Puneeth Rajkumar: ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆಯಿಂದ ಉಳಿದ ಜೀವಗಳೆಷ್ಟು ಗೊತ್ತಾ?

ಬೆಂಗಳೂರು,ಜುಲೈ 03: ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಸಾಕಷ್ಟು ಯಶಸ್ವಿಯಾಗಿದ್ದು, ಹಲವು ಜನ ಜೀವ ಉಳಿದಿದೆ. ನಾಲ್ಕು ತಿಂಗಳಲ್ಲಿ ಅಮೂಲ್ಯ ಸಮಯದಲ್ಲಿ 10 ಜೀವ ರಕ್ಷಣೆ ಮಾಡುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.

ಹೌದು, ಹಠಾತ್‌ ಹೃದಯಾಘಾತದ ಸಂದರ್ಭದಲ್ಲಿ ಜನರ ಪ್ರಾಣ ಉಳಿಸಲು ರಾಜ್ಯ ಸರಕಾರ ಜಾರಿಗೆ ತಂದಿರುವ ಪುನೀತ್ ರಾಜ್‍ಕುಮಾರ್ ಹೃದಯಜ್ಯೋತಿ ಯೋಜನೆಯಡಿಯಲ್ಲಿ 11 ಸಾವಿರ ಜನರಲ್ಲಿ ಗಂಭೀರವಾಗಿರುವ ಸಮಸ್ಯೆ ಪತ್ತೆ ಮಾಡಲಾಗಿದ್ದು, 10 ಜೀವ ರಕ್ಷಣೆ ಉಳಿದಿದೆ.

Puneeth Rajkumar Hrudaya Jyothi Yojana Saved 10 People Life

ಪುನೀತ್‌ ರಾಜಕುಮಾರ್‌ ಹೃದಯ ಜ್ಯೋತಿ ಯೋಜನೆಯಡಿ ಮೊದಲನೇ ಹಂತದಲ್ಲಿ ಹಬ್‌ ಸ್ಪೋಕ್‌ ಮಾದರಿಯನ್ನು ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ 45 ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿತ್ತು. ಆದರೆ, ಮೊದಲ ಹಂತದ ಯೋಜನೆಯಲ್ಲಿ ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೇಸ್‌ ಇಂಜೆಕ್ಷನ್‌ ಲಭ್ಯವಿರಲಿಲ್ಲ. 2024ರ ಮಾರ್ಚ್​​ನಿಂದ ಈ ಚುಚ್ಚು ಮದ್ದು ಲಭ್ಯವಾಗುತ್ತಿದ್ದು, ಇದುವರೆಗೆ ಗೋಲ್ಡನ್​ ಅವರ್​ನಲ್ಲಿ 10 ಜನರಿಗೆ ಈ ಚುಚ್ಚು ಮದ್ದು ನೀಡಿ ಜೀವ ಉಳಿಸಲಾಗಿದೆ ಎಂದು ತಿಳಿದು ಬಂದಿದೆ.

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಹಠಾತ್ ಹೃದಯಘಾತ ಆಗದಂತೆ ಜೀವರಕ್ಷಕ ಚುಚ್ಚುಮದ್ದುಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೃದಯಾಘಾತ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟೆಪ್ಲೇಸ್ ಅನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಇದರ ಉಪಯೋಗ ಪಡೆಯವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಇಂದು ಹಠಾತ್ ಹೃದಯಘಾತಕ್ಕೆ ಒಳಗಾಗುವವರ ಜೀವ ಉಳಿಸುವಲ್ಲಿ ಸಹಕಾರಿಯಾಗಿದೆ. ನಮ್ಮ ವೈದ್ಯರು ಮನಸ್ಸು ಮಾಡಿದರೆ ರಾಜ್ಯದ ಬಡವರು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬಹುದು. ಬಿ.ಸಿ ರಾಯ್ ಅವರು ಪಶ್ಮಿಮ ಬಂಗಾಳ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ಅವರ ವೃತ್ತಿ ಮರೆತಿರಲಿಲ್ಲ.‌ ಅವರ ಜನ್ಮದಿನದಂದು ಆಚರಿಸುವ ವೈದ್ಯರ ದಿನಾಚರಣೆ ಎಲ್ಲ ವೈದ್ಯರಿಗೆ ಪ್ರೇರಣೆಯಾಗಲಿ. ಇನ್ನೂ ಹೆಚ್ಚು ಸೇವಾ ಮನೋಭಾವದೊಂದಿಗೆ ವದ್ಯರು ಜನರಿಗೆ ಗಣಮಟ್ಟದ ಆರೋಗ್ಯ ಸೇವೆ ಒದಗಿಸುವಂತಾಗಲಿ ಎಂದು ದಿನೇಶ್ ಗುಂಡೂರಾವ್ ಇದೇ ವೇಳೆ ಆಶಯ ವ್ಯಕ್ತಪಡಿಸಿದರು.

