ನುಂಗಣ್ಣರನ್ನು ನುಸುಳಲು ಬಿಟ್ಟ ರಾಜ್ಯ ಸರ್ಕಾರ: ಹಿರೇಮಠ್
ಬೆಂಗಳೂರು, ಮೇ 10: ಕೆರೆ ಒತ್ತುವರಿ ಅಕ್ರಮಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಸ್ಪಷ್ಟ ಕಾನೂನು ತರುವುದರೊಂದಿಗೆ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ, ಮಾಹಿತಿ ಹಕ್ಕು ಕಾರ್ಯಕರ್ತ ಎಸ್ ಆರ್ ಹಿರೇಮಠ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಯನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಅಧಿಕಾರ ಇಲ್ಲದಿದ್ದಾಗ ಅಕ್ರಮದ ವಿರುದ್ಧ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗೇಕೆ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಪ್ರಶ್ನೆ ಮಾಡಿದರು.[ಕೆಜೆ ಜಾರ್ಜ್ ವಿರುದ್ಧ ಹಿರೇಮಠ್ ಕೊಟ್ಟ ದಾಖಲೆಗಳೇನು?]

ಜಿಲ್ಲಾಧಿಕಾರಿ ಶಂಕರ್ ದಿಟ್ಟ ಕ್ರಮ ತೆಗೆದುಕೊಂಡು ಕೆರೆ ಒತ್ತುವರಿ ತೆರವು ಮಾಡಿದ್ದರು. ಆದರೆ ಈಗ ಬಿಡಿಎನೇ ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದ್ದು ಅದನ್ನು ತೆರವು ಮಾಡಲು ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ? ಎಂದು ಕೇಳಿದರು.
ಕೆರೆ ಒತ್ತುವರಿ, ಬಿಡಿಎ ನಿವೇಶನ ಹಂಚಿಕೆ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಭೂಗಳ್ಳರನ್ನು ಶಿಕ್ಷೆಗೊಳಪಡಿಸಬೇಕು. ಹೈಕೋರ್ಟ್ ತೀರ್ಪಿನಂತೆ ಬಲಾಢ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.[ಡಿಕೆಶಿಗೆ ಜೈಲು ನಿಶ್ಚಿತ; ಗೌಡ್ರ ಕುಟುಂಬದಿಂದ್ಲೂ ಗಣಿ ಅಕ್ರಮ]
ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿ ಆಗಿದ್ದಾಗಿನಿಂದಲೂ ಭೂ ಒತ್ತುವರಿ ಬಗ್ಗೆ ತನಿಖೆ ಮಾಡಬೇಕಿದೆ. ಬೈರಸಂದ್ರ ಕೆರೆ ಒತ್ತುವರು ತೆರವು ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರ ಭೂಗಳ್ಳರ ಜತೆ ಜೋಡಿಸಿದೆ ಎಂದು ಆರೋಪಿಸಿದರು.












Click it and Unblock the Notifications