ರಾತ್ರೋರಾತ್ರಿ ಟಿಪ್ಪು ಚೌಕ್ ನಿರ್ಮಾಣ: ಗುಂಪು ಘರ್ಷಣೆ

Posted By: Ananthanag
Subscribe to Oneindia Kannada

ಬೀದರ್, ನವೆಂಬರ್,01: ರಾತ್ರೋ ರಾತ್ರಿ ಟಿಪ್ಪು ಸುಲ್ತಾನ್ ಚೌಕ್‍ವೊಂದನ್ನು ನಿರ್ಮಾಣ ಮಾಡಿರುವ ಘಟನೆ ಬೀದರ್ ತಾಲೂಕಿನ ಮುಖ್‍ಬಲ್ ಗ್ರಾಮದಲ್ಲಿ ನಡೆದಿದೆ.

ಖಾಸಗಿ ಜಾಗದಲ್ಲಿ ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ಟಿಪ್ಪುಸುಲ್ತಾನ್ ಚೌಕ್ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಇದನ್ನು ಕೇಳಲು ಹೋದವರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ ನಡೆದಿದೆ.

tipu sultan

ಟಿಪ್ಪು ಚೌಕ್ ಕಟ್ಟಿದವರು ಮತ್ತು ಕೇಳಲು ಹೋದವರ ಗುಂಪಿನ ನಡುವೆ ಪರಸ್ಪರ ಗುಂಪು ಘರ್ಷಣೆ ನಡೆದಿದೆ. ಅಲ್ಲದೆ ಕೆಲವರಿಗೆ ಗಾಯಗಳೂ ಆಗಿವೆ.

ಸಂಘಟನೆಗಳೂ ಸಹ ಇದರಲ್ಲಿ ಪಾಲ್ಗೊಂಡಿದ್ದು, ನಂತರ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಬಿಗಿ ಭದ್ರತೆ ಒದಿಗಿಸದ್ದಾರೆ. ಹಾಗೂ ನಿರ್ಮಾಣ ಮಾಡಲಾಗಿದ್ದ ಚೌಕನ್ನು ಪೊಲೀಸ್ ಭದ್ರತೆಯಲ್ಲಿ ಕಿತ್ತು ಹಾಕಲಾಗಿದೆ.

ಮುಖ್‍ಬಲ್ ಗ್ರಾಮದಲ್ಲಿ ರಾಜ್ಯೋತ್ಸವ ಸಡಗರದ ವಾತಾವರಣ ಕಡಿಗೇಡಿಗಳಿಂದ ನಾಶವಾಗಿದೆ.

ಕನ್ನಡ ರಾಜ್ಯೋತ್ಸವ ಸಂಭ್ರಮದ ನಡುವೆ ಟಿಪ್ಪು ಜಯಂತಿಯ ಆಚರಣೆ ಬಗ್ಗೆ ಎಲ್ಲೆಯು ಚರ್ಚೆ, ಪರಸ್ಪರ ವಾದ ವಿವಾದ ನಡೆಯುತ್ತಿದೆ.

ಇಂದು ಸಚಿವ ಅನಂತಕುಮಾರ್ ಟಿಪ್ಪು ಜಯಂತಿ ಅಚರಣೆಯಲ್ಲಿ ಮೆರವಣಿಗೆ ಅವಶ್ಯಕತೆಯಿಲ್ಲ. ತಮ್ಮ ಸ್ಥಳದಲ್ಲಿಯೇ ಸಾಂಕೇತಿಕವಾಗಿ ಆಚರಿಸತಕ್ಕದ್ದು ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tipu chowk construction leads to conflict between two groups in Mkhbul village, Bidar district on Tuesday.
Please Wait while comments are loading...