ಇನ್ನೂ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ಹಬ್‌ ಮತ್ತು ಸ್ಪೋಕ್‌ ಮಾದರಿಯಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, 71 ತಾಲೂಕು ಆಸ್ಪತ್ರೆಗಳೂ ಸೇರಿದಂತೆ ಒಟ್ಟು 86 ಸರಕಾರಿ ಆಸ್ಪತ್ರೆಗಳನ್ನು ಸ್ಪೋಕ್‌ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರಿದಂತೆ 11 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್‌ ಕೇಂದ್ರಗಳನ್ನಾಗಿ ರಚಿಸಲಾಗಿತ್ತು. ಮೊದಲ ಹಂತದ ಯೋಜನೆಯಲ್ಲಿ ಜೀವ ರಕ್ಷಕವಾಗಿರುವ ಟೆನೆಕ್ಟೆಪ್ಲೇಸ್‌ ಇಂಜೆಕ್ಷನ್‌ ನೀಡಿ 10 ಜನರ ಜೀವ ಉಳಿಸಲಾಗಿದೆ. ಈ ಚುಚ್ಚು ಮದ್ದಿನ ಸದ್ಯದ ಬೆಲೆ 25 ಸಾವಿರ ರೂ. ಆಗಿದ್ದು ಒಟ್ಟು 10 ಜನರನ್ನ ಕಾಪಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡ್ ರಾವ್ ಮಾಹಿತಿ ನೀಡಿದ್ದಾರೆ.

ನಮ್ಮ ಸರ್ಕಾರ ಬಂದ ಬಳಿಕ ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರುವ ಪ್ರಯತ್ನ ಮಾಡಿದ್ದೇವೆ. ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಯೇ ಸರಬರಾಜು ಆಗುತ್ತಿರಲಿಲ್ಲ. ಶೇ 30 ರಷ್ಟು ಮಾತ್ರ ಔಷಧಿ ನಿಗಮದಿಂದ ಔಷಧಿ ಪೂರೈಕೆಯಾಗುತ್ತಿತ್ತು. ಇದೀಗ ಸಾಕಷ್ಟು ಸುಧಾರಣೆ ತಂದಿದ್ದು, ಶೇ 80 ರಷ್ಟು ಔಷಧಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದೆ. ಮುಂಬರುವ ಎರಡು ತಿಂಗಳೊಳಗೆ ಸಂಪೂರ್ಣವಾಗಿ ಔಷಧಿ ಸರಬರಾಜನ್ನ ಸರಿಪಡಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವೈದ್ಯರಿಗೆ ಭರವಸೆ ನೀಡಿದರು.

ಕಳೆದ 30 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಪರಿಷ್ಕರಣೆ ಅಂತಿಮ ಹಂತದಲ್ಲಿದ್ದು, ಒಂದು ತಿಂಗಳ ಒಳಗಾಗಿ ಜಾರಿಗೆ ಬರಲಿದೆ. ವಿಶೇಷವಾಗಿ 8 ವರ್ಷಗಳ ಬಳಿಕ ಆರೋಗ್ಯ ಇಲಾಖೆ ವರ್ಗಾವಣೆಯನ್ನ ಪೂರ್ಣ ಪ್ರಮಾಣದಲ್ಲಿ ಕೌನ್ಸಿಲಿಂಗ್ ಮೂಲಕ ನಡೆಸಲಾಗುತ್ತಿದ್ದು, ಪಾರದರ್ಶಕ ಆಡಳಿತವನ್ನ ಇಲಾಖೆಯಲ್ಲಿ ತರಲಾಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+