KSRTC: 'ಶಕ್ತಿ' ಯೋಜನೆಯಿಂದ ಲಾಭವಾ-ನಷ್ಟವಾ: ರಾಮಲಿಂಗಾ ರೆಡ್ಡಿ ಕೊಟ್ರು ವಿವರಣೆ
ಕೊಪ್ಪಳ, ಸೆಪ್ಟಂಬರ್ 30: ಶಕ್ತಿ ಯೋಜನೆ ಜಾರಿಗೆ ತರುವ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಲ್ಲ ನಾಲ್ಕು ಸಾರ್ವಜನಿಕ ಸಾರಿಗೆ ನಿಗಮಗಳ ನಷ್ಟಕ್ಕೆ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿಯು ಸಾರಿಗೆ ಸಚಿವರ ವಿರುದ್ಧ ಲೇವಡಿ ಮಾಡಿತ್ತು. ಇದಕ್ಕೀಗ ಕೌಂಟರ್ ಕೊಟ್ಟಿರುವ ರಾಮಲಿಂಗಾ ರೆಡ್ಡಿಯವರು ಬಾಕಿ ಹಣ, ಹೊಸ ಬಸ್ ಖರೀದಿ, ಸಾಲದ ಲೆಕ್ಕಚಾರ ಬಿಚ್ಚಿಟ್ಟಿದ್ದಾರೆ.
ಕೊಪ್ಪಳ ನಗರದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕರ್ನಾಟಕ ಸಾರಿಗೆ ಸಂಸ್ಥೆ ನಿಗಮಗಳಿಗೆ ಸರ್ಕಾರದಿಂದ 7,625 ಕೋಟಿ ಹಣ ಬಾಕಿ ಉಳಿದ ಬಗ್ಗೆ ಬಿಜೆಪಿ ಪ್ರಸ್ತಾಪಿಸಿದೆ. ಬಿಜೆಪಿಯವರಗೆ ಮಾಡಲು ಕೆಲಸವಿಲ್ಲ. ಅವರಿಗೆ ಏನು ತಿಳುವಳಿಕೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

2023 ರಲ್ಲಿ ನಮಗೆ ಅಧಿಕಾರ 5,900 ಕೋಟಿ ಸಾಲ ಬಿಟ್ಟು ಹೋಗಿದ್ದು, ಇದೇ ಬಿಜೆಪಿ ನಾಯಕರು. ಬಿಎಂಟಿಸಿ ಹೊರತುಪಡಿಸಿ ಒಂದು ಬಸ್ ಸಹ ಖರೀದಿ ಮಾಡಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂಧ ಬಳಿಕ ನಮ್ಮ ಸರ್ಕಾರ ಬಂದ ಮೇಲೆ 6300 ಬಸ್ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ.
ಇಲಾಕೆ ವ್ಯಾಪ್ತಿಯಲ್ಲಿ 9000 ನೇಮಕಾತಿ
ಸದ್ಯ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ 9000 ನೇಮಕಾತಿ ನಡೆಸಲಾಗುತ್ತಿದೆ. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಇದೆಲ್ಲದರ ಬಗ್ಗೆ ಬಿಜೆಪಿಯಿಂದ ಹೇಳಿಸಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನೂ ಕಾರ್ಮಿಕರಿಗೆ ಗ್ರ್ಯಾಚುಟಿ ಹಣ ಬಾಕಿ ವಿಚಾರ, ಕಾರ್ಮಿಕರಿಗೆ ನಿಡಬೇಕಾಗಿದ್ದ ಹಣ ಬಾಕಿ ಇದೆ. ಅದನ್ನು ಬಿಟ್ಟು ಹೋಗಿದ್ದು ಬಿಜೆಪಿಯವರು. ಇಂದು ಯಾರೆಲ್ಲ ಆರೋಪ ಮಾಡುತ್ತಿದ್ದಾರೆ, ಅವರೆಲ್ಲ ಆರೋಪಿಗಳು ಎಂದು ಗುಡುಗಿದ ರಾಮಲಿಂಗಾ ರೆಡ್ಡಿಯವರು, 1600 ಕೋಟಿ ಶಕ್ತಿ ಹಣ ಬರಬೇಕು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡುವುದಾಗಿ ತಿಳಿಸಿದ್ದಾರೆ.
ಕೇಂದ್ರ ನಾಯಕರ ಜೊತೆಗೂ ಮಾತನಾಡಿದ್ದೇನೆ. ಕೇಂದ್ರ ನಾಯಕರು ಬಂದಾಗ ಮುಂದೆ ನಿಂತು ಮಾತನಾಡದ ಬಿಜೆಪಿಯವರು, ಬರೀ ಟ್ವೀಟ್ ಮಾಡುತ್ತಾ ಕೂತಿದ್ದಾರೆ. ಅದನ್ನು ಬಿಟ್ಟು ಎದುರು ಬಂದು ಚರ್ಚೆ ಮಾಡಲಿ. ಶಕ್ತಿ ಯೋಜನೆಯಿಂದ ನಮ್ಮ ಇಲಾಖೆ ಆದಾಯ ಹೆಚ್ಚಾಗಿದೆ. ಬಿಜೆಪಿಯವರ ರೀತಿ ನಾವು ನಕಲಿ ಮಾತುಗಳನ್ನು ಆಡುವುದಿಲ್ಲ ಎಂದು ಟಾಂಗ್ ನೀಡಿದರು.
ಬಿಜೆಪಿ ಆರೋಪವೇನು?
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಕ್ತಿ ಯೋಜನೆ ಜಾರಿ ಮಾಡಿ ಆರ್ಥಿಕ ದಿವಾಳಿ ಆಗಿದೆ. ಕರ್ನಾಟಕ ಸಾರಿಗೆ ಇಲಾಖೆ ದಿವಾಳಿ ಮಾಡಿದೆ. 'ಶಕ್ತಿ ಯೋಜನೆ'ಯಿಂದ ನಷ್ಟವಾಗಿದೆ. ಹೀಗಿದ್ದರು, ಲಾಭವಾಗಿದೆ ಎಂದು ರಾಮಲಿಂಗಾ ರೆಡ್ಡಿಯವರು ಪುಂಗುತ್ತಿದ್ದಾರೆ. ಲಾಭವಾಗಿದ್ದರೆ, ನಿಗಮಗಳಿಗೆ ನೀಡುವ ಹಣ ನೀಡದೇ ಬಾಕಿ ಉಳಿಸಿಕೊಂಡಿರುವುದೇಕೆ ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿತ್ತು..
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ ಯೋಜನೆ 'ಶಕ್ತಿಹೀನ'ವಾಗಿದೆ ಎಂದು NWKRTC, KSRTC, BMTC, ಮತ್ತು KKRTC ಕುರಿತು ಬಿಜೆಪಿ ಮಾತನಾಡಿತ್ತು. ಜೊತೆಗೆ ಸಾರಿಗೆ ನೌಕರರಿಗೆ ತುಟ್ಟಿಭತ್ಯೆ ಬಾಕಿ, ವೇತನ ಸೇರಿದಂತೆ ಹಲವು ಆರ್ಥಿಕ ಸೌಲಭ್ಯ ನೀಡದೇ ಬಾಕಿ ಉಳಿಸಿಕೊಂಡಿದ್ದೇಕೆ ಎಂದು ಪ್ರಶ್ನಿಸಿತ್ತು. ಇಂದು ಅದಕ್ಕೆಲ್ಲ ವಿವರಣೆ ನೀಡುವ ಮೂಲಕ ಸಚಿವರು ತಿರುಗೇಟು ನೀಡಿದರು..












Click it and Unblock the Notifications