ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಐ ನೇಮಕಾತಿ ಅಕ್ರಮ: ಬೆಂಗಳೂರಲ್ಲಿ ಮತ್ತಿಬ್ಬರು PSI ಅಭ್ಯರ್ಥಿಗಳು ಲಾಕ್!

|
Google Oneindia Kannada News

ಬೆಂಗಳೂರು, ಮೇ 06: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧ ಬೆಂಗಳೂರಿನ ಕೇಂದ್ರಗಳಲ್ಲಿ ನಡೆದಿರುವ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮತ್ತಿಬ್ಬರು ಅಭ್ಯರ್ಥಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಮಾಡಿದ್ದ ಸಿಐಡಿ ಪೊಲೀಸರು 92 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದರು. ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಕಂಡು ಬಂದ ಬೆನ್ನಲ್ಲೇ 12 ಆರೋಪಿಗಳನ್ನು ಬಂಧಿಸಿದ್ದರು. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಇದೀಗ ಮಧು ಹಾಗೂ ಯಶವಂತಗೌಡ ಎಂಬ ಇಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮ ಸಂಬಂಧ ಈವರೆಗೂ 16 ಅಭ್ಯರ್ಥಿಗಳನ್ನು ಬಂಧಿಸಿದಂತಾಗಿದೆ.

ಹದಿನಾಲ್ಕನೇ ಆರೋಪಿ ಆಗಿರುವ ಮಧು

ಹದಿನಾಲ್ಕನೇ ಆರೋಪಿ ಆಗಿರುವ ಮಧು

ಹದಿನಾಲ್ಕನೇ ಆರೋಪಿ ಆಗಿರುವ ಮಧು, (ರೋಲ್ ನಂಬರ್ 9245556) ಮೊದಲ ಪತ್ರಿಕೆಯಲ್ಲಿ 17 ಅಂಕ ಗಳಿಸಿದ್ದ. ಪೇಪರ್ 2 ರಲ್ಲಿ 129. ಒಟ್ಟಾರೆ ಶೇ 75 ಅಂಕ ಗಳಿಸಿ ಪಿಎಸ್ಐ ಆಗಿ ಆಯ್ಕೆಯಾಗಿದ್ದ. ಅದೇ ರೀತಿ ಯಶವಂತಗೌಡ ( ರೋಲ್ ನಂಬರ್: 9244198 ) ಓಎಂಆರ್ ಶೀಟ್ ನಲ್ಲಿ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿತ್ತು. ಇಬ್ಬರು ಆರೋಪಿಗಳು ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಇದೀಗ ಇಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರು ಮಂದಿ ಆರೋಪಿತ ಅಭ್ಯರ್ಥಿಗಳಿಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದುವರೆಗೆ ಬಂಧಿತ ಆರೋಪಿಗಳ ಹೆಸರುಗಳು:

ಇದುವರೆಗೆ ಬಂಧಿತ ಆರೋಪಿಗಳ ಹೆಸರುಗಳು:

1) ರಘುವೀರ್ ಹೆಚ್ ಯು

2) ಚೇತನ್ ಕುಮಾರ್.ಎಂ ಸಿ .

3) ವೆಂಕಟೇಶ್ ಗೌಡ ಸಿ,

4) ಮಮತೇಶ್ ಗೌಡ

5) ಮಧು ಆರ್

6) ದಿಲೀಪ್ ಕುಮಾರ್ ಸಿ.ಕೆ.

7) ಪ್ರವೀಣ್ ಕುಮಾರ್‌ ಹೆಚ್‌.ಆರ್

8) ಸೂರ್ಯನಾರಾಯಣ

9) ನಾಗರಾಜ ಸಿ.ಎಂ

10) ಗಜೇಂದ್ರ

11) ಯಶವಂತ್ ದೀಪ್,

12) ಮನುಕುಮಾರ್

13) ರಾಘವೇಂದ್ರ ಜಿ ಸಿ.

14) ನಾಗೇಶ್ ಗೌಡ

15 ) ಮಧು, ಆರ್

16) ಯಶವಂತ ಗೌಡ

ಮತ್ತಷ್ಟು ಅಕ್ರಮ ಬಯಲು:

ಮತ್ತಷ್ಟು ಅಕ್ರಮ ಬಯಲು:

ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ಇದೀಗ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಸಹಕರಿಸಿದ ಪರೀಕ್ಷೆ ಸಿಬ್ಬಂದಿ, ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಲು ಸಿಐಡಿ ಪೊಲೀಸರು ತಯಾರಿ ನಡೆಸಿದ್ದಾರೆ.

ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ

ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ

ಅಕ್ರಮ ಎಸಗುವ ಸಂಬಂಧ ಮೊದಲೇ ಫಿಕ್ಸ್ ಮಾಡಿದ್ದು, ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ. ಹಣ ಕೊಟ್ಟ ಅಭ್ಯರ್ಥಿಗಳನ್ನು ಅದೇ ಪರೀಕ್ಷಾ ಕೇಂದ್ರಗಳಿಗೆ ನಿಯೋಜನೆ ಮಾಡಿರುವುದು ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳೇ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಎರಡು ಪ್ರತ್ಯೇಕ ತಂಡ ವಿಚಾರಣೆ ನಡೆಸುತ್ತಿವೆ.

Recommended Video

ಏಟು-ಎದುರೇಟು: ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ನುಡಿದ ಬಿಜೆಪಿ | Oneindia Kannada

English summary
Karnataka psi recruitment scam: CID police arrests two psi candidates in connection with Bengaluru exam centers scam know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X