ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧು, ಹರೀಶ್ ಬಾಬು ಹಿಡಿದ ಪೊಲೀಸರಿಗೆ 10 ಲಕ್ಷ ಬಹುಮಾನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20 : ದೊಡ್ಡಬಳ್ಳಾಪುರ ಠಾಣೆ ಪಿಎಸ್ಐ ಜಗದೀಶ್ ಅವರನ್ನು ಕೊಂದ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಕರ್ನಾಟಕ ಸರ್ಕಾರ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿದೆ. ಮಂಗಳವಾರ ರಾತ್ರಿ ಆರೋಪಿಗಳನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ.

ನಾಗ್ಪುರ ಕ್ರೈಂ ಬ್ರಾಂಚ್‌, ಭಯೋತ್ಪಾದಕ ನಿಗ್ರಹ ದಳ ಹಾಗೂ ರೈಲ್ವೆ ಪೊಲೀಸ್‌ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಜಗದೀಶ್ ಹತ್ಯೆ ಮಾಡಿದ್ದ ಹರೀಶ್ ಬಾಬು (48) ಮತ್ತು ಮಧು (26) ಅವರನ್ನು ಸೋಮವಾರ ಸಂಜೆ ನಾಗ್ಪುರ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. [ನಾಗ್ಪುರದಲ್ಲಿ ಮಧು, ಹರೀಶ್ ಬಂಧನ]

siddaramaiah

ಮಂಗಳವಾರ ಸಚಿವ ಸಂಪುಟ ಸಭೆಗೂ ಮುನ್ನಾ ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕೆಲವೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಚರಣೆಯಲ್ಲಿ ಪಾಲ್ಗೊಂಡ ಪೊಲೀಸರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ' ಘೋಷಿಸಿದರು. [ಪಿಎಸ್ ಐ ಜಗದೀಶ್ ಪರಿಚಯ]

ನಾಗ್ಪುರ ಮತ್ತು ಕರ್ನಾಟಕದ ಪೊಲೀಸರು ಜಂಟಿಯಾಗಿ ಈ ಕಾರ್ಯಚರಣೆ ನಡೆಸಿರುವುದರಿಂದ, ನಾಗ್ಪುರ ಪೊಲೀಸರಿಗೆ 5 ಲಕ್ಷ ಮತ್ತು ಕರ್ನಾಟಕದ ಪೊಲೀಸರಿಗೆ 5 ಲಕ್ಷ ಬಹುಮಾನದ ಹಣವನ್ನು ಹಂಚಲಾಗುತ್ತದೆ. ಮಧು ಮತ್ತು ಹರೀಶ್ ಬಾಬು ಅವರನ್ನು ಕರೆತರಲು ಬೆಂಗಳೂರು ಪೊಲೀಸರು ನಾಗ್ಪುರಕ್ಕೆ ತೆರಳಿದ್ದಾರೆ. [ಜಗದೀಶ್ ಹತ್ಯೆ ನಡೆದಿದ್ದು ಹೇಗೆ?]

ಸದ್ಯ, ಆರೋಪಿಗಳು ನಾಗ್ಪುರದ ಸದರ್ ಪೊಲೀಸ್ ಠಾಣೆಯಲ್ಲಿದ್ದು, ಅವರನ್ನು ಕೆಲವೇ ಗಂಟೆಗಳಲ್ಲಿ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ನಂತರ ಕರ್ನಾಟಕದ ಪೊಲೀಸರು ಇಬ್ಬರನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ಬಾನೋತ್, ನೆಲಮಂಗಲ ಇನ್ಸ್‌ಪೆಕ್ಟರ್ ಪರಮೇಶ್ವರ್ ನೇತೃತ್ವದ ರಾಜ್ಯದ ಪೊಲೀಸರ ತಂಡ ನಾಗ್ಪುರಕ್ಕೆ ತೆರಳಿದೆ.

English summary
Karnataka government on Tuesday announced Rs 10 lakh cash reward to the police who arrested Harish Babu and Madhu killers of Doddaballapur police station sub inspector Jagadeesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X