನ್ನತ ಭಾಗದಲ್ಲಿ ಎಲ್ಲಾ ವರ್ಗದ ರಸ್ತೆಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಪ್ರಮಾಣದ ಷರತ್ತುಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ IRC ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಕ್ಕಪಕ್ಕಗಳಲ್ಲಿ ರಸ್ತೆ ಭೂಮಿಯಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಮತ್ತು ರಸ್ತೆಗೆ ಸೇರಿದ ಭೂಮಿಯು ಅತಿಕ್ರಮಣವಾಗುತ್ತಿರುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಈ ಕ್ರಮಗಳನ್ನು ಪಾಲಿಸುವಂತೆ ಆದೇಶ ನೀಡಲಾಗಿದೆ ಎಂದು ವಿವರಣೆ ಕೊಟ್ಟಿದ್ದಾರೆ.
ರಸ್ತೆಯ ವಿಧಗಳು, ನಿಗದಿಪಡಿಸಿದ ದೂರದ ವಿವರಗಳು
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಕ್ಕಪಕ್ಕಗಳಲ್ಲಿ ರಸ್ತೆ ಮಧ್ಯಭಾಗದಿಂದ ಸೂಚಿಸಿರುವ ಅಗಲಕ್ಕೆ ಯಾವ ಕಟ್ಟಡಗಳನ್ನು ನಿರ್ಮಿಸಕೂಡದು. ಅಲ್ಲದೇ ಈ ಪರಿಮಿತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮತ್ತು ಅಂಗಡಿಗಳು, ಉಪಹಾರಗೃಹಗಳು, ಹೋಟೆಲ್‌ಗಳು ಮುಂತಾದವುಗಳನ್ನು ನಡೆಸುವುದಕ್ಕೆ ಅನುಮತಿಯನ್ನು ಕೊಡಬಾರದು ಎಂದು ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಾಗಿದ್ದರೆ ರಸ್ತೆಯ ಮಧ್ಯಭಾಗದಿಂದ ನಿಗದಿಪಡಿಸಿದ ದೂರ 40 ಮೀಟರ್ ಆಗಿದೆ. ರಾಜ್ಯ ಹೆದ್ದಾರಿಗಳು 40 ಮೀಟರ್ ಮತ್ತು ಮುಖ್ಯ ಜಿಲ್ಲಾ ರಸ್ತೆಗಳು 25 ಮೀಟರ್. ರಾಜ್ಯ ಲೋಕೋಪಯೋಗಿ ಇಲಾಖೆಯು ಆದೇಶದಲ್ಲಿ ನಗರ, ಪಟ್ಟಣ, ಗ್ರಾಮಗಳ ಪರಿಮಿತಿ ಹಾಗೂ ಇತರ ಆಕ್ಷೇಪಿತ ಪ್ರದೇಶಗಳಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ಗಡಿ ರೇಖೆ ಮತ್ತು ಕಟ್ಟಡ ರೇಖೆಗಳನ್ನು ಮಾರ್ಪಡಿಸಿ ನಿಗದಿಪಡಿಸಲಾಗಿತ್ತು.
ಸಿಟಿ ಕಾರ್ಪೊರೇಷನ್ ಪರಿಮಿತಿ. ಸಿಟಿ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ, ಟೌನ್ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ, ಟೌನ್ ಪಂಚಾಯತ್ ಪರಿಮಿತಿ, ಗ್ರಾಮ ಪಂಚಾಯತ್ ಪರಿಮಿತಿಯಲ್ಲಿ 6 ಮೀಟರ್. ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ 15 ಕಿ. ಮೀ. ದೂರದವರೆಗೆ 12 ಮೀಟರ್. ಸಿಟಿ ಮುನ್ಸಿಪಲ್ ಕೌನ್ಸಿಲ್ ಪರಿಮಿತಿಯಿಂದ 10 ಕಿ.ಮೀ. ದೂರದವರೆಗೆ 12 ಮೀಟರ್, ಟೌನ್ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ, ಟೌನ್ ಪಂಚಾಯತ್ ಪರಿಮಿತಿ, ಗ್ರಾಮ ಪಂಚಾಯತ್ ಪರಿಮಿತಿಯಿಂದ 5 ಕಿ.ಮೀ. ದೂರದವರೆಗ 12 ಮೀಟರ್.
ಆದರೆ ಈ ಆದೇಶದಲ್ಲಿ ನಿಗದಿಪಡಿಸಿದ್ದ ಪರಿಮಿತಿಯ ಅಂತರಕ್ಕಿಂತ ಕಡಿಮೆ ಅಂತರದಲ್ಲಿ ಹಲವು ಪಟ್ಟಣ/ ಗ್ರಾಮಗಳು ಬರುತ್ತಿದ್ದು ಈ ಪರಿಮಿತಿಗಳು ಒಂದರೊಳಗೊಂದು ಬರುವುದರಿಂದ ಇದನ್ನು ಜಾರಿಗೊಳಿಸುವಲ್ಲಿ ತೊಂದರೆ ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ಕರ್ನಾಟಕ ಹೆದ್ದಾರಿ ಕಾಯ್ದೆಯ ಅನುಷ್ಠಾನದ ಮೂಲ ಉದ್ದೇಶವೇ ವಿಫಲವಾಗುವುದನ್ನು ಸರ್ಕಾರ ಮನಗಂಡು ನಿಗದಿಪಡಿಸಲಾಗಿದ್ದ ರಾಜ್ಯ ಹೆದ್ದಾರಿಗಳ ಕಟ್ಟಡ ರೇಖೆಗಳ ಅಂತರವನ್ನು ಪರಿಷ್ಕರಿಸಿರುತ್ತದೆ.
ಸಿಟಿ ಕಾರ್ಪೊರೇಷನ್ ಪರಿಮಿತಿ, ಸಿಟಿ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ, ಟೌನ್ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ, ಟೌನ್ ಪಂಚಾಯಿತಿ ಪರಿಮಿತಿ, ಗ್ರಾಮ ಪಂಚಾಯಿತಿ ಪರಿಮಿತಿಯಲ್ಲಿ 6 ಮೀಟರ್ ಮತ್ತು ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ 15 ಕಿ. ಮೀ. ದೂರದ ತನಕ 12 ಮೀಟರ್.
ಹೆದ್ದಾರಿಗಳಲ್ಲಿ ಕಟ್ಟಡಗಳ ರೇಖೆಯನ್ನು ಗುರುತಿಸುತ್ತಿರುವ ಬಗ್ಗೆ ಸ್ಪಷ್ಟನೆ ಬೇಕೆಂದು ಇತರೆ ಇಲಾಖೆಗಳಿಂದ ಪ್ರಸ್ತಾವನೆಗಳು ಸ್ವೀಕೃತಗೊಂಡಿರುತ್ತದೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಹೊಸದಾಗಿ ಸಿಎಲ್-7 ಮಂಜೂರಾತಿಗೆ ಅಬಕಾರಿ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ಕೋರಿದಂತಹ ಸಂದರ್ಭಗಳಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ವತಿಯಿಂದ ವಿಭಿನ್ನ ರೀತಿಯ ನಿರಾಪೇಕ್ಷಣಾ ಪತ್ರಗಳು ಸ್ವೀಕೃತವಾಗುತ್ತಿರುವುದರಿಂದ ಗೊಂದಲವುಂಟಾಗುತ್ತಿರುವುದರಿಂದ ಸೂಕ್ತ ನಿರ್ದೇಶನ ನೀಡುವಂತೆ ಅಬಕಾರಿ ಇಲಾಖೆಯು ಕೋರಿರುತ್ತದೆ.
ಈ ಹಿನ್ನಲೆಯಲ್ಲಿ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಟ್ಟಡ ರೇಖೆಯನ್ನು ಗುರುತಿಸುವ ಕುರಿತು ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಹೊರಡಿಸಲಾಗಿರುವ ಆದೇಶಗಳ ಮೇಲೆ ಈ ಕೆಳಕಂಡ ಸ್ಪಷ್ಟನೆಯನ್ನು ನೀಡಲಾಗುತ್ತಿದೆ.
* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಟ್ಟಡ ರೇಖೆಯನ್ನು ಗುರುತಿಸಿ ನಿಗದಿಪಡಿಸುವುದು ಕೇಂದ್ರ ಸರ್ಕಾರದಿಂದ ಹೊರಡಿಸಲಾಗುವ ಆದೇಶಕ್ಕೆ ಒಳಪಟ್ಟಿರುತ್ತದೆ ಹಾಗೂ ಈ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ/ ವಲಯದ ಅಧಿಕಾರಿಗಳ ವತಿಯಿಂದ ನಿರ್ವಹಿಸಲಾಗುತ್ತದೆ.
* ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಮಾತ್ರ ಒಳಪಡುತ್ತಿದ್ದು, ಲೋಕೋಪಯೋಗಿ ಇಲಾಖೆಯಿಂದ ಹೊರಡಿಸಲಾಗಿರುವ ಆದೇಶಗಳಲ್ಲಿ ತಿಳಿಸಿರುವಂತೆ ಆಯಾ ಪ್ರದೇಶಗಳಿಗೆ ತಕ್ಕಂತೆ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಲೋಕೋಪಯೋಗಿ ಇಲಾಖೆಯ ಹೆದ್ದಾರಿ ಪ್ರಾಧಿಕಾರವು ಕಟ್ಟಡಗಳ ರೇಖೆಗಳನ್ನು ಗುರುತಿಸಿ ನಿಗದಿಪಡಿಸತಕ್ಕದ್ದು.
* ಸಿಟಿ ಕಾರ್ಪೊರೇಷನ್ ಪರಿಮಿತಿ, ಸಿಟಿ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ, ಟೌನ್ ಮುನ್ಸಿಪಲ್ ಕೌನ್ಸಿಲ್ ಪರಿಮಿತಿ, ಟೌನ್ ಪಂಚಾಯತಿ ಪರಿಮಿತಿ ಹಾಗೂ ಗ್ರಾಮ ಪಂಚಾಯತಿ ಪರಿಮಿತಿಯಲ್ಲಿ ಕಟ್ಟಡ ರೇಖೆಯ ಅಂತರವನ್ನು ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂ ಗಡಿಯ ಅಂಚಿನಿಂದ ಸದರಿ ಆದೇಶದಲ್ಲಿ ತಿಳಿಸಿರುವ ಅಂತರಕ್ಕೆ ನಿಗದಿಪಡಿಸಬೇಕಿರುತ್ತದೆ.
* ಕರ್ನಾಟಕ ಹೆದ್ದಾರಿ ಕಾಯ್ದೆ 1964 ರ ಸೆಕ್ಷನ್ 4 ರ ಪ್ರಕಾರ ಈಗಾಗಲೇ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಣೆ ಮಾಡಲಾಗಿದ್ದು, ಹೆದ್ದಾರಿ ಪ್ರಾಧಿಕಾರಿಯು ಭೂದಾಖಲಿತ ರಸ್ತೆ ಗಡಿಯನ್ನು ನಿರ್ಧರಿಸುತ್ತಾರೆ, ಈ ಕುರಿತು ಮಾಹಿತಿ ಬೇಕಾದಲ್ಲಿ ಇತರೆ ಇಲಾಖೆಗಳು ಲೋಕೋಪಯೋಗಿ ಇಲಾಖೆಯ ಹೆದ್ದಾರಿ ಪ್ರಾಧಿಕಾರಿಯನ್ನು ಸಂಪರ್ಕಿಸಬಹುದಾಗಿರುತ್ತದೆ.
* ಆದೇಶದಲ್ಲಿ ತಿಳಿಸಿರುವ ಆಕ್ಷೇಪಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಆದೇಶದಲ್ಲಿ ನಿಗದಿಪಡಿಸಿರುವಂತೆ ಕಟ್ಟಡ ರೇಖೆಯ ಅಂತರವು ಅನ್ವಯವಾಗುತ್ತದೆ. ಸಂಬಂಧಪಟ್ಟ ಪ್ರಾಧಿಕಾರಗಳು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅನುಪಾಸಿನಲ್ಲಿ ಕಟ್ಟಡ ರೇಖೆಯನ್ನು ಗುರುತಿಸಿ, ನಿರಾಪೇಕ್ಷಣಾ ಪತ್ರವನ್ನು ನೀಡುವಂತೆ ಕೋರಿದಲ್ಲಿ ಮೇಲಿನಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
-
ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ಮೂರು ವರ್ಷ ಮುಗಿದಿದೆ, ಸಚಿವ ಸಂಪುಟ ಬದಲಿಸಿ: ಹೈಕಮಾಂಡ್ಗೆ ಮನವಿ ಸಲ್ಲಿಸಲು ಟಿ.ಬಿ.ಜಯಚಂದ್ರ ಸಜ್ಜು -
School Property: ಸರ್ಕಾರಿ ಶಾಲೆ 12 ವರ್ಷಗಳಿಂದ ಒಂದೇ ಭೂಮಿಯಲ್ಲಿದ್ದರೆ ಅದು ರಾಜ್ಯ ಸರ್ಕಾರದ ಆಸ್ತಿ: ಏನಿದು ಹೊಸ ಕಾನೂನು? -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್












Click it and Unblock the Notifications